ಕೊಪ್ಪಳ ಮಾದರಿ ನಗರವನ್ನಾಗಿ ಅಭಿವೃದ್ಧಿಪಡಿಸಿ: ಸೈಯದ್

ಲೋಕದರ್ಶನ ವರದಿ

ಕೊಪ್ಪಳ 02: ಕೊಪ್ಪಳ ನಗರವನ್ನು ಮಾದರಿ ನಗರವನ್ನಾಗಿ ಅಭಿವೃದ್ಧಿಪಡಿಸಿ ನಗರದ ಸೌಂದರ್ಯಕ್ಕೆ ಆದ್ಯತೆ ನೀಡುವಂತೆ ಸೈಯದ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೆ.ಎಂ.ಸೈಯದ್ ಮನವಿ ಮಾಡಿದರು.

ಅವರು ನಗರದ ಶಿಲ್ಪಾ ಗ್ರ್ಯಾಂಡ್ ಹೊಟೇಲ್ನಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರು ಮತ್ತು ನೂತನ ಸದಸ್ಯರಿಗೆ ಸನ್ಮಾನಿಸಿ ಮಾತನಾಡಿದ ಅವರು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷ ಮಹಾಂತೇಶ್ ಪಾಟೀಲ್ ಮೈನಳ್ಳಿ ಅವರು ಯುವಕರಾಗಿದ್ದು ಉತ್ತಮ ಕಾರ್ಯ ಮಾಡುವ ಭರವಸೆಯಿದೆ ಎಂದರು.  

 ಈ ಸಂದರ್ಭದಲ್ಲಿ ನೂತನ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ನಾಗಭೂಷಣ ಸಾಲಿಮಠ, ಮಧುರಾ ಕರಣಂ, ಶಹನಾಜ ಬೇಗಂ, ಬಸವರಾಜ ಭೋವಿ ಸೇರಿದಂತೆ ಮತ್ತೀತರರು ಉಪಸ್ಥಿತರಿದ್ದರು.