ಮೈಸೂರು, ಆ 30 ಮಾಜಿ ಸಚಿವ, ಜೆಡಿಎಸ್ ಹಿರಿಯ ಮುಖಂಡ ಜಿ ಟಿ ದೇವೇಗೌಡ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಮುಕ್ತಕಂಠದಿಂದ ಶ್ಲಾಘಿಸಿದ್ದು, ಮೋದಿ ಅಂತಹ ನಾಯಕರು ದೇಶಕ್ಕೆ ಅಗತ್ಯ ಎಂದು ಹೇಳಿದ್ದಾರೆ.
ನರೇಂದ್ರ ಮೋದಿ, ದೇಶದ ಅಭಿವೃದ್ಧಿ ಬಗ್ಗೆ ಆಳವಾದ ಚಿಂತನೆ ಹೊಂದಿದ್ದಾರೆ. ಇಂತಹವರು ದೇಶಕ್ಕೆ ಅಗತ್ಯವಿದೆ. ದೇಶ ಮೊದಲು ಎನ್ನುವ ಅವರ ಪರಿಕಲ್ಪನೆ ತಮಗೆ ಇಷ್ಟ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ದೇಶ ಮೊದಲು, ನಂತರ ಬೇರೆ ಎಂಬ ಭಾವನೆ ಹೊಂದಿದ್ದಾರೆ. ಅವರ ದೇಶಾಭಿಮಾನ ತಮಗೆ ಇಷ್ಟ ಎಂದರು.
ಮೋದಿ ಅವರನ್ನು ಹೊಗಳಿದ ಮಾತ್ರಕ್ಕೆ ತಾವು ಬಿಜೆಪಿ ಪರ ಒಲವು ಹೊಂದಿದ್ದೇನೆ ಎಂದು ಭಾವಿಸುವುದು ಬೇಡ. ತಾವು ಜೆಡಿಎಸ್ನಲ್ಲೇ ಇರುವುದಾಗಿ ಸ್ಪಷ್ಟನೆ ನೀಡಿದರು.
ಸುಪ್ರಸಿದ್ಧ ಮೈಸೂರು ದಸರಾ ಉತ್ಸವ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರಿಗೆ ದಸರಾ ಆಚರಣೆ ಕುರಿತಂತೆ ತಾವು ಸೂಕ್ತ ಸಲಹೆ ನೀಡಿರುವುದಾಗಿ ಜಿ.ಟಿ. ದೇವೇಗೌಡ ತಿಳಿಸಿದರು.