ರೈತರ ನೆರವಿಗೆ ನಿಂತು ನಷ್ಟವಾಗಿರುವ ಬೆಳೆಗಳಿಗೆ ಪರಿಹಾರವನ್ನು ನೀಡಬೇಕೆಂದು ಒತ್ತಾಯಿ
ಜಮಖಂಡಿ 26 :5ತಾಲೂಕಿನ ತೊದಲಬಾಗಿ, ಸಾವಳಗಿ,ಚಿಕ್ಕಲಕಿ ಕ್ರಾಸ್ ಸೇರಿದಂತೆ ಕೆಲವು ಭಾಗದಲ್ಲಿ ಜೋರಾಗೀಬೀಸಿದ ಗಾಳಿ, ಮಳೆಗೆ ಮೆಕ್ಕೆಜೋಳ ನೆಲಕಚ್ಚಿದ್ದು. ದ್ರಾಕ್ಷಿ ಬೆಳದ ಬೆಳೆಯು ಸಂಪೂರ್ಣವಾಗಿ ಹಾನಿಗೊಂಡಿದೆ.ದ್ರಾಕ್ಷಿ ಬೆಳೆಗಾರರು ಒಣ್ಣದ್ರಾಕ್ಷಿಗಾಗಿ ಸಂಗ್ರಹಿಸಿದ ರ್ಯಾಕ್ಗಳಲ್ಲಿ ಇರುವ ಒಣ್ಣದ್ರಾಕ್ಷಿಯು ಮಳೆಯಿಂದಾಗಿ ಹಾಗೂ ಜೋರಾಗಿ ಬೀಸಿದ ಗಾಳಿಯಿಂದ ತಾಡಪಾಲು ಗಾಳಿಗೆ ಹಾರಿ ಹೋಗಿ, ಕೇಲವು ತಾಡಪಾಲುಗಳು ಹರಿದ್ದು ದ್ರಾಕ್ಷಿಯನ್ನು ಸಂಗ್ರಹಿಸಿ ಇಟ್ಟಿರುವ ಒದ್ದೆಯಾಗಿವೆ. ಒಣ್ಣದ್ರಾಕ್ಷಿಯು ಒದ್ದೆಯಾದ ಹಿನ್ನಲೆ ಕಪ್ಪುಬಣ್ಣ ಹೊಂದಿದೆ. ಲಕ್ಷಾಂತರ ರೂ,ಗಳ ನಷ್ಟವಾಗಿದ್ದು. ಮೆಕ್ಕೆಜೋಳ ಬೆಳದ ಬೆಳೆಯು ಭಾರಿ ಗಾಳಿ ಮತ್ತು ಮಳೆಗೆ ನೆಲಕಚ್ಚಿದ್ದು. ಕೈಗೆ ಬಂದಿರುವ ತುತ್ತು ಬಾಯಿಗೆ ಬರದ ಹಾಗೆ ಆಗಿದೆ ಎಂದು ನೊಂದ ರೈತರು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ. ಗೋವಿನಜೋಳ ಹಾಗೂ ದ್ರಾಕ್ಷಿ, ಒಣ್ಣದ್ರಾಕ್ಷಿ ಹಾನೀಗೀಡಾಗಿದಕ್ಕೆ ಸರಕಾರ ರೈತರ ನೆರವಿಗೆ ನಿಂತು ನಷ್ಟವಾಗಿರುವ ಬೆಳೆಗಳಿಗೆ ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ.ಇದೇ ಸಂದರ್ಭದಲ್ಲಿ ಅಣ್ಣಪ್ಪ ಶಿರಹಟ್ಟಿ ಅವರ 2 ಎಕ್ಕರೆ ಮೆಕ್ಕೆಜೋಳ, ವರ್ಧಮಾನ ಶಿರಹಟ್ಟಿ 1 ಎಕ್ಕರೆ, ಹಾಗೂ ಲಕ್ಷಾಂತರ ರೂ,ಗಳ ಒಣ್ಣದ್ರಾಕ್ಷಿ, ಮತ್ತಪ್ಪ ರಾಮಪ್ಪ ಮಹಾರ 1 ಎಕ್ಕರೆ, ನಿಂಗಪ್ಪ ಸಣಸಿದ್ದ 5 ಎಕ್ಕರೆ ಹೀಗೆ ಹಲವಾರು ರೈತರು ಬೆಳದ ಮೆಕ್ಕೆಜೋಳ ನೆಲಕಚ್ಚಿದ್ದು ಹಾಗೂ ದ್ರಾಕ್ಷಿ, ಒಣ್ಣದ್ರಾಕ್ಷಿಯು ಸಹ ಸಂಪೂಣವಾಗಿ ಹಾನೀಗಿಡಾಗಿದೆ ಎಂದು ತಮ್ಮ ಅಳಲನ್ನು ಮಾಧ್ಯಮದ ಮುಂದೆ ತೊಡಿಕೊಂಡರು. ಪೋಟೋ : ಎ.ಬಿ.ಸಿ.ಭಾರಿ ಜೋರಾಗಿ ಬೀಸಿದ ಗಾಳಿ.ಮಳೆಗೆ ನೆಲಕಚ್ಚಿದ ಮೆಕ್ಕೆಜೋಳ. ಹಾಗೂ ಒಣ್ಣದ್ರಾಕ್ಷಿ ಸಂಗ್ರಹಿಸಿದ ದ್ರಾಕ್ಷಿ ಬೆಳೆ ಸಂಪೂರ್ಣವಾಗಿ ಹಾನೀಗಿಡಾಗಿದ್ದು.