ಸಚಿವ ಮಾಧುಸ್ವಾಮಿಯನ್ನು ಸಂಪುಟದಿಂದ ಕೈಬಿಡುವಂತೆ ಆಗ್ರಹ

ಲೋಕದರ್ಶನವರದಿ

ಹಿರೇಕೆರೂರು೨೨: ಸಚಿವ ಮಾಧುಸ್ವಾಮಿ ರೈತ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನಿಸಿರುವುದನ್ನು ಖಂಡಿಸಿ ಅವರನ್ನು ಸಂಪುಟದಿಂದ ಕೈಬಿಡುವಂತೆ ಉತ್ತರ ಕನರ್ಾಟಕ ರೈತ ಸಂಘವು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಸಚಿವರ ವಿರುದ್ದ ಕಾನೂನು ಕ್ರಮ ಜರುಗಿಸಿ  ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ರೈತರ ಬಗ್ಗೆ ಕಾಳಜಿ ಇರುವ ಮುಖ್ಯಮಂತ್ರಿಗಳು ಇಂತಹ ಸಚಿವರನ್ನು ಕ್ಷಮಿಸಬಾರದು. ಸಚಿವರ ಹತ್ತಿರ ಸಾಮಾನ್ಯ ಜನರು ಹೋಗದಂತ ಪರಸ್ಥಿತಿ ನಿಮರ್ಾಣವಾಗುತ್ತಿದೆ.ತಮ್ಮ ಅಹವಾಲುಗಳನ್ನು ಸಲ್ಲಿಸಲು ಆಗದಂತ ಸ್ಥಿತಿ ನಿಮರ್ಾಣವಾಗಿದೆ ಆದ್ದರಿಂದ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಉತ್ತರ ಕನಾಟಕ ರೈತ ಸಂಘದ ತಾಲೂಕ ಅಧ್ಯಕ್ಷ ಜಗದೀಶ ಕುಸಗೂರು, ಉಪಾಧ್ಯಕ್ಷ ಚಂದ್ರಪ್ಪ ಮಾನೇರ, ಬಸವರಾಜ ಕೋಡಿಹಳಿ, ಮಹಬೂಬ್ಸಾಬ್ ಮುಲ್ಲಾ, ಬಸವರಾಜ ಹೊಸಳ್ಳಿ, ನಜೀರಸಾಬ್ ಮುಲ್ಲಾ, ಕೆಂಚನಗೌಡ ಹ ಕೆಂಚನಗೌಡ್ರ, ಕರಬಸಪ್ಪ ಮ ಹಲಗೇರಿ ಇದ್ದರು.