ಇಬ್ಬರ ಕುರಿ ಕಳ್ಳರ ಬಂಧನ

ಬ್ಯಾಡಗಿ29: ಮನೆಗಳ ಮುಂದೆಕಟ್ಟಿರುವ ಕುರಿಗಳನ್ನು ರಾತ್ರಿ ವೇಳೆ ಕದ್ದುಕೊಂಡು ಫಲ್ಸರ್ ಬೈಕ್ ಮೇಲೆ ಸಾಗಿಸುವ ಇಬ್ಬರು ಕಳ್ಳರ ಜಾಲವನ್ನು ಪೋಲಿಸರು ಬಂಧಿಸಿದ ಘಟನೆ ಮಂಗಳವಾರ ಜರುಗಿದೆ.

ಆರೋಪಿಗಳನ್ನು ಪಕ್ಕೀರಪ್ಪ ದುರುಗಪ್ಪ ಗೋಟನವರ (46) ಸಾ.ಕೆರವಡಿ, ಮಂಜುನಾಥ ನಾಗಪ್ಪ ಗೋಟನವರ (23) ಸಾ. ಕುರುಬಗೊಂಡ ಎಂದು ಗುತರ್ಿಸಿದ್ದು, ಸುಮಾರು 70 ಸಾ.ರೂ.ಮೌಲ್ಯದ ಐದು ಕುರಿಗಳನ್ನು ಕಳವು ಮಾಡಿ ಸಿಕ್ಕಿದ್ದಾರೆ. ಪ್ರಕರಣಗಳ ಪತ್ತೆಗಾಗಿ ಎಸ್ಪಿ, ಎಎಸ್ಪಿ, ಡಿಎಸ್ಪಿ ಹಾಗೂ ಸಿಪಿಐ ಮಾರ್ಗದರ್ಶನದಲ್ಲಿ ಪತ್ತೆಗಾಗಿ ರಚಿಸಲಾಗಿತ್ತು.

ತಾಲೂಕಿನ ಕಲ್ಲೆದೇವರು, ಕೆಂಗೊಂಡ ಸೇರಿದಂತೆ ಕೆಲ ಗ್ರಾಮಗಳಲ್ಲಿ ರಾತ್ರಿ ವೇಳೆಯಲ್ಲಿ ಚಾಣಾಕ್ಷತನದಿಂದ ಕಳವು ಮಾಡಿಕೊಂಡು ಫಲ್ಸರ್ ಬೈಕ್ ಮೇಲೆ ತಂದು ಹೊಲದಲ್ಲಿ ಯಾರಿಗೂ ತಿಳಿಯದಂತೆ ಕೂಡಿಹಾಕಿ, ಬಳಿಕ ದೂರದ ಸಂತೆಗಳಿಗೆ ಹೊಡೆದುಕೊಂಡು ತೆರಳಿ ಮಾರಾಟ ಮಾಡುತ್ತಿದ್ದರೆಂದು ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ. ಇಬ್ಬರು ಆರೋಪಿಗಳು ತಾಲೂಕಿನ ಮೋಟೆಬೆನ್ನೂರಿನ ರಾಷ್ಟ್ರೀಯ ಹೆದ್ದಾರಿಯ ಕೆಳಸೇತುವೆ ಬಳಿ 5 ಕುರಿಗಳನ್ನು ಹಿಡಿದುಕೊಂಡು ಬೇರೆಡೆಗೆ ಸಾಗಿಸಲು ವಾಹನ ಕಾಯುತ್ತಾ ನಿಂತಿದ್ದಾಗ ಸಿಕ್ಕಿ ಹಾಕಿಕೊಂಡಿದ್ದಾರೆ. ಬಳಿಕ ಇವರನ್ನು 5 ಕುರಿ ಸಮೇತ ಪೋಲಿಸ್ ಠಾಣೆಗೆ ಕರೆತರಲಾಗಿದೆ.

ಈ ವೇಳೆ ಪಿಎಸ್ಯ ಮಹಾಂತೇಶ ಎಂ.ಎಂ, ಕ್ರೈಮ್ ಪಿಎಸ್ಐ ಎಚ್.ಎನ್.ಕಂಬಳಿ, ಪೋಲಿಸ್ ಸಿಬ್ಬಂದಿಗಳಾದ ಹನುಮಂತ ಕಡೇಮನಿ, ಮಾಲತೇಶ ಈರಣ್ಣನವರ, ಮಂಜುನಾಥ ಮೂಕಿ, ಹನುಮಂತ ಸುಂಕದ ಇದ್ದರು.