ಬೆಳಗಾವಿ 27: ತಾಲೂಕಿನ ರೈತ ಸಂಪರ್ಕ ಕೇಂದ್ರ, ಉಚಗಾಂವದ ಬೆಳಗುಂದಿ ಗ್ರಾಮದಲ್ಲಿ ಭತ್ತ ನಾಟಿ ಯಂತ್ರದ ಮೂಲಕ ಭತ್ತ ನಾಟಿ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಇತ್ತೀಚಿಗೆ ಹಮ್ಮಿಕೊಳ್ಳಲಾಗಿತ್ತು.
ಇಂದು ಕೃಷಿ ಕ್ಷೇತ್ರದಲ್ಲಿ ಕೂಲಿ ಕಾಮರ್ಿಕರ ಕೊರತೆಯು ಒಂದು ದೊಡ್ಡ ಸಮಸ್ಯೆಯಾಗಿದ್ದು, ಯಂತ್ರೋಪಕರಣಗಳು ಇದಕ್ಕೆ ಪರಿಹಾರ ಒದಗಿಸಬಲ್ಲದು. ರೈತರು ಕೈಯಿಂದ ನಾಟಿ ಮಾಡಿದಾಗ ಎಕರೆಗೆ 20 ಕಾಮರ್ಿಕರಿಗೆ ಒಂದು ದಿನ ತಗಲುತ್ತದೆ. ಆದರೆ ಇದೇ ಕಾರ್ಯವನ್ನು ಮಶಿನ್ ಮೂಲಕ ತೆಗೆದುಕೊಂಡಾಗ ಪ್ರತಿ ಮೂರು ಗಂಟೆಗೆ ಒಂದು ಎಕರೆ ನಾಟಿ ಮಾಡಬಹುದಾಗಿದೆ. ಈ ಪದ್ಧತಿಯಿಂದ ಕಾಮರ್ಿಕರ ಕೊರತೆಯು ನೀಗುವುದಲ್ಲದೆ ಸಮಯ ಹಾಗೂ ಖಚರ್ಿನಲ್ಲಿಯೂ ಉಳಿತಾಯ ಆಗುತ್ತದೆ.
ಯಂತ್ರಿಕೃತ ಭತ್ತಕ್ಕೆ ಇಲಾಖೆಯಿಂದ ಉಚಿತವಾಗಿ ಕೃಷಿ ಪರಿಕರಗಳನ್ನು ಕೊಡಲಾಗುತ್ತಿದೆ. ಅಲ್ಲದೆ ಪ್ರತಿ ಹೆಕ್ಟೇರ್ ಕ್ಷೇತ್ರಕ್ಕೆ ರೂ.1750ಗಳ ಪ್ರೋತ್ಸಾಹ ಧನವನ್ನು ಸಹ ನೀಡಲಾಗುತ್ತದೆ. ರೈತರು ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬೇಕೆಂದು ಬೆಳಗಾವಿ ಉಪ ಕೃಷಿ ನಿದರ್ೇಶಕ ಎಚ್.ಡಿ.ಕೋಳೇಕರ, ಸಹಾಯಕ ಕೃಷಿ ನಿದರ್ೇಶಕ ಜಿ.ಬಿ.ಕಲ್ಯಾಣಿ ಅವರು ತಿಳಿಸಿದ್ದಾರೆ.