ಲೋಕದರ್ಶನ ವರದಿ
ಗದಗ 26: ಜಿಲ್ಲೆಯ 7 ತಾಲೂಕುಗಳ 7 ಕೇಂದ್ರಗಳಲ್ಲಿ ಜಿಲ್ಲಾಡಳಿತದ ಸಹಯೋಗದಿಂದ ಪ್ರಾಯೋಗಿಕವಾಗಿ 7 ವಾರಗಳ ಮದ್ಯವರ್ಜನ ಶಿಬಿರ ಆರಂಭಿಸುವಂತೆ ಜಿಲ್ಲಾಧಿಕಾರಿ ಮನೋಜ್ ಜೈನ್ ಅವರು ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಮುಳಗುಂದ ರಸ್ತೆಯಲ್ಲಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೇಂದ್ರ ಕಚೇರಿಯಲ್ಲಿ ಜರುಗಿದ ಅರ್ಹ ಫಲಾನುಭವಿಗಳಿಗೆ ಮಾಶಾಸನ, ಸುಜ್ಞಾನವಿಧಿ ಶಿಷ್ಯವೇತನ ಹಾಗೂ ವಿವಿಧ ಅನುದಾನಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಇಂದಿನ ದಿನಗಳಲ್ಲಿ ಗ್ರಾಮೀಣ ಭಾಗಗಳಲ್ಲಿ ಚಿಕ್ಕವಯಸ್ಸಿನಲ್ಲಿ ಮಕ್ಕಳು ಮದ್ಯಸೇವೆನೆ ಮಾಡುತ್ತಿರುವುದು ಅಘಾತಕಾರಿಯಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸ್ವ ಸಹಾಯ ಸಂಘಗಳು ಸಂಘಟನೆ ಸದಸ್ಯರುಗಳು ಸಂಘಟನೆಗೊಂಡು ಮದ್ಯಸೇವೆನೆ ಮಾಡಿ ಮನೆಗೆ ಬರುವ ಪುರುಷರಿಗೆ ಊಟ ನೀಡದಂತೆ ಕ್ರಮ ಕೈಗೊಳ್ಳಬೇಕು. ಅಲ್ಲದೇ ಇದೇ ಸಂಸ್ಥೆಯಲ್ಲಿ ಪುರುಷ ಪ್ರಗತಿ ಬಂದು ಸಂಘದ ಸದಸ್ಯರಿಗೆ ಸೌಲಭ್ಯಗಳನ್ನು ನೀಡುವ ಮುನ್ನ ಸಾರಾಯಿ ಸೇವನೆ ಮಾಡದಂತೆ ಪ್ರತಿಜ್ಞಾವಿಧಿ ಭೋದಿಸಬೇಕು ಎಂದು ಸಂಘಟಿಕರಿಗೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಸ್ವ ಸಹಾಯ ಗುಂಪಿನ ಮಹಿಳೆಯರಿಗೆ ಕಾಮರ್ಿಕ ಇಲಾಖೆಯ ಸದಸ್ಯತ್ವವನ್ನು ನೀಡಿ ಅವರಿಗೆ ಇಲಾಖೆಯ ಯೋಜನೆಗಳನ್ನು ಸದುಪಯೋಗ ಪಡೆಸಿಕೊಳ್ಳುವಂತೆ ಮಾಡಬೇಕು. ಅಲ್ಲದೇ, ಮಹಿಳೆಯರ ರಕ್ಷಣೆ ಹಾಗೂ ಕಾನೂನು ಕುರಿತು ಜಾಗೃತಿ ಮೂಡಿಸಬೇಕು ಈ ಬಗ್ಗೆ ಜಿಲ್ಲಾಡಳಿತ ಸಹಕಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಮನೋಜ್ ಜೈನ್ ಅವರು ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ಅಧಿಕಾರಿ ಗಂಗಾಧರ ರೈ ಅವರು ಮಾತನಾಡಿ, ಬೆಳ್ತಂಗಡಿಯಲ್ಲಿ ಸ್ಥಾಪನೆಯಾದ ಈ ಸಂಸ್ಥೆ ಇಂದು ರಾಜ್ಯಾದ್ಯಂತ ಹೆಮ್ಮರವಾಗಿ ಆವರಸಿಕೊಂಡಿದೆ. ನಾಡಿನಾದ್ಯಾಂತ 4.5 ಲಕ್ಷ ಜನರಿಗೆ ತರಬೇತಿ ನೀಡಲಾಗಿದೆ. ಗ್ರಾಮೀಣ ಅಭಿವೃದ್ದಿಗಾಗಿ 4.30 ಲಕ್ಷ ಸ್ವಸಹಾಯ ಸಂಘಗಳನ್ನು ಸ್ಥಾಪನೆ ಮಾಡಿರುವದರಿಂದ 42 ಲಕ್ಷ ಸದಸ್ಯರು ನೇರವಾಗಿ ಬ್ಯಾಂಕನೊಂದಿಗೆ ವ್ಯವಹಾರವನ್ನು ಮಾಡುತ್ತಿದ್ದಾರೆ. ಪ್ರಸಕ್ತ ವರ್ಷದಲ್ಲಿ 10 ಸಾವಿರ ಕೋಟಿ ರೂ.ಗಳನ್ನು ಸಾಲ ನೀಡುವ ಉದ್ದೇಶ ಹೊಂದಲಾಗಿದೆ. 1200 ಮಧ್ಯವರ್ಜನ ಕೇಂದ್ರವನ್ನು ಸ್ಥಾಪಿಸಿ ಲಕ್ಷಾಂತರ ಜನರನ್ನು ವ್ಯಸನಮುಕ್ತರನ್ನಾಗಿ ಮಾಡಲಾಗಿದೆ. 10 ಸಾವಿರ ವಿದ್ಯಾಥರ್ಿಗಳಿಗೆ ಶಿಷ್ಯವೇತನ, 9800 ಜನರಿಗೆ ಮಾಶಾಸನ ಹಾಗೂ 84 ಕೆರೆಗಳನ್ನು ಹೂಳೆತ್ತಲಾಗಿದೆ ಎಂದು ಹೇಳಿದರು.
ಜಿಪಂ ಪ್ರಬಾರ ಸಿಇಒ ಎಸ್.ಸಿ.ಮಹೇಶ ಅವರು ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸ್ವಸಹಾಯ ಸಂಘದ ಸದಸ್ಯರುಗಳು ನೈತಿಕವಾಗಿ ಸಂಸ್ಥೆಯ ಜೊತೆಗಿದ್ದರೂ ಆಥರ್ಿಕ ನೆರವಿನಿಂದ ಸದೃಡರಾಗಿದ್ದಾರೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ 66 ಜನರಿಗೆ ಮಾಶಾಸನ, 11 ಜನ ಕೃಷಿಕರಿಗೆ ಸಹಾಯಧನ ಹಾಗೂ 18 ವಿದ್ಯಾಥರ್ಿಗಳಿಗೆ ಸುಜ್ಞಾನವಿಧಿ ಶಿಷ್ಯವೇತನ ನೀಡಲಾಯಿತು.
ಪತ್ರಕರ್ತ ಮಂಜುನಾಥ ಬಮ್ಮನಕಟ್ಟಿ, ಉದ್ಯಮಿ ಈಶ್ವರಸಾ ಮೆಹರವಾಡೆ, ಕೇಂದ್ರದ ಅಧಿಕಾರಿ ಶಿವಾನಂದ ಆಚಾರ ಸೇರಿದಂತೆ ಮುಂತಾದವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಸುಖೇಶ ಎ.ಎಸ್. ಅವರು ಕಾರ್ಯಕ್ರಮ ನಿರೂಪಿಸಿದರು.