ಯಾದಗಿರಿ: ಹೈದರಾಬಾದ್ ಕರ್ನಾ ಟಕದ ಕೃಷ್ಣಾ ಹಾಗೂ ಭೀಮಾ ನದಿ ತೀರದ ಜನರ ಸಂಕಷ್ಟ ಸದ್ಯಕ್ಕೆ ಕೊನೆಗೊಳ್ಳುವಂತೆ ಕಾಣುತ್ತಿಲ್ಲ ಭೀಕರ ಪ್ರವಾಹದ ನಂತರ ಇದೀಗ ಚಿಕುನ್ ಗುನ್ಯ ಹಾಗೂ ಡೆಂಗ್ಯೂ ಭೀತಿ ಎದುರಾಗಿದೆ.
ಯಾದಗಿರಿಯಲ್ಲಿ ಈವರೆಗೂ 1521 ಶಂಕಿತ ಡೆಂಗ್ಯೂ ಜ್ವರ ಹಾಗೂ 912 ಶಂಕಿತ ಚಿಕುನ್ ಗುನ್ಯಾ ಪ್ರಕರಣಗಳು ದಾಖಲಾಗಿವೆ ರೋಗಿಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ
ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಸಕರ್ಾರಿ ಆಸ್ಪತ್ರೆಗಳ ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಎಂ ಎಸ್ ಪಾಟೀಲ್ ಹೇಳಿದ್ದಾರೆ.
ಪ್ರವಾಹಪೀಡಿತ ಸ್ಥಳಗಳಿಗೆ ಆರೋಗ್ಯ ಇಲಾಖೆ ಕಾರ್ಯಕರ್ತರು ಭೇಟಿ ನೀಡಿ, ಜಠರದ ಉರಿ, ಟೈಫಾಯಿಡ್ ಹಾಗೂ ಇನ್ನಿತರ ಸಾಂಕ್ರಾಮಿಕ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ, "ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ನಾವು ಗರಿಷ್ಠ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದೇವೆ ಸಾಮಾನ್ಯವಾಗಿ ಪ್ರವಾಹದ ನೀರು ಕಡಿಮೆಯಾದ 15 ರಿಂದ 20 ದಿನಗಳ ನಂತರ ಸಾಂಕ್ರಾಮಿಕ ರೋಗ ಹರಡುತ್ತದೆ" ಎಂದು ಅವರು ಮಾಹಿತಿ ನೀಡಿದ್ದಾರೆ.
ಜನರು ಕಲುಷಿತ ನೀರನ್ನು ಕುಡಿಯುವವುದರಿಂದ ಇಂತಹ ಕಾಯಿಲೆಗಳಿಗೆ ಗುರಿಯಾಗಬೇಕಾಗುತ್ತದೆ ಹೀಗಾಗಿ ಕಾಯಿಸಿದ ನೀರನ್ನು ಕುಡಿಯಬೇಕು ಎಂದು ಜನರಲ್ಲಿ ವಿನಂತಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.