ರಾಣೇಬೆನ್ನೂರು : ಫೆ 14 ನಮ್ಮ ಪೂರ್ವಜರು ಅನುಸರಿಸುತ್ತಿದ್ದ ಜಲ ಸಂಪನ್ಮೂಲಗಳಾದ, ಕೆರೆ, ಭಾವಿ, ಗೋಕಟ್ಟೆ ಮತ್ತಿತರ ವ್ಯವಸ್ಥೆಗಳ ಮೂಲಕ ಸಂಪನ್ಮೂಲಗಳನ್ನು ನಿರ್ಮಿಸಿಕೊಳ್ಳಬೇಕಾದ ಇಂದಿನ ಅಗತ್ಯವಿದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ವೀರಭದ್ರಪ್ಪ ಮೋಟಗಿ ಹೇಳಿದರು.
ಅವರು ತಾಲೂಕಿನ ಹಲಗೇರಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕ ಯೋಜನಾಧಿಕಾರಿಗಳ ಕಚೇರಿ, ಗ್ರಾಮ ಪಂಚಾಯತ್ ಹಲಗೇರಿ ಮತ್ತು ಸಣ್ಣ ಹಾಗೂ ದೊಡ್ಡಕೆರೆ ಅಭಿವೃದ್ಧಿ ಸಮಿತಿ ಆಯೋಜಿಸಲಾಗಿದ್ದ, ಕೆರೆ ಹೂಳೆತ್ತುವ ಕಾರ್ಯಕ್ರಮಕ್ಕೆ ಚಾಲನೆಯಲ್ಲಿ ಮಾತನಾಡಿದರು. ಅಂದಿನ ಹಿರಿಯರು, ನೀರಿನ ಬಗ್ಗೆ ಮುಂಜಾಗ್ತ ಕ್ರಮ ಹಿಸುತ್ತಿದ್ದರು. ಅಲ್ಲದೆ ಕಾಲ ಕಾಲಕ್ಕೆ ಮಳೆ ಮತ್ತು ಬೆಳೆ ಕ್ರಮಾನುಸಾರ ಕೃಷಿ ಉತ್ಪಾದನೆ ಇರುತ್ತಿತ್ತು. ಇದರಿಂದ ದೇಶಕ್ಕೆ ಅನ್ನ ನೀಡುವ ರೈತ ಯಾವುದೇ ಆಹಾರ ಹಾಗೂ ಜಲ ಕ್ಸಾಮ ಇಲ್ಲದೆ ಬದುಕುತ್ತಿದ್ದರು ಎಂದರು. ಪ್ರಾಸ್ಥಾವಿಕವಾಗಿ ಮಾತನಾಡಿದ ಕ್ಷೇತ್ರ ಯೋಜನಾಧಿಕಾರಿ ಮಂಜುನಾಥಗೌಡ ಎಂ, ಅವರು, ಧರ್ಮಾಧಿಕಾರಿಗಳಾದ ಡಾ,ಡಿ. ವೀರೇಂದ್ರ ಹೆಗ್ಗಡೆಯವರು, ಮಾತೃ ಹೇಮಾವತಿ ವ್ಹಿ. ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ, ಇಂತಹ ಬಹು ಉಪಯೋಗಿ, ಮತ್ತು ದೂರ ದೃಷ್ಟಿಯ, ಇತಿಹಾಸದ ಪರಿಕಲ್ಪನೆಯ ಯೋಜನೆಯು ಜಾರಿಗೆ ತರಲಾಗಿದೆ. ಎಂದರು. ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕೆರೆಗಳು ಸಾಕಷ್ಟು ಪ್ರಮಾಣದಲ್ಲಿ ಇದ್ದಾವೆ ಅವುಗಳ ಪುನರ್ ಚೇತನವಾದರೆ, ಕೆರೆಗಳ ನಿರ್ಮಾಣದಿಂದ ಸದಾವ ಕಾಲವೂ ನೀರಿನ ತೊಂದರೆ ಇಲ್ಲದೆ ಅತ್ಯಂತ ಶಾಂತಿಯುತವಾದ ಜೀವನ ಸಾಗಿಸಬಹುದಾಗಿದೆ ಎಂದರು.ಕೆರೆ ಸಮಿತಿ ಅಧ್ಯಕ್ಷ ರೇವಣಪ್ಪ ಕಣ್ಣಪ್ಪಳವರ್ ಮಾತನಾಡಿ ಕೆರೆಯು ಈಶಾನ್ಯ ದಿಕ್ಕಿನಲ್ಲಿ ಹಾಲಶಿದ್ದೇಶ್ವರ ದೇವಸ್ಥಾನವಿದ್ದು ಕೆರೆಯನ್ನು ಶುಚಿಯಾಗಿಟ್ಟುಕೊಂಡು ಕಾಮಗಾರಿಗೆ ಎಲ್ಲರೂ ಬೆಂಬಲಿಸಿ ಪ್ರೋತ್ಸಾಹಿಸಬೇಕಾದ ಅಗತ್ಯವಿದೆ ಎಂದು ಗ್ರಾಮಸ್ಥರಿಗೆ ಕರೆ ನೀಡಿದರು.
ಕೆರೆ ಅಭಿಯಂತರ ನಿಂಗರಾಜ್ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಮಲ್ಲೇಶ್ ಬೂದಿಹಾಳ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಮಂಜುನಾಥ್ ಸೋಮಣ್ಣ ಮಾಳಗಿ. ಶಿದ್ದಲಿಂಗನಗೌಡ ಪಾಟೀಲ್ . ರಮೇಶ್ ಮೂಲಿಮನಿ ಬಸವರಾಜ್ ಕಡೂರು ಹಾಗೂ ಗ್ರಾಮ ಪಂಚಾಯತ್‌ನ ಎಲ್ಲ ಸದಸ್ಯರು ಮತ್ತು ಸಿಬ್ಬಂದಿ ವರ್ಗ ಕೆರೆ ಸಮಿತಿಯ ಎಲ್ಲ ಸದಸ್ಯರು ವಲಯ ಮೇಲ್ವಿಚಾರಕರಾದ ರವಿ ಸರ್ ಜ್ಞಾನವಿಕಾಸ ಸಮನ್ವಯ ಅಧಿಕಾರಿಯಾದ ಶೋಭಾ ಒಕ್ಕೂಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸ್ವ ಸಹಾಯ, ಪ್ರಗತಿಬಂಧು ಸಂಘದ ಎಲ್ಲ ಸದಸ್ಯರು ಸೇವಾ ಪ್ರತಿನಿಧಿಗಳು ಪಾಲ್ಗೊಂಡಿದ್ದರು.