ಬೆಳಗಾವಿ 24: ಮಹಾಂತೇಶ ನಗರದ ಲವ್ಡೇಲ್ ಸೆಂಟ್ರಲ್ ಶಾಲೆಯ ವತಿಯಿಂದ ಮಂಗಳವಾರ ದಿ. 24ರಂದು ಡೆಂಗ್ಯೂ ಮತ್ತು ಮಲೇರಿಯಾ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.
ಜಾಥಾ ಕಾರ್ಯಕ್ರಮದಲ್ಲಿ ಶಾಲೆಯ 9 ನೇ ತರಗತಿಯ ವಿದ್ಯಾಥರ್ಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಶಾಲೆಯ ಪ್ರಾಚಾರ್ಯ ಲಕ್ಷ್ಮೀ ಇಂಚಲ್ ಅವರು ವಿದ್ಯುಕ್ತವಾಗಿ ಉದ್ಘಾಟಿಸಿದರು.
ಜಾಥಾವನ್ನು ಉದ್ಘಾಟಿಸಿ ಪ್ರಾಚಾರ್ಯ ಲಕ್ಷ್ಮೀ ಇಂಚಲ್ ರವರು ಮಾತನಾಡಿ-'ಡೆಂಗ್ಯು ಮತ್ತು ಮಲೇರಿಯಾ ರೋಗಗಳು ಅತ್ಯಂತ ಭಯಾನಕ ರೋಗಗಳಾಗಿದ್ದು, ಅವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಇಂತಹ ಜಾಗೃತಿ ಕಾರ್ಯಕ್ರಮಗಳ ಅವಶ್ಯಕತೆಯಿದ್ದು, ಈ ದಿಸೆಯಲ್ಲಿ ಶಾಲಾ ಮಕ್ಕಳು ತಮ್ಮ ಮನೆಯ ಪರಿಸರಗಳಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಕಾರ್ಯಪ್ರವೃತ್ತರಾಗಬೇಕು ಎಂದು ವಿದ್ಯಾಥರ್ಿಗಳಿಗೆ ಕರೆ ನೀಡಿದರು.
ಜಾಗೃತಿ ಜಾಥಾ ಕಾರ್ಯಕ್ರಮವು ಶ್ರೀನಗರದ ಉದ್ಯಾನವನದಿಂದ ಆರಂಭಗೊಂಡಿತು. ಉದ್ಯಾನವನ ವೃತ್ತದಲ್ಲಿ ವಿದ್ಯಾಥರ್ಿಗಳು ಡೆಂಗ್ಯು ಮತ್ತು ಮಲೇರಿಯಾ ರೋಗಗಳ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸುವ ನಾಟಕ ಮತ್ತು ರೂಪಕಗಳು ಜನರಲ್ಲಿ ಜಾಗೃತಿ ಮೂಡಿಸಿದವು. ಉದ್ಯಾನವನದಿಂದ ಸಾಗಿದ ಜಾಥಾವು ಮಾಳಮಾರುತಿ ಪೋಲಿಸ್ ಠಾಣೆಯ ಮುಂಭಾಗ, ಶಿದ್ನಾಳ ಬಸ್ ನಿಲ್ದಾಣ, ಪಿ.ಎನ್.ಟಿ. ಕ್ವಾರ್ಟರ್ಸ, ಸರಕಾರಿ ಶಾಲೆ ನಂ.24 ರ ಮಾರ್ಗವಾಗಿ ಸಾಗಿ ಲವ್ಡೇಲ್ ಶಾಲೆಯ ಮುಂಭಾಗದಲ್ಲಿ ಅಂತ್ಯಗೊಂಡಿತು. ದಾರಿಯುದ್ದಕ್ಕೂ ವಿದ್ಯಾಥರ್ಿಗಳ ಘೋಷಣೆಗಳು, ಭಿತ್ತಿ ಪತ್ರಗಳು, ಜನರಲ್ಲಿ ಜಾಗೃತಿಯನ್ನು ಮೂಡಿಸಿದವು.
ಜಾಗೃತಿ ಜಾಥಾದಲ್ಲಿ ಶಾಲೆಯ 9 ನೆಯ ತರಗತಿಯ ವಿದ್ಯಾಥರ್ಿಗಳು,ಶಾಲಾ ಸಿಬ್ಬಂದಿ ಮತ್ತು ಮಾಳಮಾರುತಿ ಪೋಲಿಸ್ ಠಾಣೆಯ ಪೋಲಿಸ್ ಸಿಬ್ಬಂದಿಗಳು ಭಾಗವಹಿಸಿದ್ದರು. ಸೂಕ್ತ ಮುಂಜಾಗೃತಾ ಕ್ರಮವಾಗಿ ಪೋಲಿಸ್ ಬಂದೋಬಸ್ತ ವ್ಯವಸ್ಥೆ ಹಾಗೂ ಪ್ರಥಮ ಚಿಕಿತ್ಸಾ ವಾಹನ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.