ಹೈದರಾಬಾದ್, ಜ ೧೮, ಹೀರಾ ಗ್ರೂಪ್ ಠೇವಣಿದಾರರ ಹಗರಣದಲ್ಲಿ ಹೈದ್ರಾಬಾದ್ ಪ್ರಕರಣದಲ್ಲಿ ನೌಹೀರಾ ಶೇಖ್‌ಗೆ ಜಾಮೀನು ಲಭಿಸಿದ್ದರೂ, ಜೈಲು ವಾಸದಿಂದ ವಿಮುಕ್ತಿ ದೊರಕಿಲ್ಲ ನಾಂಪಲ್ಲಿ ನ್ಯಾಯಾಲಯ ಜಾಮೀನು ಆದೇಶ ಮಂಜೂರು ಮಾಡಿದ ದಿನವೇ ಆಕೆಯನ್ನು ಮುಂಬೈ ಪೊಲೀಸರು ಬಂಧಿಸಿ ಆಕೆಯನ್ನು ಅಲ್ಲಿಗೆ ಕರೆದೊಯ್ದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.ಜಾಮೀನಿನ ಮೇಲೆ ಬಿಡುಗಡೆಗೆ ಅಕೆಯ ಪರ ವಕೀಲರು ಪ್ರಯತ್ನ ನಡೆಸಿದ್ದಾರೆ. ಈ ತಿಂಗಳ ಕೊನೆಯಲ್ಲಿ ಆಕೆ ಬಿಡುಗಡೆಗೊಳ್ಳುವ ಸಾಧ್ಯತೆಯಿದೆ ಎಂದು ವಕೀಲರು ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲೂ ಕೂಡ ಠೇವಣಿದಾರರನ್ನು ವಂಚಿಸಿದ ಆರೋಪ ನೌಹೀರಾ ಎದುರಿಸುತ್ತಿದ್ದಾರೆ. ನೌಹೀರಾ ಸಲ್ಲಿಸಿರುವ ಹೊಸ ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂಬೈ ಹೈಕೋರ್ಟ್ ಈ ತಿಂಗಳ ೨೯ ಕ್ಕೆ ಮುಂದೂಡಿದೆ. ಜಾಮೀನು ನೀಡಿದರೆ ಸಂತ್ರಸ್ತ ಠೇವಣಿದಾರರ ಹಣ ವಾಪಸ್ಸು ನೀಡಲು ಕ್ರಮ ಕೈಗೊಳ್ಳುವುದಾಗಿ ನೌಹೀರಾ ಭರವಸೆ ನೀಡಿದರೂ ನ್ಯಾಯಾಲಯಕ್ಕೆ ಅದನ್ನು ಮನವರಿಕೆ ಮಾಡುವಲ್ಲಿ ಆಕೆ ವಿಫಲವಾಗಿದ್ದಾರೆ ಎಂದು ವರದಿಯಾಗಿದೆ.