ಸಂಕ್ರಾಂತಿ ಕಳೆದ ಬಳಿಕಅರ್ಹ ಶಾಸಕರಿಗೆ ಒಳ್ಳೆಯ ದಿನ ಬರುತ್ತದೆ : ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹೇಳಿಕೆ

ಕೊಪ್ಪಳ,ಜ 12:          ಮಕರ ಸಂಕ್ರಾಂತಿ ಕಳೆದ ಮೇಲೆ ಅರ್ಹರಾದ ಶಾಸಕ ರಿಗೆ ಒಳ್ಳೇ ಕಾಲ ಬರುತ್ತೆ.ಈ ಬಗ್ಗೆ ಮುಖ್ಯಮಂತ್ರಿಗಳು ಸೂಕ್ತ ತೀರ್ಮಾನ ತೆಗೆದು ಕೊಳ್ಳುತ್ತಾರೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ತಿಳಿಸಿದರು.

ನಗರದಲ್ಲಿಂದು ಸುದ್ದಿಗಾರರ ಜೊತೆ  ಮಾತನಾಡಿದ ಅವರು,ಸರ್ಕಾರ ಆನೆಗೊಂದಿ ಹಾಗೂ ಹಂಪಿ ಉತ್ಸವವನ್ನು ಯಶಸ್ವಿಯಾಗಿ ನಡೆಸಿದೆ.ಕೊಪ್ಪಳದ ಗವಿಮಠ ಜಾತ್ರೆ ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿಯಾಗಿದೆ. ಹಾಗಾಗಿ ಬಹಳಷ್ಟು ಜನ ಪ್ರತಿನಿಧಿಗಳು ಜಾತ್ರೆಯಲ್ಲಿ ಭಾಗವಹಿಸುತ್ತಾರೆ ಎಂದು ತಿಳಿಸಿದರು.   

ಕನಕಗಿರಿ ಉತ್ಸವ ಕುರಿತು ಪೂರ್ವಭಾವಿ ಸಭೆ ಈಗಾಗಲೇ ನಡೆದಿದ್ದು,ಮಾರ್ಚ್ ಕೊನೆಗೆ ಇಲ್ಲವೇ ಏಪ್ರಿಲ್ ಮೊದಲ ವಾರದಲ್ಲಿ ಕನಕಗಿರಿ ಉತ್ಸವ ನಡೆಸಲು ಪ್ರಸ್ತಾ ವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಜಿಲ್ಲಾಡಳಿತ ಒಂದೂವರೆ ಕೋಟಿ ರೂಪಾಯಿ ಅನುದಾನವನ್ನು ಕನಕಗಿರಿ ಉತ್ಸವಕ್ಕಾಗಿ ಕೇಳಿದೆ.ಈ ಬಗ್ಗೆ ಸರ್ಕಾರದ ಜೊತೆ ಮಾತುಕತೆ ನಡೆಸಲಾಗುವುದು. ಇನ್ನು ಮುಂದೆ ಪ್ರತಿ ವರ್ಷ ಹಂಪಿ, ಆನೆಗೊಂದಿ ಹಾಗೂ ಕನಕಗಿರಿ ಉತ್ಸವ ನಡೆಸಲು ದಿನಾಂಕ ವನ್ನು ನಿಗದಿ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.   

ಹೆಚ್.ಡಿ.ಕುಮಾರಸ್ವಾಮಿ ಆಗಲಿ, ಸಿದ್ದರಾಮಯ್ಯ ಆಗಲಿ,ನಮ್ಮ ಪಕ್ಷದ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ಳುತ್ತಾರೆ.ಕುಮಾರಸ್ವಾಮಿ ಅವರು ಕೊಳಕು ಹೇಳಿಕೆ ಕೊಡು ವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಅವರ ಹುಳುಕನ್ನು ಹೊರ ತೆಗೆಯುತ್ತೇನೆ ಎಂದು ಲಕ್ಷ್ಮಣ ಸವದಿ ಮಾಜಿ ಸಿಎಂ ಹೆಚ್ಡಿಕೆಗೆ ಎಚ್ಚರಿಕೆ ನೀಡಿದ್ದಾರೆ.   

ಇನ್ನು ಪೌರತ್ವ ಕಾನೂನಿನ ಬಗ್ಗೆ ಬಿಜೆಪಿಯೇತರರು ಗೊಂದಲ ಸೃಷ್ಟಿಸುತ್ತಿದ್ದಾರೆ. ಈ ಬಗ್ಗೆ ದಂಗೆ, ಗಲಭೆ ಸೃಷ್ಟಿಸಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದಾರೆ ಕಾಂಗ್ರೆಸ್ನವರು ಎಂದು ಅವರು ಆರೋಪಿಸಿದರು.