ದರೋಡೆಕೋರರ ಗುಂಡೇಟಿಗೆ ಬಲಿಯಾದ ಬ್ಯಾಂಕ್ ಸಿಬ್ಬಂದಿ ಗೆ ರೂ.25 ಲಕ್ಷ ಪರಿಹಾರ ನೀಡಲು ಒತ್ತಾಯ
ಬೆಂಗಳೂರು 18: ರಾಜ್ಯದಲ್ಲಿ ಇತ್ತೀಚಿಗೆ ನಡೆದ ದರೋಡೆಗಳ ಘಟನೆಗಳಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ವೆಲ್ಫೇರ್ ಪಾರ್ಟಿ ರಾಜ್ಯ ಅಧ್ಯಕ್ಷ ಅಡ್ವಕೇಟ್ ತಾಹಿರ್ ಹುಸೇನ್ ಹೇಳಿದ್ದಾರೆ.
ಬೀದರ್‌ನಲ್ಲಿ ದುಷ್ಕರ್ಮಿಗಳ ಗುಂಡಿನ ದಾಳಿಗೆ ಎಟಿಎಂಗಳಿಗೆ ಹಣ ತುಂಬುವ ಸಿಎಂಎಸ್ ಕಂಪನಿಯ ನೌಕರ ಗಿರಿ ವೆಂಕಟೇಶ ಮೃತಪಟ್ಟಿರುವುದು ದುರದೃಷ್ಟಕರ, ಅದೆರೀತಿ ಮಂಗಳೂರಿನಲ್ಲಿ ನಡೆದಿರುವ ದರೋಡೆ ಘಟನೆ ಖಂಡನಿಯ ಇದರಿಂದ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ದರೋಡೆ ಘಟನೆಯಿಂದ ಗೃಹ ಸಚಿವರು ರಾಜ್ಯದಲ್ಲಿ ಇದ್ದಾರೋ ಇಲ್ಲವೋ ಎಂದು ಅನುಮಾನದಿಂದ ನೋಡುವಂತಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಪೊಲೀಸ್ ಇಲಾಖೆ ಅಪರಾಧಗಳನ್ನು ತಡೆಯುವಲ್ಲಿ ವಿಫಲವಾಗಿದೆ.
ರಾಜ್ಯದ ದಕ್ಷಿಣ ಕನ್ನಡ ಹಾಗೂ ಬೀದರ್ ಜಿಲ್ಲೆಯ ನಡೆದ ಘಟನೆಗಳು ಬ್ಯಾಂಕು ಗಳಲ್ಲಿ ಸರಿಯಾದ ಭದ್ರತೆ ವೆವಸ್ಥೆ ಇಲ್ಲದ ಕಾರಣ ಈ ನಡೆದಿದೆ. ಗ್ರಾಹಕರಿಗೆ ಬ್ಯಾಂಕ್ ನವರು ಸೂಕ್ತ ಭದ್ರತೆ ಒದಗಿಸಬೇಕು ಅವರು ಆಗ್ರಹಿಸದರು. ಗುಂಡಿನ ದಾಳಿಯಲ್ಲಿ ದರೋಡೆಕೋರರಿಂದ ಮೃತಪಟ್ಟಿರುವ ಗಿರಿ ವೆಂಕಟೇಶ ಅವರ ಕುಟುಂಬಕ್ಕೆ ಸರ್ಕಾರ 25 ಲಕ್ಷ ಪರಿಹಾರ ಕೊಡಬೇಕು. ಕುಟುಂಬದ ಒಬ್ಬ ಸದಸ್ಯರಿಗೆ ಕಾಯಂ ಉದ್ಯೋಗ ನೀಡಬೇಕು ಎಂದು ಅವರು ಸರಕಾರಕ್ಕೆ ಒತ್ತಾಯ ಮಾಡಿದ್ದಾರೆ.