2024 ರ ವೇಳೆಗೆ ಉಡಾನ್ ಯೋಜನೆಯಡಿ 100 ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳ ಅಭಿವೃದ್ಧಿ

udan

ನವದೆಹಲಿ, ಫೆ 1- ಉಡಾನ್ ಯೋಜನೆಗೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ 2024 ರ ವೇಳೆಗೆ ಹೆಚ್ಚುವರಿ 100 ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸುವುದಾಗಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಶನಿವಾರ ಪ್ರಕಟಿಸಿದ್ದಾರೆ.

ಜಾಗತಿಕ ಸರಾಸರಿಗೆ ಹೋಲಿಸಿದರೆ ಭಾರತದಲ್ಲಿ ವಾಯು ಸಂಚಾರ ವೇಗವಾಗಿ ಬೆಳೆಯುತ್ತಿದೆ.  2024ರ ವೇಳೆಗೆ ವಿಮಾನಗಳ ಸಂಖ್ಯೆ ಸದ್ಯದ 600 ರಿಂದ 1200ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಸಚಿವರು 2020-21ರ ಬಜೆಟ್ ಮಂಡಿಸಿ ತಿಳಿಸಿದ್ದಾರೆ. 

ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಾರ್ಗಗಳಲ್ಲಿ ನಾಗರಿಕ ವಿಮಾನಯಾನ ಸಚಿವಾಲಯ ‘ಕೃಷಿ ಉಡಾನ್’ ಯೋಜನೆ ಆರಂಭಿಸಲಿದೆ. ಇದು ವಿಶೇಷವಾಗಿ ಈಶಾನ್ಯ ಭಾಗದಲ್ಲಿ ವಾಯು ಸಂಪರ್ಕ ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ. 

ಬಂದರುಗಳ ಕಾರ್ಯಕ್ಷಮತೆ ಅಗತ್ಯತೆ ಮತ್ತು ಕಾರ್ಯಕ್ಷಮತೆ ಸುಧಾರಣೆಗೆ ತಂತ್ರಜ್ಞಾನದ ಬಳಕೆಯನ್ನು ಪ್ರತಿಪಾದಿಸಿದ ಸೀತಾರಾಮನ್, ನದಿ ತೀರದಲ್ಲಿ ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸುವ ‘ಆರ್ಥ್ ಗಂಗಾ’ ಯೋಜನೆಯನ್ನು ಆರಂಭಿಸಲಾಗುವುದು.  ದೇಶದಲ್ಲಿ ಸಾರಿಗೆ ಮೂಲಸೌಕರ್ಯ ಹೆಚ್ಚಿಸಲು ಕೇಂದ್ರ ಬಜೆಟ್ ಸುಮಾರು 1.70 ಲಕ್ಷ ಕೋಟಿ ರೂ.ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಮೀಸಲಿಟ್ಟಿದೆ. ಇದಕ್ಕಾಗಿ 2020-21ರಲ್ಲಿ 22,000 ಕೋಟಿ ರೂ. ಒದಗಿಸಲಿದೆ. ಮುಂದಿನ ಮೂರು ವರ್ಷಗಳಲ್ಲಿ ಸಾಂಪ್ರದಾಯಿಕ ವಿದ್ಯುತ್ ಮೀಟರ್ ಗಳಿಗೆ ಬದಲಾಗಿ ಪ್ರಿಪೇಯ್ಡ್ ‘ಸ್ಮಾರ್ಟ್ ಮೀಟರ್’ ಕಡ್ಡಾಯ ಮಾಡಲಾಗುವುದು. ರಾಷ್ಟ್ರೀಯ ಅನಿಲ ಗ್ರಿಡ್ ಅನ್ನು ಸದ್ಯ, 16,200 ಕಿ.ಮೀ.ನಿಂದ 27,000 ಕಿ.ಮೀ.ಗೆ ವಿಸ್ತರಿಸಲಾಗುವುದು ಎಂದು ಹೇಳಿದ್ದಾರೆ.