ಮಠ ಮಾನ್ಯಗಳ ಅಭಿವೃದ್ಧಿ ಬಹಳ ಮುಖ್ಯ: ಆನಂದ ನ್ಯಾಮಗೌಡ
ಜಮಖಂಡಿ 13: ಸಮಾಜ ಒಳಿತಿಗಾಗಿ ಯಾವ ವ್ಯಕ್ತಿಯು ದುಡಿಯುತ್ತಾನೆ ಆತನು ಅಜರಾಮರವಾಗಿ ನೆನೆಪಿಸಿಕೊಂಡು ಪೂಜಿಸಿವ ವ್ಯಕ್ತಿ ಆಗುತ್ತಾನೆ. ಅದರಂತೆ ರುದ್ರಾವಧೂತರು ಹಾಗೂ ಅಣ್ಣ ಬಸವಣ್ಣನವರು 12 ಶತಮಾನದಲ್ಲಿ ಸಮಾನತೆಗಾಗಿ ಶ್ರಮಿಸಿದ ಮಹಾನ ವ್ಯಕ್ತಿಗಳು ಇಂದಿಗೂ ಅಜರಾಮರವಾಗಿದ್ದಾರೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.
ನಗರದ ರುದ್ರಸ್ವಾಮಿ ಪೇಠದಲ್ಲಿ ನಡೆದ ರುದ್ರಾವಧೂತರ 94ನೇ ಪುಣ್ಯಾರಾಧನೆ ಹಾಗೂ 39ನೇ ವೇದಾಂತ ಪರಿಷತ್ ಕಾರ್ಯಕ್ರಮದಲ್ಲಿ ಬೃಹತ್ ಗಾತ್ರದ ಮಂಟಪವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ತಂದೆ ಅವರ ಕೊಡುಗೆ ಶ್ರೀಮಠಕ್ಕೆ ಅಪಾರವಾಗಿದೆ. ರುದ್ರಾವಧೂತರ ಮಠ ಶಾಶ್ವತ ಮಂಟಪ ನಿರ್ಮಾಣಕ್ಕೆ ಮನವಿಯನ್ನು ಸಲ್ಲಿಸಿದರು. ಅದಕ್ಕೆ ಸ್ಪಂದಿಸಿ 20 ಲಕ್ಷ ರೂ. ವೆಚ್ಚದ ಮಂಟಪಕ್ಕೆ 10 ಲಕ್ಷ ರೂ. ಅನುದಾನ ನೀಡಲಾಗಿತ್ತು. ಮರಳಿ ಮತ್ತೇ 10 ಲಕ್ಷ ರೂ. ಮಂಟಪ ನಿರ್ಮಾಣಕ್ಕೆ ನೀಡಲಾಗಿದೆ. ಮಠ ಮಾನ್ಯಗಳು ಅಭಿವೃದ್ಧಿ ಮಾಡುವದು ಬಹಳ ಮುಖ್ಯವಾಗಿದೆ. ಮಠದ ಶ್ರೀಗಳು ಬಡಕುಟುಂಬದ ಮಕ್ಕಳಿಗೆ ಶಿಕ್ಷಣ ನೀಡುವ ಜೊತೆಗೆ ಊಟ, ವಸತಿ ನೀಡಿ ಒಳ್ಳೆಯ ಮಾರ್ಗವನ್ನು ನೀಡುತ್ತಿದ್ದಾರೆ ಎಂದರು.
ಮಠ, ಮಾನ್ಯಗಳು ಒಂದೆ ಸಮಾಜಕ್ಕೆ ಸಿಮೀತವಾಗಬಾರದು. ಧರ್ಮ, ಜಾತಿ ಒಂದು ಕಡೆ ಆಗಬಾರದು. ಜನರನ್ನು ದಾರಿ ತಪ್ಪಿಸಬಾರದು. ಪೂಜರಲ್ಲಿ ಭಕ್ತಿ, ಭಾವದಿಂದ ಭಕ್ತರು ನಂಬಿರುತ್ತಾರೆ. ಅವರನ್ನು ಸನ್ಮಾರ್ಗದಲ್ಲಿ ನಡೆಸಬೇಕು. 3 ದಿನಗಳ ಕಾಲ ಅದ್ದೂರಿಯಾಗಿ ನಡೆಯುತ್ತಿರುವ ವೇದಾಂತ ಪರಿಷತ ಕಾರ್ಯಕ್ರಮ ಹೆಮ್ಮೆಯ ವಿಷಯವಾಗಿದೆ. ಇದರಿಂದ ಸಮಾಜ ಸುಧಾರಣೆಯಾಗುತ್ತದೆ. ದಿ.ತಂದೆಯವರಾದ ಸಿದ್ದು ನ್ಯಾಮಗೌಡ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಂಟಪ ಉದ್ಘಾಟನೆ ಮಾಡಿದ್ದು ಹೆಮ್ಮೆಯ ವಿಷಯ ಎಂದರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಅಜೇಯ ಕಡಪಟ್ಟಿ ಅವರಿಗೆ ಮಠದ ಶ್ರೀಗಳು ಮನವಿ ಸಲ್ಲಿಸಿ ನಂತರ ಮಾತನಾಡಿದ ಅವರು, ಮಠದ ಅಭಿವೃದ್ಧಿಗಾಗಿ ಅನುದಾನ 20 ಲಕ್ಷ ರೂ. ನೀಡಬೇಕಾಗಿತ್ತು. ಆದರೆ 5 ಲಕ್ಷ ನೀಡಿದ್ದಾರೆ ಇನ್ನುಳಿದ 15 ಲಕ್ಷ ರೂ. ಅನುದಾನವನ್ನು ನೀಡುವ ಕೆಲಸವನ್ನು ಮಾಡಬೇಕೆಂದು ಶಾಸಕರ ಗಮನಕ್ಕೆ ತಂದು ಆದಷ್ಟು ಬೇಗನೆ ಅನುದಾನ ಮಂಜುರಾತಿಗೆ ತಿಳಿಸುತ್ತೇನೆ ಎಂದರು.
ವಿಜಯಪೂರ ಷಣ್ಮುಖಾರೂಢಮಠದ ಅಭಿನವ ಸಿದ್ದಾರೂಢ ಶ್ರೀಗಳು, ಇಂಚಗೇರಿ ಸಂಪ್ರದಾಯ ಹಿಪ್ಪರಗಿ ಮಠದ ಪ್ರಭುಜೀ ಮಹಾರಾಜರು, ರುದ್ರಾವಧೂತ ಮಠದ ಸಹಜಾನಂದ ಅವಧೂತರು, ನಾಗೇಶ್ವರ ಶ್ರೀಗಳು ಉಪ್ಪಾರಟ್ಟಿ, ಸ್ವರೂಪಾನಂದ ಶ್ರೀಗಳು ಕೋಳಿಗುಡ್ಡ, ಅಮರೇಶ್ವರ ಶ್ರೀಗಳು ಕವಲಗುಡ್ಡ ಅವರು ಆಶೀರ್ವಚನ ನೀಡಿದರು.
ನಗರಸಭೆ ಅಧ್ಯಕ್ಷ ಪರಮಾನಂದ ಗೌರೋಜಿ, ತಹಶೀಲ್ದಾರ ಸದಾಶಿವ ಮಕ್ಕೋಜಿ, ಸಿಪಿಐ ಮಲ್ಲಪ್ಪ ಮಡ್ಡಿ, ನಗರಸಭೆ ಪೌರಾಯುಕ್ತ ಜೋತಿ ಗೀರೀಶ, ರವಿ ತೊದಲಬಾಗಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಂತೋಷ ಬಾಡಗಿ, ಎ.ಆರ್.ಶಿಂಧೆ, ಆನಂದ ಕನಕೇರಿ, ಈಶ್ವರ ವಾಳೇನ್ನರ, ದಿಲಾವರ ಶಿರೋಳ, ಚನ್ನಬಸಪ್ಪ ಕತಾಟೆ, ಸುನೀಲ ಶಿಂಧೆ, ಶ್ಯಾಮ ಘಾಟಗೆ, ಯಮನೂರ ಮೂಲಂಗಿ, ಕುಶಾಲ ವಾಗಮೋರೆ, ಮಹೇಶ ಕೋಳಿ, ಪೀರಾ ಖಾದ್ರಿ, ಶಿವಾನಂದ ಆಲಬಾಳ, ಭೀಮಶಿ ನಡುವಿನಮನಿ, ಮಿರಾ ಒಂಟಮೋರೆ, ಶ್ರೀಶೈಲ್ ದುಂಡಗಿ, ಅಕ್ಬರ್ ಜಮಾದಾರ, ಶಶಿಕಾಂತ ದೊಡಮನಿ, ಬಸವರಾಜ ಹರಕಂಗಿ, ಸಂಗಮೇಶ ನ್ಯಾಮಗೌಡ, ಪ್ರದೀಪ ಮೆಟ್ಟಗುಡ್ಡ, ಸಂತೋಷ ಶೆಟ್ಟಿ, ಆದಮ ಅವಟಿ, ರವಿ ರಾಯನ್ನವರ, ತಮ್ಮಣ್ಣ ನ್ಯಾಮಗೌಡ, ಸುರೇಶ ಕೌಜಲಗಿ, ತಾತಾಪ ಹುಚ್ಚಪಗೋಳ, ವಿನೋದ ಬಿರಾದಾರ ಸೇರಿದಂತೆ ಅನೇಕರು ಇದ್ದರು.