ದೇವೇಗೌಡರ 88ನೇ ಹುಟ್ಟುಹಬ್ಬ: ಜೆಡಿಎಸ್‌ನಿಂದ ರಕ್ತದಾನ ಶಿಬಿರ

ಬೆಂಗಳೂರು, ಮೇ 18,ಮಾಜಿ  ಪ್ರಧಾನಿ ಎಚ್.ಡಿ‌.ದೇವೇಗೌಡರು ಇನ್ನೂ ನೂರ್ಕಾಲ ಆರೋಗ್ಯದಿಂದ ಓಡಾಡಲಿ ಎಂದು ಮೇಲ್ಮನೆ  ಜೆಡಿಎಸ್ ಸದಸ್ಯ ಶುಭಹಾರೈಸಿದ್ದಾರೆ.ಮಾಜಿ ಪ್ರಧಾನಿ, ಜೆಡಿಎಸ್  ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಅವರ 88ನೇ ಹುಟ್ಟುಹಬ್ಬದ ಪ್ರಯುಕ್ತ ಪಕ್ಷದ  ಪ್ರಧಾನ ಕಚೇರಿ ಜೆ.ಪಿ.ಭವನದಲ್ಲಿ ಶರವಣ ನೇತೃತ್ವದಲ್ಲಿ ರಕ್ತದಾನ ಶಿಬಿರ  ಆಯೋಜಿಸಲಾಗಿತ್ತು.ಈ ಸಂದರ್ಭದಲ್ಲಿ ರಕ್ತದಾನ ಮಾಡಿ ಮಾತನಾಡಿದ ಶರವಣ,  ದೇವೇಗೌಡರು ದೇಶ ಕಂಡ ಉತ್ತಮ ಪ್ರಧಾನಿ. ವಾಗ್ಮಿಗಳು ದೈವಭಕ್ತರೂ ಆಗಿರುವ ದೇವೇಗೌಡರ  ನೇತೃತ್ವದಲ್ಲಿ ತಾವೆಲ್ಲ ಸಾಗುತ್ತಿದ್ದು ದೊಡ್ಡಗೌಡರು ತಮಗೆಲ್ಲ  ಮಾರ್ಗದರ್ಶಿಯಾಗಿದ್ದಾರೆ. ಕೊರೊನಾ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಈ ಬಾರಿ ಸರಳ  ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಅವರ ಶ್ರೇಯಸಿಗಾಗಿ ಉಚಿತ ರಕ್ತದಾನ ಶಿಬಿರ  ಆಯೋಜಿಸಲಾಗಿದೆ. ಮನೆಯಿಂದಲೇ ದೇವೇಗೌಡರು ಕಾರ್ಯಕ್ರಮಗಳಿಗೆ ಶುಭ ಹಾರೈಸಿದ್ದಾರೆ ಎಂದರು.