ಅನುಮತಿ ಇಲ್ಲದೆ ಪಾಲಿಕೆಯ ವಾಣಿಜ್ಯ ಮಳಿಗೆ ಡೆಮಾಲಿಶ್ ಶುರು: ಬಿಜೆಪಿಯವರಿಂದ ಆಕ್ಷೇಪ ತಡೆ
Demolition of municipal commercial store begins without permission: BJP blocks objections
ಬಳ್ಳಾರಿ 13 : ನಗರದಲ್ಲಿ ಮತ್ತೆ ರಿಪಬ್ಲಿಕ್ ಆಡಳಿತ ಆರಂಭವಾದಂತಿದೆ. ಪಾಲಿಕೆಯ ಅನುಮತಿ ಇಲ್ಲದೆ. ನಮ್ಮನ್ನಾಳುವವರು ಹೇಳಿದ್ದಾರೆಂದು ನಟರಾಜ್ ಟಾಕೀಸ್ ಮುಂದಿರುವ ಪಾಲಿಕೆಯ ವಾಣಿಜ್ಯ ಮಳಿಗೆಗಳ ಡೆಮಾಲಿಶ್ ಕಾರ್ಯಕ್ಕೆ ಮುಂದಾಗಿದ್ದು. ಇದಕ್ಕೆ ಬಿಜೆಪಿ ಮುಖಂಡರು ಆಕ್ಷೇಪವ್ಯಕ್ತಪಡಿಸಿ ತಡೆದಿರುವ ಘಟನೆ ನಡೆದಿದೆ.
ಈ ಮಳಿಗೆಗಳು ಹಳೆಯವು ಆಗಿರುವುದರಿಂದ. ಇವುಗಳು ನೀಡುತ್ತಿರುವ ಬಾಡಿಗೆಯೂ ಕಡಿಮೆ ಇರುವುದರಿಂದ ಹೊಸದಾಗಿ ಬೃಹತ್ ವಾಣಿಜ್ಯ ಸಂಕೀರ್ಣ ನಿರ್ಮಿಸಬೇಕೆಂಬ ಉದ್ದೇಶಹೊಂದಿ ಪಾಲಿಕೆಯಲ್ಲಿ ತೆರವಿಗೆ ಠರಾವು ಮಾಡಿತ್ತು. ಹೀಗೆ ಮಾಡುವಾಗ ನ್ಯಾಯಾಲಯದ ತಡೆಯಾಜ್ಞೆ ಆದೇಶ ತೆಗೆದುಹಾಕಿ ಮಾಡಬೇಕು ಎಂಬುದಾಗಿತ್ತು.ಆದರೆ ನಗರ ಶಾಸಕರ ಕೆಲ ಪಾಲಿಕೆ ಅಧಿಕಾರಿಗಳು ಕೆಲ ದಿನಗಳ ಹಿಂದೆ ಈ ಮಳಿಗೆಗಳ ಮಾಲೀಕರನ್ನು ಕರೆಸಿ ನೀವು ಬಿಟ್ಟು ಹೋಗಬೇಕೆಂದು ಎಚ್ಚರಿಕೆ ನೀಡಿದ್ದರಂತೆ. ಅದಕ್ಕೆ ಅವರು ಆಯುಕ್ತರು ಬಳಿ ಹೋದರೆ ನಾನು ಹೇಳಿಲ್ಲ. ಆದೇಶ ಮಾಡಿಲ್ಲ. ಯಾರೋ ಕರೆದರೆ ನಿವ್ಯಾಕೆ ಹೋಗುತ್ತಿರಿ ಎಂದು ಕಳಿಸಿದ್ದರಂತೆ.ಆದರೂ ಮೊನ್ನೆ ರಾತ್ರಿ ಮೊದಲ ಮಹಡಿಯ ಎಂಟು ಮಳಿಗೆಗಳ ಷೆಟರ್ ಗಳನ್ನು ಕಿತ್ತುಕೊಡು ಹೋಗಲಾಗಿದೆ. ಇಂದು ಅವನ್ನು ಡೆಮಾಲಿಶ್ ಮಾಡಲು ಡ್ರಿಲ್ಲರ್ ಮಿಷನ್ ತೆಗೆದುಕೊಂಡು ರಸೂಲ್ ನೇತೃತ್ವದ ತಂಡ ಆಗಮಿಸಿತ್ತಂತೆ.ಮಳೆಗೆಯ ಮಾಲಿಕ ರಾಮಾಂಜಿನೇಯ ಅವರು ತಡೆದು ಇದಕ್ಕೆ ಪಾಲಿಕೆಯ ಆದೇಶ ಇದೆಯಾ ಎಂದು ಪ್ರಶ್ನಿಸಿದರೆ. ಇದೆ. ಅದು ಶಾಸಕ ಭರತ್ ರೆಡ್ಡಿ ಅವರ ಬಳಿ ಇದೆ ಹೋಗಿ ಕೇಳಿ ಅವರು ಹೇಳಿದ್ದಾರೆ. ನಾವು ಒಡೆಯುತ್ತೇವೆ ಎಂದು ಮುಂದಾಗಿದ್ದಾರೆ.ಈ ಬಗ್ಗೆ ಬ್ರೂಸ್ ಪೇಟೆ ಪೊಲೀಸರಿಗೆ ದೂರು ನೀಡಲು ಮುಂದಾದರೆ ಅವರು ಸ್ವೀಕರಿಸಲಿಲ್ಲವಂತೆ.ಈ ಮಧ್ಯೆ ಈ ವಿಷಯ ತಿಳಿದು ಮೇಯರ್ ಮುಲ್ಲಂಗಿ ನಂದೀಸ್ ಸ್ಥಳಕ್ಕೆ ಆಗಮಿಸಿ. ನಿವು ಯಾರು. ನಿಮಗೆ ಯಾರು ಹೇಳಿದ್ದಾರೆಂದು ಬೈದು ವಾಪಸ್ ಕಳಿಸಿದ್ದಾರಂತೆ.
ಈ ವೇಳಿಗೆ ಇಲ್ಲಿಗೆ ಬಂದ ನಗರದ ಮಾಜಿ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ, ಪ್ರತಿ ಪಕ್ಷದ ನಾಯಕ ಸಿ.ಇಬ್ರಾಹಿಂ ಬಾಬು. ಪಾಲಿಕೆಯ ಬಿಜೆಪಿ ಕೆಲ ಸದಸ್ಯರು, ಪಕ್ಷದ ಅಧ್ಯಕ್ಷ ಅನಿಲ್ ನಾಯ್ಡು ಬಂದು ಡೆಮಾಲಿಶ್ ಮಾಡಲು ಬಂದವರನ್ನು ತಡೆದು ಹಿಂದಕ್ಕೆ ಕಳಿಸಿದ್ದಾರೆ.ಬಳಿಕ ಬಂದ ಮಾಜಿ ಸಚಿವ ಶ್ರೀರಾಮುಲು ಅವರು ಈ ರೀತಿ ದೌರ್ಬಲ್ಯ ನಡೆಸಲು ಬಿಡುವುದಿಲ್ಲ. ಏನಿದ್ದರೂ ಕಾನೂನು ರೀತಿ ನಡೆಯಲಿ. ಇದಕ್ಕೆ ಸರಿಯಾದ ಉತ್ತರ ನೀಡಬೇಕು ಎಂದು ಧರಣಿ ಕುಳಿತರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 