ಮುಂಬೈ, ಮೇ ೬ ಸಂಘಟಿತ ಆಟದ ಫಲವಾಗಿ ಮಹತ್ವದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು 9 ವಿಕೆಟ್ ಗಳಿಂದ ಮಣಿಸಲು ಸಾಧ್ಯವಾಯಿತು ಎಂದು ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶಮರ್ಾ ಅಭಿಪ್ರಾಯ ಪಟ್ಟಿದ್ದಾರೆ.
'ತಂಡದ ಪ್ರತಿಯೊಬ್ಬ ಆಟಗಾರ ಪಂದ್ಯದ ಸ್ಥಿತಿಯನ್ನೇ ಬದಲಿಸ ಬಲ್ಲ ಕ್ಷಮತೆ ಹೊಂದಿದ್ದಾರೆ. ಬೌಲರ್ ಗಳು ಕೆಕೆಆರ್ ತಂಡವನ್ನು 140 ರನ್ ಗಳಿಗಿಂತಲೂ ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿದರು. ಕೋಲ್ಕತಾ ಇನ್ನಿಂಗ್ಸ್ ಆರಂಭಿಸಿದ ಧಾಟಿಯನ್ನು ನೋಡಿದರೆ, 180 ರನ್ ಆಗುತ್ತದೆ ಎಂದು ಅಂದು ಕೊಂಡಿದ್ದೆ. ಆದರೆ, ಬೌಲರ್ ಗಳು ಭರ್ಜರಿ ಪ್ರದರ್ಶನ ನೀಡಿದರು' ಎಂದು ರೋಹಿತ್ ಬೌಲರ್ ಗಳನ್ನು ಹೊಗಳಿದ್ದಾರೆ.
ಐಪಿಎಲ್ ನಲ್ಲಿ ಉತ್ತಮ ಆರಂಭ ನಮಗೆ ಲಭಿಸಿರಲಿಲ್ಲ. ನಂತರ ತಂಡ ಭರ್ಜರಿಯಾಗಿ ಪ್ರದರ್ಶನ ನೀಡಿ ಪುಟಿದೆದ್ದಿದೆ. ಎಲ್ಲ ಆಟಗಾರರು ತಮ್ಮ ಜವಾಬ್ದಾರಿ ಅರಿತು ಆಡಿದ್ದಾರೆ. ಮೂರು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದೇವೆ. ಆಗಲೂ ತಂಡದ ಕೊನೆಯಲ್ಲಿ ಸ್ಥಿರ ಪ್ರದರ್ಶನ ನೀಡಿತ್ತು. ಇನ್ನು ಕೆಲವು ವಿಭಾಗಗಳಲ್ಲಿ ಚೇತೋಹಾರಿ ಪ್ರದರ್ಶನ ನೀಡಿ, ನ್ಯೂನತೆಯನ್ನು ಮೆಟ್ಟಿ ನಿಲ್ಲುವ ವಿಶ್ವಾಸ ಇರೋದಾಗಿ ತಿಳಿಸಿದ್ದಾರೆ.
ಮುಂಬೈ ತಂಡ ಪ್ಲೇ ಆಫ್ ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಾದಾಟ ನಡೆಸಲಿದೆ. ಈ ಪಂದ್ಯಕ್ಕೆ ಚೆನ್ನೈ ಆತಿಥ್ಯ ನೀಡಲಿದೆ.