ಗೃಹ ಸಚಿವರಿಂದ ಬುದ್ಧಿಮಾಂಧ್ಯ ಶಾಲೆಗೆ ಆರ್ಥಿಕ ನೆರವಿನ ಭರವಸೆ

ಹಾವೇರಿ: ಜ. 28 : ನಗರದ ಜ್ಯೋತಿ ಬುದ್ಧಿ ಮಾಂಧ್ಯ ಮಕ್ಕಳ ವಸತಿ ಶಾಲೆಗೆ ವೈಯಕ್ತಿಕವಾಗಿ ಎರಡು ಲಕ್ಷ ರೂ. ನೆರವು ಘೋಷಿಸಿದ ಗೃಹ ಸಚಿವರು  ಬಜೆಟ್ನಲ್ಲಿ 10 ಲಕ್ಷ ರೂ.ಗಳ ಆಥರ್ಿಕ ನೆರವು ನೀಡುವುದಾಗಿ ಭರವಸೆ ನೀಡಿದರು.ಮಂಗಳವಾರ ನಗರದ ಬುದ್ದಿಮಾಂಧ್ಯ ಮಕ್ಕಳ ಶಾಲೆಗೆ ಭೇಟಿ ನೀಡಿ, ಮಕ್ಕಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿ, ಬುದ್ಧಿಮಾಂಧ್ಯ ಮಕ್ಕಳು ದೇವರಿಗೆ ಸಮಾನ. ಇಂತಹ ಮಕ್ಕಳಿಗೆ ಜನ್ಮ ನೀಡಿದ ತಾಯಂದಿರು ಪುಣ್ಯವಂತರು. ಇಂತಹ ಮಕ್ಕಳ ಸೇವೆ ಮಾಡುವ ಭಾಗ್ಯ ಅವರಿಗೆ ದೊರೆತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಜ್ಯೋತಿ ಬುದ್ಧಿಮಾಂಧ್ಯ ಮಕ್ಕಳ ಸಂಸ್ಥೆಯು ಅತ್ಯಂತ ಜವಾಬ್ದಾರಿಯಿಂದ ಮಕ್ಕಳನ್ನು ಪೋಷಣೆ ಮಾಡುತ್ತಿದೆ. ಸಂಸ್ಥೆಯ ಆಡಳಿತ ಮಂಡಳಿ ಮತ್ತು ಶಿಕ್ಷಕ ವರ್ಗದ ಮಾನವೀಯತೆ, ಕಾರ್ಯತತ್ಪರತೆ ಶ್ಲಾಘನೀಯವಾದದ್ದು. ಇವರೆಲ್ಲರ  ನಿಸ್ವಾರ್ಥ ಸೇವೆ ಈ ಮಕ್ಕಳಿಗೆ ದಾರಿದೀಪವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

  ಇದೇ ಸಂದರ್ಭದಲ್ಲಿ ಸಚಿವರ 60 ಜನ್ಮದಿನವನ್ನು ಬುದ್ದಮಾಂಧ್ಯ ಮಕ್ಕಳ ಜೊತೆಗೆ ಆಚರಿಸಿಕೊಂಡರು. ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿ.ಪಂ.ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ರಮೇಶ ದೇಸಾಯಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ. ದೇವರಾಜು, ಸಂಸ್ಥೆಯ ಮುಖ್ಯಸ್ಥ ನವೀನ್ ಸವಣೂರ, ಅನ್ನದಾತ ರೈತ ಸಂಘದ ಅಧ್ಯಕ್ಷ ಗಂಗಾಧರ ಗಡ್ಡೆ, ಕೆ.ಮಂಜಪ್ಪ ಇತರರು ಉಪಸ್ಥಿತರಿದ್ದರು.