ಬೆಂಗಳೂರು, ಏ.3,ಮನೆಯಲ್ಲೇ ಕೂತು ಕೋವಿಡ್-19 ಪರೀಕ್ಷೆ ಮಾಡಿಕೊಳ್ಳುವ ದೇಶದ ಮೊದಲ ಟೆಸ್ಟಿಂಗ್ ಕಿಟ್ ಅನ್ನು ಬಯೋಟೆಕ್ ಸಂಸ್ಥೆಯಾದ ‘ಬಯೋನ್’ (Bione) ಅಭಿವೃದ್ಧಿ ಪಡಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಕೊರೊನಾ ವೈರಸ್ ಪರೀಕ್ಷೆ ಮಾಡುವ ಸೌಲಭ್ಯಗಳು ಪ್ರಸ್ತುತ ಕಡಿಮೆ ಇರುವ ಕಾರಣದಿಂದಾಗಿ ಜಗತ್ತಿನಾದ್ಯಂತ ವಿಶೇಷವಾಗಿ ಇಟಲಿ, ಸ್ಪೇನ್ ಮತ್ತು ಯುಎಸ್ ಗಳಿಂದ ಈ ನೂತನ ಟೆಸ್ಟಿಂಗ್ ಕಿಟ್ ಗೆ ಭಾರೀ ಬೇಡಿಕೆ ಬರುತ್ತಿದೆ. ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವ ಉದ್ದೇಶದಿಂದ ಹೊರಗಡೆ ಹೋಗುತ್ತಿದ್ದವರು ಈಗ ಹೊಗಡೆ ಹೋಗುವ ಅಗತ್ಯವಿಲ್ಲ. ತಾವೇ ಮನೆಯಲ್ಲಿ ಕೂತು ಈ ಸಾಧನದ ಸಹಾಯದಿಂದ ಟೆಸ್ಟ್ ಮಾಡಿಕೊಳ್ಳಬಹುದಾಗಿದೆ.
ಒಂದು ವೇಳೆ ಟೆಸ್ಟ್ ನಿಂದ ಪಾಸಿಟಿವ್ ಎಂದು ಗೊತ್ತಾದರೆ ತಮ್ಮ ಮನೆ ಸದಸ್ಯರಿಂದ ಅಂತರೆ ಕಾಯ್ದುಗೊಂಡು ಕೊರೊನಾ ಸಹಾಯವಾಣಿಗೆ ಮಾಹಿತಿ ನೀಡಬೇಕಾಗುತ್ತದೆ. ಇದರ ಪರಿಣಾಮ ಸೋಂಕು ಮತ್ತಷ್ಟು ಜನರಲ್ಲಿ ಹರಡುವುದನ್ನು ತಡೆಗಟ್ಟಬಹುದಾಗಿದೆ. ಜಾಗತಿಕ ಸರಬರಾಜಿನ ಆಧಾರಿದ ಮೇಲೆ ಈ ಟೆಸ್ಟ್ ಕಿಟ್ ನ ಬೆಲೆಯನ್ನು ರೂ 2000 ದಿಂದ ರೂ 3000 ನಿಗದಿ ಪಡಿಸಲಾಗಿದೆ. ಆನ್ಲೈನ್ ಮೂಲಕ ನಿಮ್ಮ ಬೆರಳ ತುದಿಯಲ್ಲಿ bione.in ವೆಬ್ ಸೈಟ್ ಮೂಲಕ ಈ ಸಾಧನವನ್ನು ಖರೀದಿಸಬಹುದಾಗಿದೆ. ಆರ್ಡರ್ ಮಾಡಿದ 2-3 ದಿನಗಳ ಒಳಗೆ ಈ ಟೆಸ್ಟಿಂಗ್ ಕಿಟ್ ಅನ್ನು ಗ್ರಾಹಕರು ಪಡೆದುಕೊಳ್ಳಬಹುದಾಗಿದೆ. ಕೋವಿಡ್-19 ಸ್ಕ್ರೀನಿಂಗ್ ಟೆಸ್ಟ್ ಕಿಟ್ ಒಂದು IgG&IgM ಆಧಾರಿತ ಸಾಧನವಾಗಿದ್ದು, 5-10 ನಿಮಿಷದಲ್ಲಿ ಫಲಿತಾಂಶ ದೊರೆಯುತ್ತದೆ. ಕಿಟ್ ಸ್ವೀಕರಿಸಿದ ನಂತರ ಬಳಕೆದಾರರು ತಮ್ಮ ಬೆರಳನ್ನು ಆಲ್ಕೋಹಾಲ್ ಸ್ವ್ಯಾಬ್ನಿಂದ ಸ್ವಚ್ಛಗೊಳಿಸಬೇಕು ಮತ್ತು ಬೆರಳು-ಚುಚ್ಚುವಿಕೆಗೆ ಒದಗಿಸಲಾದ ಲ್ಯಾನ್ಸೆಟ್ ಅನ್ನು ಬಳಸಬೇಕಾಗುತ್ತದೆ. ಹೀಗೆ ಪಡೆದ ರಕ್ತದ ಮಾದರಿಯ ಫಲಿತಾಂಶಗಳನ್ನು ಕಾರ್ಟ್ರಿಡ್ಜ್ 5-10 ನಿಮಿಷದಲ್ಲಿ ತಿಳಿಸುತ್ತದೆ.
ಎಲ್ಲಾ ವಿವಿಧ ಕ್ವಾಲೀಟಿ ಚೆಕ್ ಮಾಡಿದ ನಂತರವೇ ಈ ಸಾಧವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸ ಲಾಗಿದೆ. ಐಸಿಎಂಆರ್ ಅನುಮೋದನೆ ಈಗಾಗಲೇ ದೊರೆತಿದ್ದು ಯುಎಸ್ಎಫ್ಡಿಎ ಪಾಲುದಾರರಿಂದ ಅನುಮೋದನೆಗಾಗಿ ಪ್ರಯತ್ನಿಸುತ್ತಿದೆ. ಸಂಸ್ಥೆಯು ಪ್ರತಿ ವಾರ 20000 ಕಿಟ್ ಗಳನ್ನು ಪೂರೈಸುವ ಸಾಮರ್ಥ್ಯವನ್ನು ಹೊಂದಿದೆ. “ಈ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ನಾವು ಟ್ರ್ಯಾಕ್ ಮಾಡುತ್ತಿದ್ದೆವು. ಈ ಸಾಧನವನ್ನು ಅಭಿವೃದ್ಧಿ ಪಡಿಸುವಲ್ಲಿ ನಾವು ಸಾಕಷ್ಟು ಸಮಯ ಮತ್ತು ಸಂಪನ್ಮೂಲದ ಬಳಕೆ ಮಾಡಿದ್ದೇವೆ. ಓ ಹೋಮ್ ಸ್ಕ್ರೀನಿಂಗ್ ಟೆಸ್ಟ್ ಕಿಟ್ ಸಾಧನಾ ಅಭೂತಪೂರ್ವ ಕಾಲದಲ್ಲಿ ಅಭಿವೃದ್ಧಿ ಪಡಿಸಿರುವುದು ಒಳ್ಳೆಯ ಬೆಳವಣಿಗೆ. ಕೋವಿಡ್-19 ರ ವಿರುದ್ಧ ಹೋರಾಡಲು ಭಾರತಕ್ಕೆ ಸಹಾಯ ಮಾಡಲು ಇದರ ಅಭಿವೃದ್ಧಿ. ಕೊರೊನಾ ವೈರಸ್ ವಿರುದ್ಧ ಕ್ರಾಂತಿಯನ್ನು ಮುನ್ನಡೆಸುವಲ್ಲಿ ಸರ್ಕಾರದ ಬೆಂಬಲ ಪ್ರಮುಖವಾದುದು ಎಂದು ನಾವು ಬಲವಾಗಿ ನಂಬುತ್ತೇವೆ” ಎಂದು ಬಯೋನ್ ಸಂಸ್ಥೆಯ ಸಿಇಒ ಡಾ ಸುರೇಂದ್ರ ಚಿಕಾರಾ ತಿಳಿಸಿದ್ದಾರೆ.