ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಪರ್ವ ಆರಂಭ: ಪೂಜಾರ

ಲೋಕದರ್ಶನವರದಿ

ರಾಣೇಬೆನ್ನೂರು10: ಈ ಕ್ಷೇತ್ರದ ಅಭಿವೃದ್ದಿ ಪರ್ವ ಈಗಾಗಲೇ ಆರಂಭಗೊಂಡಿದೆ, ಕ್ಷೇತ್ರಕ್ಕೆ ಬೇಕಾಗಿರುವ ವಿವಿಧ   ಕಾರ್ಯಗಳ ಬಗ್ಗೆ ಹಾಗೂ ಅಗತ್ಯವಿರುವ  ಅನುದಾನದ ಕುರಿತು ಅಧಿಕಾರಿಗಳಿಂದ ವಿವರವಾದ ಮಾಹಿತಿ ಪಡೆದಿದ್ದು, ಮುಂಬರುವ ಬಜೆಟ್ನಲ್ಲಿ ಹೆಚ್ಚಿನ ಅನುದಾನವನ್ನು ಈ ಕ್ಷೇತ್ರಕ್ಕೆ ತರಲು ಪ್ರಾಮಾಣಿಕವಾದ ಪ್ರಯತ್ನ ಮಾಡುವುದಾಗಿ ಶಾಸಕ ಅರುಣಕುಮಾರ ಪೂಜಾರ ಭರವಸೆ ನೀಡಿದರು.

    ಸೋಮವಾರ ತಾಲೂಕಿನ ಎಲಬಡಗಿ, ಹಾರೋಗೊಪ್ಪ, ದಂಡಗಿಹಳ್ಳಿ ಮತ್ತು ನೂಕಾಪೂರ ಗ್ರಾಮದ ಬಳಿ ಹಳ್ಳಗಳಿಗೆ ತಲಾ 50ಲಕ್ಷ ರೂ. ವೆಚ್ಚದಲ್ಲಿ ಬಾಂದಾರ ನಿಮರ್ಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. 

  ಬಜೆಟನಲ್ಲಿ ಈ ಕ್ಷೇತ್ರಕ್ಕೆ ಅಗತ್ಯವಿರುವ ಹೆಚ್ಚಿನ ಅನುದಾನ ಪಡೆಯಲು ಈಗಾಗಲೇ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದ್ದು, ಕ್ಷೇತ್ರದ ಅಭಿವೃದ್ದಿಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಸಹಕಾರ ನೀಡಲಿದ್ದಾರೆ ಎಂದರು.

 ಮುಖ್ಯಮಂತ್ರಿ ಯಡಿಯೂರಪ್ಪನವರು ದೀನ ದಲಿತರ, ಬಡವರ, ರೈತರ, ಹಿಂದುಳಿದವರ ಏಳ್ಗೆಗೆ ಶ್ರಮಿಸುತ್ತಿದ್ದು, ರೈತರಿಗಾಗಿಯೇ ವಿಶೇಷ ಅನುದಾನ ಬಿಡುಗಡೆ ಮಾಡುವ ಸಂಭವವಿದೆ,  ಇವರುಗ ಬಗ್ಗೆ ಮುಖ್ಯಮಂತ್ರಿಗಳು     ಹೆಚ್ಚಿನ ಕಾಳಗಿ ವಹಿಸಿದ್ದು, ಮುಂಬರುವ ಬಜೆಟನಲ್ಲಿ ಅನುದಾನ ದೊರೆಯಲಿದೆ, ಅದಕ್ಕಾಗಿ ಯಡಿಯೂರಪ್ಪನವರು ಈಗಾಗಲೇ ಬಜೆಟ್ ಮಂಡಿಸಲು ಉತ್ಸುಕರಾಗಿದ್ದಾರೆ ಎಂದರು.

   ಜಿಪಂ ಪ್ರಭಾರಿ ಅಧ್ಯಕ್ಷೆ  ಗಿರಿಜಮ್ಮ ಬ್ಯಾಲದಹಳ್ಳಿ, ಜಿಪಂ ಮಾಜಿ ಅಧ್ಯಕ್ಷ ಮಂಜುನಾಥ ಓಲೇಕಾರ, ಸಂತೋಷ ಕುಮಾರ ಪಾಟೀಲ, ಬಸವರಾಜ ಕೇಲಗಾರ, ಸುರೇಶ ಬಾನುವಳ್ಳಿ, ಜಯಣ್ಣ ನಿಟ್ಟೂರ, ರಂಗಣ್ಣ ಆಡಿನವರ, ಪ್ರೇಮಾ ಬಡಿಗೇರ, ಶಿವರಾಜ್, ಹಾಲನಗೌಡ ಹಿಂದಿನಮನೆ, ರೇವಣೆಪ್ಪ ಟಿಆರ್ ಸೇರಿದಂತೆ ಗ್ರಾಪಂ ಸದಸ್ಯರುಗಳು, ಗ್ರಾಮದ ಮುಖಂಡರುಗಳು, ಸರಕಾರಿ ಅಧಿಕಾರಿಗಳು  ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.