ಸಕಾರಾತ್ಮಕ ಭಾವನೆ ಬೆಳೆಸಿಕೊಂಡು ಮುನ್ನಡೆಯಬೇಕು: ಹೆಗಡೆ

ಲೋಕದರ್ಶನವರದಿ

ರಾಣೇಬೆನ್ನೂರು06: ತಮ್ಮ ಜೀವನದುದ್ದಕ್ಕೂ ವಿದ್ಯಾಥರ್ಿಗಳು ಸಕಾರಾತ್ಮಕ ಭಾವನೆ ಬೆಳೆಸಿಕೊಂಡು ಮುನ್ನಡೆದರೆ ಜೀವನ ಉಜ್ವಲವಾಗುವುದದರ ಜೊತೆಗೆ ಉತ್ತಮ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬಹುದು ಎಂದು ಕುಮಟಾದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ತರಬೇತುದಾರ ಆರ್. ಎಸ್. ಹೆಗಡೆಯವರು ಹೇಳಿದರು. 

ಗುರುವಾರ ಇಲ್ಲಿನ ವಿದ್ಯಾನಗರದ ಡಾ. ಬಿ. ಆರ್. ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾಥರ್ಿಗಳ ಪರೀಕ್ಷಾ ಪೂರ್ವ ತರಬೇತಿ ಕಾರ್ಯಕ್ರಮದಲ್ಲಿ ತರಬೇತಿ ನೀಡಿ ಮಾತನಾಡಿದರು. ನಮ್ಮ ದೇಹದಲ್ಲಿನ ವಿವಿಧ ಅಂಗಗಳು ನಿರಂತರವಾಗಿ ದುಡಿಯುತ್ತಿರುವುದರಿಂದಲ್ಲವೇ ನಾವು ಸುಖವಾಗಿರುವುದು ಎಂದರು.

  ಮುಖ್ಯ ಶಿಕ್ಷಕ ಜಿ. ಬಿ. ಮಾಸಣಗಿ ಮಾತನಾಡಿ ವಿದ್ಯಾಥರ್ಿಗಳಲ್ಲಿ ಶಿಸ್ತು, ಸಂಯಮ, ಸಮಯವನ್ನು ಪಾಲಿಸಿಕೊಂಡು ಮುನ್ನಡೆಯುವುದರಿಂದ ಜೀವನದಲ್ಲಿ ಏನಾದರೂ ಸಾಧಿಸಬಹುದು ಎಂದರು. ಎಂ. ಬಿ. ಶಿವಾನಂದ, ಜಯಲಲಿತಾ ಹೊಸಮನಿ, ಜ್ಯೋತಿ ಎನ್. ಎಸ್. ಬಿ. ಹಿರೇಮಠ, ಮತ್ತಿತರರು ಇದ್ದರು.