ಹಾವೇರಿ: ಭಾರತದ ಮಾಜಿ ಪ್ರಧಾನಿ ಆಧುನಿಕ ತಂತ್ರಜ್ಞಾನ ಚಿಂತಕರಾದ ರಾಜೀವಗಾಂಧಿ ಹಾಗೂ ಕನರ್ಾಟಕದ ಅಭಿವೃದ್ಧಿ ಹರಿಕಾರರಾದ ಡಿ.ದೇವರಾಜ ಅರಸು ಅವರ ಚಿಂತನೆಗಳು ಸಮಾಜದ ಅಭಿವೃದ್ಧಿಗೆ ಪೂರಕವಾಗಿವೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಹೇಳಿದರು.
ಜಿಲ್ಲಾಡಳಿತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ ಭಾರತದ ಮಾಜಿ ಪ್ರಧಾನಿ ರಾಜೀವ ಗಾಂಧಿ ಅವರ 75 ನೇ ಜನ್ಮದಿನ ಅಂಗವಾಗಿ ಹಮ್ಮಿಕೊಳ್ಳಲಾದ ಸದ್ಭಾವನಾ ದಿನಾಚರಣೆ ಹಾಗೂ ಡಿ.ದೇವರಾಜ ಅವರು 104ನೇ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಗಳಿಗೆ ಪುಷ್ಪನಮನ ಅಪರ್ಿಸಿ ಅವರು ಮಾತನಾಡಿದರು.
ಭಾರತ ದೇಶ ಬಹುಸಂಸ್ಕೃತಿಯಲ್ಲಿ ಏಕತೆಯಿಂದ ಬಾಳುತ್ತಿರುವ ಜಗತ್ತಿನ ಅತ್ಯಂತ ಶ್ರೇಷ್ಠ ದೇಶವಾಗಿದೆ. ಬಹುಸಂಸ್ಕೃತಿಯ ನಾಡಲ್ಲಿ ಯಾವುದೇ ಸಂಸ್ಕೃತಿ ಮೇಲು, ಯಾವುದೇ ಸಂಸ್ಕೃತಿ ಕೀಳು ಎಂಬ ಬೇಧಭಾವವಿಲ್ಲದೆ ವಿವಿಧತೆಯಲ್ಲಿ ಏಕತೆಯಿಂದ ದೇಶದ ಅಭಿವೃದ್ಧಿಗೆ ಒಟ್ಟಾಗಿ ಶ್ರಮಿಸುತ್ತಿರುವ ಸದ್ಭಾವನೆಯ ಸಂಸ್ಕೃತಿಯ ಶ್ರೇಷ್ಠ ದೇಶವಾಗಿದೆ ಎಂದು ಅವರು ಹೇಳಿದರು.
ಭಾರತದ ಮಾಜಿ ಪ್ರಧಾನಿ ರಾಜೀವಗಾಂಧಿ ಅವರು ಆಧುನಿಕ ತಳಹದಿಯ ಮೇಲೆ ದೇಶದ ಅಭಿವೃದ್ಧಿಯ ಕನಸು ಕಂಡವರು. ಆಧುನಿಕ ತಂತ್ರಜ್ಞಾನವನ್ನು ಪರಿಚಯಿಸಿದವರು. ಆಧುನಿಕ ತಂತ್ರಜ್ಞಾನ ಸ್ಥಳೀಯ ಉದ್ಯೋಗವನ್ನು ಕಸಿಯುತ್ತಿದೆ ಎಂಬ ಮನೋಭಾವವನ್ನು ದೂರಮಾಡಿ ದೂರದೃಷ್ಟಿತ್ವದಿಂದ ದೇಶದ ಆಥರ್ಿಕ, ಸಾಮಾಜಿಕ ಶ್ರಮಿಸಿದರು ಎಂದರು.
ಕನರ್ಾಟಕ ಮಾಜಿ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸು ಅವರು ಸಾಮಜಿಕ ಅಭಿವೃದ್ಧಿಗೆ ಶ್ರಮಿಸಿದವರು. ಸಮಾಜದ ಏಳ್ಗೆಗಾಗಿ, ಸಮಾಜದ ಸಮಾನತೆಗಾಗಿ ಹಲವು ಸಾಮಾಜಿಕ ಹಾಗೂ ಆಥರ್ಿಕ ಸುಧಾರಣೆಯನ್ನು ತಂದವರು. ಈ ಎರಡು ಮಹಾ ಪುರುಷರ ಒಳ್ಳೆಯ ವಿಚಾರಗಳು ನಮ್ಮ ಅಭಿವೃದ್ಧಿಗೆ ಸಹಕಾರಿಯಾಗಿವೆ ಎಂದು ಹೇಳಿದರು.
ಡಿ.ದೇವರಾಜ ಅರಸು ಅವರ ಜಯಂತಿ ಕಾರ್ಯಕ್ರಮದ ಅನುದಾನವನ್ನು ನೆರೆ ಸಂತ್ರಸ್ಥರಿಗೆ ಬಳಸಿಕೊಳ್ಳಲು ಸಮಾರಂಭದಲ್ಲಿ ಘೋಷಿಸಲಾಯಿತು.