ಹುಬ್ಬಳ್ಳಿ, ಜ 17 : ಪೌರತ್ವ ತಿದ್ದುಪಡಿ ಕಾಯ್ದೆ ಸಿಎಎ ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ ಎನ್ಆರ್ಸಿ ವಿರುದ್ಧ ಕಾಂಗ್ರೆಸ್ ಸೇರಿದಂತೆ ವಿವಿಧ ಎಡಪಕ್ಷಗಳು ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಮನೆ-ಮನೆ ಪ್ರಚಾರಕ್ಕೆ ಪೊಲೀಸರು ನಿರಾಕರಿಸಿದ ಹಿನ್ನೆಲೆಯಲ್ಲಿ ಪ್ರಚಾರವನ್ನು ಪ್ರತಿಭಟನೆಯನ್ನಾಗಿ ಪರಿವರ್ತಿಸಿದ ಘಟನೆ ನಡೆದಿದೆ.
ಕಾಂಗ್ರೆಸ್ ಮುಖಂಡ ಅಶ್ಫಾಕ್ ಕುಮ್ತಾಕರ್, ಬಾಬಜನ್ ಮುಧೋಳ್, ಕಾರ್ಯಕರ್ತ ಸಿದ್ದು ತೇಜಿ ಮತ್ತಿತರರ ನೇತೃತ್ವದಲ್ಲಿ ಸಂಘಟಕರು ಸಿಎಎ ಮತ್ತು ಎನ್ಆರ್ಸಿ ವಿರುದ್ಧ ಅಭಿಯಾನವನ್ನು ನಡೆಸಲು ಯೋಜಿಸಿದ್ದರು ಮತ್ತು ಗಣೇಶಪೇಟೆ ಪ್ರದೇಶದ ಮನೆಗಳ ಹೊರಗೆ ಸ್ಟಿಕ್ಕರ್ಗಳನ್ನು ಅಂಟಿಸಲು ಬಯಸಿದ್ದರು.
ಪ್ರತಿಭಟನಾಕಾರರು ಇಲ್ಲ ಸಿಎಎ, ಎನ್ಆರ್ಸಿ ಇಲ್ಲ ಎಂದು ಘೋಷವಾಕ್ಯದ ಸ್ಟಿಕ್ಕರ್ಗಳೊಂದಿಗೆ ಆಗಮಿಸಿದ್ದರು. ಆದರೆ, ಅಭಿಯಾನಕ್ಕೆ ಮುಂದಾಗಲು ಅಥವಾ ಸ್ಟಿಕ್ಕರ್ಗಳನ್ನು ವಿತರಿಸಲು ಪೊಲೀಸರು ಅವರಿಗೆ ಅವಕಾಶ ನೀಡಲಿಲ್ಲ.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಭಾಷಣಕಾರರು, ದೇಶವನ್ನು ಧಾರ್ಮಿಕ ದೃಷ್ಟಿಯಿಂದ ವಿಭಜಿಸಲು ಕೇಂದ್ರ ಪ್ರಯತ್ನಿಸುತ್ತಿದೆ. ಸಿಎಎ ಜೊತೆ, ಒಬ್ಬರ ಪೌರತ್ವವನ್ನು ಸಾಬೀತುಪಡಿಸುವ ಹೊರೆ ನಾಗರಿಕರ ಮೇಲೆ ಬೀಳುತ್ತದೆ ಎಂದು ಹೇಳಿದರು.
ನಿರುದ್ಯೋಗ ಮತ್ತು ಆಥರ್ಿಕ ಮಂದಗತಿಯಂತಹ ನೈಜ ಸಮಸ್ಯೆಗಳಿಂದ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು.
ತರುವಾಯ ಪ್ರತಿಭಟನಾಕಾರರು ರಸ್ತೆಬದಿಯ ಮೂಲಕ ಪ್ರದರ್ಶನ ನಡೆಸಿದರು. ಶನಿವಾರ ನಿಗದಿಯಾಗಿದ್ದ ಸಿಎಎ ಪರ ಸಮಾವೇಶಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹುಬ್ಬಳ್ಳಿಗೆ ಭೇಟಿ ನೀಡದಂತೆ ಅವರು ಒತ್ತಾಯಿಸಿ ಅವರ ವಿರುದ್ಧ ಘೋಷಣೆ ಕೂಗಿದರು.
ಅಮಿತ್ ಶಾ ಭೇಟಿಯ ವೇಳೆ ಕಪ್ಪು ಬಾವುಟ ಪ್ರದರ್ಶಿಸಲು ಉದ್ದೇಶಿಸಿರುವುದಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ಈ ಹಿಂದೆ ಘೋಷಿಸಿತ್ತು. ಅಲ್ಲದೆ ಕೇಂದ್ರ ಸರ್ಕಾರವು ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತದೆ ಎಂದು ಡಿಸಿಸಿ ನಾಯಕರು ಆರೋಪಿಸಿದ್ದರು.