ಲೋಕದರ್ಶನ ವರದಿ
ಚಿಕ್ಕೋಡಿ 20: ಶೈಕ್ಷಣಿಕ ಜಿಲ್ಲೆಯಲ್ಲಿ ಪ್ರಾಥಮಿಕ ಶಾಳೆಗಳ ಮುಖ್ಯೋಪಾಧ್ಯಾಯರ ಮತ್ತು ಸಹ ಶಿಕ್ಷಕರ ಮೂಲ ವೇತನದಲ್ಲಿ ಆಗಿರುವ ತಾರತಮ್ಯ ಸರಿಪಡಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕ.ರಾ.ಪ್ರಾ ಶಾ.ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಂ.ಹಿರೇಮಠ ನೇತೃತ್ವದಲ್ಲಿ ಪದಾಧಿಕಾರಿಗಳು ಡಿಡಿಪಿಐ ಗಜಾನನ ಮನ್ನಿಕೇರಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಬಳಿಕ ಜಿಲ್ಲಾಧ್ಯಕ್ಷ ಜಿ.ಎಂ.ಹಿರೇಮಠ ಮಾತನಾಡಿ,ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಸಹ ಶಿಕ್ಷಕರ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವವರ ಮೂಲ ವೇತನಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿದ್ದು ಅವುಗಳನ್ನು ಸರಿಪಡಿಸಬೇಕು,ಮುಖ್ಯೋಪಾದ್ಯಾಯರ ವಿಶೇಷ ವೇತನ ಬಡ್ತಿ ವಂಚಿತರಾಗಿದ್ದು, ಮಾಹಿತಿಯನ್ನು ಆಥರ್ಿಕ ಇಲಾಖೆ ಕೇಳಿದೆ ಆದರೆ ಇಲ್ಲಿಯವರೆಗೆ ಸಕರ್ಾರ ಮಾಹಿತಿ ಕಳುಹಿಸಲ್ಲ ಆದ್ದರಿಂದ ತುತರ್ಾಗಿ ಆಥರ್ಿಕ ಇಲಾಖೆಗೆ ಮಾಹಿತಿ ಕಳುಹಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನಿದರ್ೇಶ ನೀಡಬೇಕೆಂದರು.
ಶಿಕ್ಷಕರ ಅವಲಂಬಿತರ ವಿವರಗಳನ್ನು ಎಚ್.ಆರ್.ಎಂ.ಎಸ್ ನಲ್ಲಿ ದಾಖಲಿಸಲು ಕ್ರಮ ಕೈಗೊಳ್ಳಬೇಕು,ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾದ್ಯಾಯರ ಮತ್ತು ಪ್ರೌಢ ಶಾಲಾ ಸಹ ಶಿಕ್ಷಕರ ಹುದ್ದೆಗಳಿಗೆ ಬಡ್ತಿ ನೀಡುವ ಮತ್ತು ಎ.ಬಿ.ಕೇಂದ್ರಗಳಲ್ಲಿ ಖಾಲಿ ಇರುವ ಮುಖ್ಯೋಪಾದ್ಯಾಯರ ಹುದ್ದೆಗಳಿಗೆ ಸ್ಥಳ ನಿಯೋಜನೆ ಮಾಡುವಂತೆ ಒತ್ತಾಯಿಸಿದರು.
ಪ್ರಧಾನ ಕಾರ್ಯದಶರ್ಿ ಸಿದ್ರಾಮ ಲೋಕನ್ನವರ, ಸಿ.ಬಿ.ಅರಭಾಂವಿ, ವೈ.ಎಸ್.ಬುಡ್ಡಗೋಳ, ಎನ್.ಬಿ.ಗುಡಸಿ, ಎಸ್.ಎಸ್.ಖಡ್ಡ, ಬಿ.ಆರ್.ತಳವಾರ, ವ್ಹಿ.ಬಿ.ಅರಗಿ, ಆರ್.ಎಂ.ಮಹಾಲಿಂಗಪೂರ, ಆರ್.ಕೆ.ಕಾಮಬಳೆ, ಬಬಿತಾ ನೂಲಿ, ಎನ್.ಜಿ.ಕಾಂಬಳೆ ಹಾಗೂ ಪದಾಧಿಕಾರಿಗಳು ಇದ್ದರು.