ಕಲಬುರಗಿ, ನ 11 : ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಅವರು ಸೋಮವಾರ ಜಿಲ್ಲೆಯ ಅಫಜಲಪುರ ತಾಲೂಕಿನಲ್ಲಿರುವ ಗಾಣಗಾಪುರದ ದತ್ತನ ದರ್ಶನ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಸೋಮವಾರದ ನಿಮಿತ್ಯ ದತ್ತನ ದರ್ಶನ ಮಾಡಲು ಬಂದಿದ್ದು, ಗುರು ದತ್ತನ ಸ್ವರ್ಣ ಪಾದುಕೆಗೆ ವಿಶೇಷ ಪೂಜೆ ಸಲ್ಲಿಸಿದ್ದೇನೆ ಎಂದರು. ಇದೊಂದು ಪವಿತ್ರ ಪುಣ್ಯ ಕ್ಷೇತ್ರ. ಜಗತ್ತಿನಲ್ಲಿ ನಡೆಯುತ್ತಿರುವ ಸಂಘರ್ಷಗಳು ತೊಲಗಿ, ಶಾಂತಿ ನೆಲೆಸಲು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದರು. 50 ವರ್ಷಗಳ ಹಿಂದೆ ಗಾಣಗಾಪುರಕ್ಕೆ ಬಂದು ಪೂಜೆ ಸಲ್ಲಿಸಿದ್ದು, ಸುದೀರ್ಘವಾಗಿ 60 ವರ್ಷ ರಾಜಕೀಯ ಜೀವನದಲ್ಲಿ ಹೋರಾಟ ಮಾಡಿದ್ದೆ ಎಂದು ತಿಳಿಸಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.