ಲೋಕದರ್ಶನ ವರದಿ
ಬೆಳಗಾವಿ 03: "ಡೆಂಗ್ಯು ಜ್ವರ ಬಹಳ ಮಾರಕವಾಗಿದ್ದು, ಅದನ್ನು ತಡೆಗಟ್ಟಲು ಮುಂಜಾಗೃತಿ ಕ್ರಮ ಬಹಳ ಮುಖ್ಯವಾಗಿದೆ. ಅದನ್ನು ಬಹಳ ಮುತುವಜರ್ಿಯಿಂದ ಜಾಗೃತಿ ವಹಿಸಬೇಕು"ಎಂದು ಸ್ಥಳೀಯ ಬೆಳಗಾವಿ ಉತ್ತರ ಕ್ಷೇತ್ರ ಶಾಸಕರಾದ ಅನಿಲ ಬೆನಕೆ ಹೇಳಿದರು. ಅವರು ಸ್ಥಳೀಯ ಎಸ್ ಜಿ ವಿ ಮಹೇಶ ಪಿ ಯು ಕಾಲೇಜಿನಲ್ಲಿ ಡೆಂಗ್ಯು ಜ್ವರದ ಕುರಿತು ಜಾಗೃತಿ ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. "ಜ್ವರ ಬಂದಮೇಲೆ ಜಾಗೃತಿ ವಹಿಸುವುದಕ್ಕಿಂತಲೂ ಬರುವ ಮೊದಲೇೆ ಮುತುವಜರ್ಿವಹಿಸುವುದು ಸೂಕ್ತ" ಎಂದು ಹೇಳಿದರು.
ಡೆಂಗ್ಯು ಜ್ವರದ ಕುರಿತು ಅಥಿತಿಗಳಾದ ಬಿಎಚ್ಎಂಎಸ್ ಕಾಲೇಜಿನ ಪ್ರಾಚಾರ್ಯ ಡಾ. ಆನಂದ ಹೊಸುರ ಮಾಹಿತಿ ನೀಡಿದರು. ಜಾಥಾದಲ್ಲಿ ಸುಮಾರು 750 ವಿದ್ಯಾಥರ್ಿಗಳು ಭಾಗವಹಿಸಿದ್ದರು. ಪ್ರಾಚಾರ್ಯ ಎಂ ವಿ ಭಟ್ಟ ಉಪಸ್ಥಿತರಿದ್ದರು. ಉಪಪ್ರಾಚಾರ್ಯ ಆನಂದ ಖೋತ ಸ್ವಾಗತಿಸಿದರು. ಉಪನ್ಯಾಸಕ ರಾಜು ಭಟ್ಟ ನಿರ್ವಹಿಸಿದರು. ಡೆಂಗ್ಯು ಜಾಗೃತಿಯ ಕುರಿತು ಘೋಷಣೆ ಮತ್ತು ಬಿತ್ತಿ ಪತ್ರ ಹಂಚಲಾಯಿತು.ಜಾಥಾದಲ್ಲಿ ಕಾಲೇಜಿನ ಉಪನ್ಯಾಸಕರು ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.