ಲೋಕದರ್ಶನವರದಿ
ಗುಳೇದಗುಡ್ಡ18: ಬಾಲ್ಯದಿಂದಲೇ ಮಕ್ಕಳಲ್ಲಿ ಕ್ರೀಡೆ, ಕಲೆ, ಸಂಸ್ಕೃತಿ, ಪಠ್ಯ ಪೂರಕ ಚಟುವಟಿಕೆಗಳ ಕುರಿತು ಆಸಕ್ತಿ ಬೆಳೆಸಬೇಕು. ಮನೆಯಲ್ಲಿ ಪಾಲಕರು, ಶಾಲೆಯಲ್ಲಿ ಶಿಕ್ಷಕರು ಮಕ್ಕಳ ಕಲಿಕೆಗೆ ವಿಶೇಷ ಆಸಕ್ತಿ ಮೂಡಿಸಿದಾಗ ಮಾತ್ರ ಮಗು ಸರ್ವತೋಮುಖ ಬೆಳವಣಿಗೆ ಹೊಂದಲು ಸಾಧ್ಯ ಎಂದು ಮಾಹೇಶ್ವರಿ ವಿದ್ಯಾಪ್ರಚಾರಕ ಮಂಡಳದ ಅಧ್ಯಕ್ಷ, ಪುರಸಭೆ ಮಾಜಿ ಸ್ಥಾಯಿ ಸಮಿತಿ ಚೇರಮನ್ ಕಮಲಕಿಶೋರ ಮಾಪಲಾಣಿ ಹೇಳಿದರು.
ಅವರು ಶನಿವಾರ ಇಲ್ಲಿನ ಮಾಹೇಶ್ವರಿ ವಿದ್ಯಾಪ್ರಚಾರಕ ಮಂಡಳದ ಅಡಿಯಲ್ಲಿ ನಡೆಯುತ್ತಿರುವ ವೆಂಕಟೇಶ ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಎಲ್.ಕೆ.ಜಿ., ಯು.ಕೆ.ಜಿ. ಹಾಗೂ ನರ್ಸರಿ ಶಾಲೆಗಳ ವಾಷರ್ಿಕೋತ್ಸವ ಹಾಗೂ ಪಾಲಕರಿಗಾಗಿ ಹಮ್ಮಿಕೊಂಡ ವಿವಿಧ ಸ್ಪಧರ್ೆಗಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಶಾಲೆಯ ಮುಖ್ಯಗುರು ಬಿ.ಆರ್.ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದಶರ್ಿ ಗೋವಿಂದ ಬಜಾಜ, ಶಾಲೆಯ ಮಹಿಳಾ ಮಾರ್ಗದಶರ್ಿ ಲತಾಜಿ ತಾಪಡಿಯಾ, ರೂಪಾಲಿ ಮಂತ್ರಿ, ಸಂಪದಾ ಹಾಗೂ ಇತರರು ಇದ್ದರು.