ಬೆಳೆವಿಮೆ ಪರಿಹಾರ ಸಾಲದ ಕಂತಿಗೆ ಹೊಂದಾಣಿಕೆ ಮಾಡದಿರಲು ಜಿಲ್ಲಾಧಿಕಾರಿ ಸೂಚನೆ

 


ಬೆಳಗಾವಿ, ಜುಲೈ 12(ಕನರ್ಾಟಕ ವಾತರ್ೆ): " ರೈತರ ಖಾತೆಗೆ ಜಮಾ ಆಗುವ ಬೆಳೆವಿಮೆ ಪರಿಹಾರವನ್ನು ಯಾವುದೇ ಕಾರಣಕ್ಕೂ ಬ್ಯಾಂಕುಗಳು ರೈತರ ಸಾಲದ ಕಂತುಗಳಿಗೆ ಹೊಂದಾಣಿಕೆ ಮಾಡಬಾರದು ಎಂದು ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಅವರು ಸೂಚನೆ ನೀಡಿದ್ದಾರೆ. 

ಹುಕ್ಕೇರಿ ತಾಲ್ಲೂಕಿನ ಹುನ್ನೂರ ನಿರೀಕ್ಷಣಾ ಮಂದಿರದ ಸಭಾಂಗಣದಲ್ಲಿ ಗುರುವಾರ (ಜು.  12) ನಡೆದ ಕಂದಾಯ ಅಧಿಕಾರಿಗಳ ಜಿಲ್ಲಾಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಯಾವುದೇ ಬ್ಯಾಂಕುಗಳು ಬೆಳೆವಿಮೆ ಪರಿಹಾರವನ್ನು ಸಾಲದ ಕಂತುಗಳಿಗೆ ಹೊಂದಾಣಿಕೆ ಮಾಡಿರುವುದು ಕಂಡುಬಂದರೆ ಕ್ರಮಕೈಗೊಳ್ಳುವುದು ಎಂದು ಎಚ್ಚರಿಕೆ ನೀಡಿದರು. 

ಈ ಬಗ್ಗೆ ಈಗಾಗಲೇ ಬ್ಯಾಂಕುಗಳಿಗೆ ನಿದರ್ೆಶನ ನೀಡಲಾಗಿದೆ.ಆದಾಗ್ಯೂ ಮತ್ತೊಮ್ಮೆ ಸೂಚನೆ ನೀಡುವಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ತಿಳಿಸಿದರು. 

ಅದೇ ರೀತಿ ಬೆಳೆವಿಮೆ ಪರಿಹಾರವನ್ನು ತಕ್ಷಣವೇ ರೈತರ ಖಾತೆಗಳಿಗೆ ಜಮಾ ಮಾಡಲು ಕ್ರಮ ವಹಿಸುವಂತೆ ಸೂಚನೆ ನೀಡಿದರು. 

ಪರಿಹಾರ ಹಣ ಖಾತೆಗಳಿಗೆ ನೇರವಾಗಿ ಜಮಾ ಆಗುತ್ತಿದ್ದು, ಉಳಿದವರಿಗೆ ಇನ್ನೆರಡು ದಿನಗಳಲ್ಲಿ ಜಮಾ ಆಗಲಿದೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಸಭೆಯಲ್ಲಿ ತಿಳಿಸಿದರು. 


ರೈತರ ಆತ್ಮಹತ್ಯೆ-ತಕ್ಷಣ ಪರಿಹಾರಕ್ಕೆ ಸೂಚನೆ: 

ಜಿಲ್ಲೆಯ ಯಾವುದೇ ಭಾಗದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡರೆ ಸಂಬಂಧಪಟ್ಟ ಕಂದಾಯ ಅಧಿಕಾರಿಗಳು ಹಾಗೂ ತಹಶಿಲ್ದಾರ ಅವರು ರೈತನ ಮನೆಗೆ ಭೇಟಿ ನೀಡಬೇಕು. 

ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ತಕ್ಷಣವೇ ಪರಿಹಾರ ಒದಗಿಸಬೇಕು.  

ಎಫ್ಎಸ್ಎಲ್ ವರದಿ ವಿಳಂಬ ಎಂಬ ನೆಪವೊಡ್ಡಿ ಪರಿಹಾರ ವಿತರಣೆ ವಿಳಂಬ ಮಾಡಬಾರದು. ಆದಷ್ಟು ಬೇಗನೇ ವರದಿ ತರಿಸಿಕೊಂಡು ಪರಿಹಾರ ಒದಗಿಸಬೇಕು. 

ಪರಿಹಾರ ಮಾತ್ರವಲ್ಲದೇ ಮೃತ ರೈತರ ಅವಲಂಬಿತರಿಗೆ ಪಿಂಚಣಿ ಒದಗಿಸಲು ಕ್ರಮಕೈಗೊಳ್ಳಬೇಕು. ಸ್ವತಃ ಕಂದಾಯ ಅಧಿಕಾರಿಗಳೇ ಮೃತ ರೈತನ ಮನೆಗೆ ತೆರಳಿ ಅಜರ್ಿ ಪಡೆದುಕೊಂಡು ಸಕರ್ಾರದ ಸೌಲಭ್ಯ ಒದಗಿಸಬೇಕು ಎಂದು ಸೂಚನೆ ನೀಡಿದರು. 


ಮಳೆ ಕೊರತೆ: 

ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ. 17 ರಷ್ಟು ಮಳೆ ಕಡಿಮೆ ಆಗಿದೆ. ಇದುವರೆಗೆ ಶೇ.77ರಷ್ಟು ಬಿತ್ತನೆ ಆಗಿದ್ದು, ಜುಲೈ ಅಂತ್ಯಕ್ಕೆ ಶೇ.100ರಷ್ಟು ಬಿತ್ತನೆ ಆಗಲಿದೆ ಎಂದು ಕೃಷಿ ಇಲಾಖೆಯ ಜಂಟಿ ನಿದರ್ೆಶಕ ಜಿಲಾನಿ ಮೊಕಾಶಿ ತಿಳಿಸಿದರು. 

ಜಿಲ್ಲೆಯಲ್ಲಿ ಬೀಜ-ಗೊಬ್ಬರ ಹಾಗೂ ಮೇವಿನ ಕೊರತೆ ಇಲ್ಲ ಎಂದು ವಿವರಿಸಿದರು. 

ಎಲ್ಲಿಯೇ ಆಗಲಿ ಬೀಜ-ಗೊಬ್ಬರದ ಸಮಸ್ಯೆ ಕಂಡುಬಂದರೆ ತಕ್ಷಣವೇ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಿಯಾವುಲ್ಲಾ ಸೂಚನೆ ನೀಡಿದರು. 

ಅತಿವೃಷ್ಟಿಯಿಂದ ಮನೆಗಳಿಗೆ ಹಾನಿಯಾಗಿದ್ದರೆ ಸಕರ್ಾರದ ಹೊಸ ಆದೇಶದ ಅನ್ವಯ ಹೆಚ್ಚಿನ ಪರಿಹಾರ ನೀಡುವುದು ಸಾಧ್ಯವುದೆ. ಆದ್ದರಿಂದ ಹೊಸ ಮಾರ್ಗಸೂಚಿಯ ಪ್ರಕಾರವೇ ಪರಿಹಾರ ಒದಗಿಸುವಂತೆ ಕಂದಾಯ ಅಧಿಕಾರಿಗಳಿಗೆ ನಿದರ್ೆಶನ ನೀಡಿದರು. 


ಪ್ರತಿ ಹಳ್ಳಿಗೂ ಸ್ಮಶಾನ ಭೂಮಿ: 

ಈಗಲೂ ಕೂಡ ಪರಿಶಿಷ್ಟ ಜಾತಿಯವರಿಗೆ ಸ್ಮಶಾನಭೂಮಿ ಇಲ್ಲ ಎಂಬುದು ವಿಷಾದನೀಯ. ಆದ್ದರಿಂದ ಪ್ರತಿಯೊಂದು ಹಳ್ಳಿಯಲ್ಲೂ ಸ್ಮಶಾನಭೂಮಿ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ಜಿಲ್ಲಾಧಿಕಾರಿ ಅವರು ತಹಶೀಲ್ದಾರರಿಗೆ ಸೂಚನೆ ನೀಡಿದರು. 

ಸ್ಮಶಾನಭೂಮಿಗಳಿಗೆ ನರೇಗಾ ಯೋಜನೆ ಅಡಿಯಲ್ಲಿ ಬೇಲಿ ಹಾಕಲು ಅವಕಾಶವಿದ್ದು, ಈ ಬಗ್ಗೆ ಜಿಲ್ಲಾ ಪಂಚಾಯತ ಸಿಇಒ ಅವರ ಜತೆ ಚಚರ್ಿಸಲಾಗಿದೆ. ಈ ಕುರಿತೂ ಗಮನಹರಿಸುವಂತೆ ತಿಳಿಸಿದರು. 


ಸಮಾಜಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿಶಾಲೆ ನಿಮರ್ಾಣಕ್ಕೆ ಅಗತ್ಯವಿರುವ ಜಮೀನನ್ನು ಒದಗಿಸಲು ಆದ್ಯತೆ ನೀಡುವಂತೆ ತಿಳಿಸಿದರು. 

ವಕ್ಫ್ ಆಸ್ತಿಗಳ ಅತಿಕ್ರಮಣ ತೆರವು ಮತ್ತು ಖಾತಾ ಬದಲಾವಣೆಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಹೇಳಿದರು. 


ಅಪರ ಜಿಲ್ಲಾಧಿಕಾರಿ ಡಾ.ಎಚ್.ಬಿ.ಬೂದೆಪ್ಪ, ಪ್ರೊಬೇಷನರಿ ಐಎಎಸ್ ಅಧಿಕಾರಿ ಭರತಸಿಂಗ್ ಮೀನಾ, ಉಪ ವಿಭಾಗಾಧಿಕಾರಿಗಳಾದ ಗೀತಾ ಕೌಲಗಿ, ವಿಜಯಕುಮಾರ್ ಹೊನಕೇರಿ, ಡಾ.ಕವಿತಾ ಯೋಗಪ್ಪನವರ, ಎಲ್ಲ ತಾಲ್ಲೂಕುಗಳ ತಹಶೀಲ್ದಾರರು ಹಾಗೂ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. 


ಬೆಳಿಗ್ಗೆಯಿಂದ ಸಂಜೆಯವರೆಗೂ ನಡೆದ ಸಭೆಯಲ್ಲಿ ಇನ್ಪುಟ್ ಸಬ್ಸಿಡಿ, ರೈತರ ಆತ್ಮಹತ್ಯೆಯ ಪ್ರಕರಣಗಳು, ಕಂದಾಯ ಅದಾಲತ್, ಸಾಮಾಜಿಕ ಭದ್ರತಾ ಯೋಜನೆಗಳು, ಬಾಕಿ ಇರುವ ಪೋಡಿ ಪ್ರಕರಣಗಳ ವಿಲೇವಾರಿ, ಕಂದಾಯ ಗ್ರಾಮಗಳ ರಚನೆ, ಪಿಂಚಣಿ ಅದಾಲತ್, ಸಕಾಲ ಸೇವೆಗಳನ್ನು ಒದಗಿಸುವಿಕೆ, ಜಾತಿ-ಆದಾಯ ಸೇರಿದಂತೆ ಹೊಸ ತಾಲ್ಲೂಕಿನಲ್ಲಿ ಮಿನಿ ವಿಧಾನಸೌಧ ನಿಮರ್ಾಣ ಸೇರಿದಂತೆ ಅನೇಕ ವಿಷಯಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.