ಕಾರವಾರ 31: ಸರ್ಕಾರ ದಿಂದ ಅಭಿವೃದ್ಧಿ ಕಾರ್ಯವಾಗುತ್ತಿಲ್ಲ ಎಂದು ಬಿಜೆಪಿ ವಕ್ತಾರ ಎಚ್.ಎನ್. ಚಂದ್ರಶೇಖರ ಅಪಾದಿಸಿದರು.
ಕಾರವಾರದ ಪತ್ರಿಕಾಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ಸರಕಾರ ಜನವಿರೋಧಿಯಾಗಿದೆ. ಗ್ಯಾರಂಟಿ ಯೋಜನೆಗಳು ಅನುಷ್ಠಾನವಾಗಿವೆ . ಆದರೆ ಸಂಪದ್ಭರಿತವಾದ ರಾಜ್ಯವನ್ನು ದಿವಾಳಿಯಾಗುವಂತೆ ಮಾಡಿದ್ದಾರೆ. ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಸಮೀಪಿಸುತ್ತಿದ್ದರೂ ಯಾವುದೇ ಅಭಿವೃದ್ಧಿ ಕೆಲಸವನ್ನು ಮಾಡಿಲ್ಲ ಎಂದು ಅವರು ಆರೋಪಿಸಿದರು. ಇದು ಹೊಸ ಸರಕಾರವಲ್ಲ. ಮೊದಲ ದಿನದಿಂದಲೇ ಭ್ರಷ್ಟಾಚಾರ ಮಾಡುತ್ತಾ ಜನ ವಿರೋಧಿಯಾಗಿ ಅನಾಚಾರಗಳನ್ನು ಮಾಡಿಕೊಂಡು ಬರುತ್ತಿದೆ. ಬೊಮ್ಮಾಯಿ ಅಧಿಕಾರ ಕಳೆದು ಕೊಂಡು , ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ ರಾಜ್ಯ ಸುಭಿಕ್ಷವಾಗಿದೆ ಎಂದು ಸಿದ್ದರಾಮಯ್ಯ ಅವರೇ ಹೇಳಿದ್ದರು. ಆದರೆ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ವರ್ಷದಲ್ಲೇ ರಾಜ್ಯ ಸರ್ಕಾರ ಸಾಲ ಮಾಡಿದೆ ಎಂದು ಆರೋಪಿಸಿದರು. ಅವರ ಪಕ್ಷದ ಶಾಸಕರು ಅನುದಾನ ಬಿಡುಗಡೆಯಗದ ಇರುವ ಬಗ್ಗೆ ಅಸಮಾಧಾನ ಹೊರಹಾಕುತ್ತಿದ್ದಾರೆ. ಕಲಬುರ್ಗಿ ಗುತ್ತಿಗೆದಾರ ಸಚಿನ ಆತ್ಮಹತ್ಯೆ ವೇಳೆ, ಬರೆದ ಡೆಟ್ ನೋಟನಲ್ಲಿ ಸರ್ಕಾರದ ಮಿತಿ ಮೀರಿದ ಭ್ರಷ್ಟಾಚಾರ , ಹನಿಟ್ರಾಪ್, ಸುಫಾರಿ ಕಿಲ್ಲಿಂಗ್ ಬಗ್ಗೆ ಆರೋಪಿಸಿದ್ದಾರೆ. ಹಾಗಾಗಿ ಖರ್ಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆಯನ್ನು ಎದುರಿಸಬೇಕು ಎಂದರು.
ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ, ಗ್ರಾಮೀಣಾಧ್ಯಕ್ಷ ಸುಭಾಸ ಗುನಗಿ, ನಗರಾಧ್ಯಕ್ಷ ನಾಗೇಶ ಕುರ್ಡೇಕರ, ಕಿಶನ ಕಾಂಬಳೆ ಹಾಜರಿದ್ದರು.