ಲೋಕದರ್ಶನವರದಿ
ಶಿಗ್ಗಾವಿ27 : ಸಮಾಜವನ್ನು ನಿರಂತರವಾಗಿ ತಿದ್ದುವ ಕಾರ್ಯವನ್ನು ಕೈಗೊಳ್ಳುವ ಪತ್ರಿಕಾರಂಗವನ್ನು ಪ್ರತಿಯೊಬ್ಬರು ಗೌರವಿಸುವ ಜೊತೆಗೆ ಪತ್ರಿಕೆಗಳನ್ನು ಓದುವಂತಹ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು ಅವಶ್ಯವಿದೆ ಎಂದು ಸವಣೂರ ಉಪವಿಭಾಗಾಧಿಕಾರಿ ಬೋಯಾರ್ ಹರ್ಷಲ್ ನಾರಾಯಣರಾವ್ ಹೇಳಿದರು.
ಪಟ್ಟಣದ ಸಂತೆ ಮೈದಾನದ ಶರೀಫ ಭವನದಲ್ಲಿ ಪತ್ರಿಕಾ ದಿನಾಚರಣೆ ಪ್ರಯುಕ್ತ ಕನರ್ಾಟಕ ಪತ್ರಕರ್ತರ ಸಂಘ ತಾಲೂಕ ಘಟಕದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ರಕ್ತದಾನ ಶಿಬಿರ ಮತ್ತು ಪತ್ರಿಕಾ ವಿತರಕರ ಸಂಘದ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮನುಷ್ಯನ ಅರಿವಿಗೆ ಬಾರದ ಹಲವಾರು ವಿಷಯಗಳ ಕುರಿತು ಜಾಗೃತಿ ಮೂಡಿಸುವುದು ಹಾಗೂ ಉತ್ತಮ ಸಮಾಜ ನಿಮರ್ಾಣಕ್ಕೆ ಸಹಾಯಕ ಕಾರ್ಯ ಮಾಡುವ ಪತ್ರಿಕಾರಂಗದ ಕುರಿತು ಸಮಾಜ ಅರಿವು ಹೊಂದುವುದು ಅವಶ್ಯವಾಗಿದೆ ಎಂದರು.
ಬನ್ನೂರ ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಅನಾರೋಗ್ಯ ಪೀಡಿತ ಹಿರಿಯ ವರದಿಗಾರ ಹಜರೇಸಾಬ ಸದಾಫ ಅವರಿಗೆ ಆಥರ್ಿಕ ಸಹಾಯ ನೀಡಿ ಮಾತನಾಡಿದ ಅವರು, ಪತ್ರಕರ್ತರು ಸಹ ಸಮಾಜದ ಬಗೆಗೆ ಬಹಳಷ್ಟು ಕಾಳಜಿ ಹೊಂದಿದ ವ್ಯಕ್ತಿಗಳಾಗಿದ್ದಾರೆ ಅವರಿಗೆ ನಿವೇಶನ ಹಾಗೂ ಪತ್ರಿಕಾ ಭವನದ ಅವಶ್ಯಕತೆ ಹಾಗೂ ವರದಿಗಾರರ ಬಗ್ಗೆ ನಮ್ಮ ಚುನಾಯಿತ ಜನಪ್ರತಿನಿದಿಗಳು ಗಮನಹರಿಸಬೇಕು ಎಂದು ಮಾಮರ್ಿಕವಾಗಿ ಮಾತನಾಡಿದರು.
ಬಿಇಓ ಬಿ.ಐ.ಬೆನಕನಕೊಪ್ಪ ಮಾತನಾಡಿ, ಪತ್ರಿಕೆ ನಿತ್ಯ ಜೀವನದಲ್ಲಿ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತದೆ. ಬೆಳಿಗ್ಗೆ ಒಂದು ಕ್ಷಣ ಪತ್ರಿಕೆ ಮೇಲೆ ಕಣ್ಣಾಡಿಸಿ ಬಿಸಾಕುವ ನಾವು ಅದೇ ಒಂದು ಪತ್ರಿಕೆಯನ್ನು ಹೊರತರಲು ರಾತ್ರಿ ಇಡೀ ಶ್ರಮ ವಹಿಸುವ ಪತ್ರಿಕಾ ಬಳಗವನ್ನು ನಾವು ಸ್ಮರಿಸಲೇಬೇಕು ಎಂದರು.
ಈ ಪೂರ್ವದಲ್ಲಿ ಶಿಗ್ಗಾಂವ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ತಾಲೂಕಾ ಪತ್ರಿಕಾ ವಿತರಕರ ಸಂಘವನ್ನು ಉದ್ಘಾಟಿಸಿದರು. ನಂತರ ತಾಲೂಕಿನ ಹಿರಿಯ ಪತ್ರಕರ್ತರನ್ನು, ಪತ್ರಿಕಾ ವಿತರಕರನ್ನು ಸನ್ಮಾನಿಸಲಾಯಿತು.
ಕ.ಪ.ಸ ರಾಜ್ಯ ಸಮಿತಿ ಸದಸ್ಯರಾದ ಮಾಲತೇಶ ಅಂಗೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯನಿವರ್ಾಹಕ ಅಧಿಕಾರಿ ಪ್ರಶಾಂತ ತುರಕಾಣಿ, ಕಪಸ ಜಿಲ್ಲಾ ಅಧ್ಯಕ್ಷ ವಾಗೀಶ ಪಾಟೀಲ, ಶಿವಾನಂದ ಮ್ಯಾಗೇರಿ ಮಾತನಾಡಿದರು. ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ತಾಪಂ ಅಧ್ಯಕ್ಷೆ ಪಾರವ್ವ ಆರೇರ, ಡಾ. ಆಡಳಿತ ವೈದ್ಯಾಧಿಕಾರಿ ಪಿ.ಎಚ್.ಹನುಮಂತಪ್ಪ, ಮುಖ್ಯಾಧಿಕಾರಿ ಪಿ.ಕೆ.ಗುಡದಾರಿ, ಕಪಸ ತಾಲೂಕ ಅಧ್ಯಕ್ಷ ರವಿ ಉಡುಪಿ, ಪಿಎಸ್ಐ ಸಂತೋಷ ಪಾಟೀಲ, ಎನ್.ಸಿ ಕಾಡದೇವರ, ಗಂಗಣ್ಣ ಸಾತಣ್ಣವರ, ಸದಾಶಿವ ಹಿರೇಮಠ, ವಿಶ್ವನಾಥ ಬಂಡಿವಡ್ಡರ, ಬಸವರಾಜ ಹೊಣ್ಣನ್ನವರ, ವಿರುಪಾಕ್ಷಪ್ಪ ನೀರಲಗಿ, ಸುರೇಶ ಯಲಿಗಾರ, ಸಂಜನಾ ರಾಯ್ಕರ, ಎಮ್.ವಿ.ಗಾಡದ, ಕಲಾವಿದರಾರ ಶಂಕರ ಅರ್ಕಸಾಲಿ, ಬಸವರಾಜ ಶಿಗ್ಗಾಂವ ಇತರರು ಇದ್ದರು. ಕಪಸ ರಾಷ್ಟ್ರೀಯ ಮಂಡಳಿ ಸದಸ್ಯ ಬಸವರಾಜ ಹಡಪದ, ಸುಧಾಕರ ದೈವಜ್ಞ ಕಾರ್ಯಕ್ರಮ ನಿರ್ವಹಿಸಿದರು.