ಅಂಕಲಗಿ ಪ್ರೌಢಶಾಲೆಗೆ ಮೂಲಭೂತ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಆಗ್ರಹ

Demand to provide basic system for Ankalagi High School

ಅಂಕಲಗಿ ಪ್ರೌಢಶಾಲೆಗೆ ಮೂಲಭೂತ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಆಗ್ರಹ  

ವಿಜಯಪುರ, 29 : ಅಂಕಲಗಿ ಗ್ರಾಮದ ಸರಕಾರಿ ಪ್ರೌಢಶಾಲೆ ಪ್ರಾರಂಭಗೊಂಡಾಗಿನಿಂದ ಇಲ್ಲಿಯವರೆಗೆ  ವಿದ್ಯುತ್ತಿನ ಸಂಪರ್ಕ ಕಲ್ಪಿಸಿರುವುದಿಲ್ಲ ಹಾಗೂ ಮಕ್ಕಳಿಗೆ ಕುಡಿಯುವ ನೀರು ಪೂರೈಸಬೇಕಂದು ಒತ್ತಾಯಿಸಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮನವಿ ಸಲ್ಲಿಸಲಾಯಿತು.  

ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಮಹಾದೇವಪ್ಪ ತೇಲಿ ಮಾತನಾಡಿ, ಅಂಕಲಗಿ ಗ್ರಾಮದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಸುಮಾರು 323 ಮಕ್ಕಳು 8 ರಿಂದ 10 ನೇ ತರಗತಿವರೆಗೆ ಓದುತ್ತಿದ್ದು, ಈ ಶಾಲೆಯಲ್ಲಿ ಸರಿಯಾಗಿ ವಿದ್ಯುತ್ ಸಂಪರ್ಕ ಇಲ್ಲದಿರುವುದರಿಂದ ಖೇದಕರ ಸಂಗತಿ, ಅವರ ವಿದ್ಯಾಭ್ಯಾಸಕ್ಕೆ ತೊಂದರೆ ಆಗಿದ್ದು, ಶಾಲೆಯ ಕಂಪ್ಯೂಟರಗಳು ಹಾಗೂ ಶಾಲೆಯ ಪ್ರಯೋಗಾಲಯದ ಮಶಿನರಿಗಳು ವಿದ್ಯುತ್ ಇಲ್ಲದೇ ಎಲ್ಲವೂ ಬಂದ್ ಆಗಿದ್ದಾವೆ. ಅಂಕಲಗಿ ಗ್ರಾಮದ ಸರಕಾರಿ ಪ್ರೌಢಶಾಲೆಗೆ ಸರಿಯಾಗಿ ವಿದ್ಯುತ್ತ ಸಂಪರ್ಕ ಕಲ್ಪಿಸಲು ಕೋರಲಾಗಿದೆ. ಹಾಗೂ ಶಾಲೆಯ ಮಕ್ಕಳು ಮಧ್ಯಾಹ್ನದ ಬಿಸಿಯೂಟ ಮಾಡಿದ ನಂತರ ಕುಡಿಯುವ ನೀರಿನ ಸಲುವಾಗಿ ಶಾಲೆ ಬಿಟ್ಟು ಅತ್ತ ಇತ್ತ ಓಡಾಡುತ್ತ ಶಾಲೆ ಪಕ್ಕದಲ್ಲಿ ಭಾವಿ ಕೆರೆಗಳ ಹತ್ತಿರ ಹೋಗುತ್ತಾರೆ. ಸದರಿ ಸಮಸ್ಯೆ ವಿಷಯವನ್ನು ತಿಳಿದು ಶಾಲೆಗೆ ಭೇಟಿಕೊಟ್ಟಾಗಿ ವಿದ್ಯಾರ್ಥಿಗಳನ್ನು ತಮ್ಮ ಸಮಸ್ಯೆಯನ್ನು ನಮ್ಮ ಮುಂದೆ ತೋಡಿಕೊಂಡರು. ಶಾಲೆಗೆ ನಾವು ಭೇಟಿಕೊಟ್ಟ ಸಂದರ್ಭದಲ್ಲಿ ಶಾಲೆಯೂ ಮೂಲಭೂತ ಸಮಸ್ಯೆಯಿಂದ ಶಾಲೆ ಬಳಲುತ್ತಿದ್ದು ಎಂದು ಕಾಣುತ್ತಿದೆ ಎಂದರು.  

ಬುಧವಾರ ಬೆಳಿಗ್ಗೆ ಸದರಿ ಸಮಸ್ಯೆ ಕುರಿತು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಹಾಗೂ ಪಿಡಿಓ ಅವರಿಗೆ ವಿಷಯ ತಿಳಿಸಿದಾಗ ಅವರು ಸ್ಥಳಕ್ಕೆ ಬಂದು ಶಾಲೆಯ ಸಮಸ್ಯೆಯನ್ನು ನಿವಾರಿಸವಂತೆ ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷರಾದ ರಾಜೇಶ ನದಾಪ್ ಅವರಿಗೆ ಭರವಸೆ ನೀಡಿದರು. ಆದರೆ ಅವರು ಊಹಾಪೂಹದ ಭರವಸೆ ನಮ್ಮಗೆ ನಡೆಯುವುದಿಲ್ಲ ಲಿಖಿತ ಮೂಲಕ ಭರವಸೆ ನೀಡಿ ಎಂದು ಪಿಡಿಓ ಅವರಿಗೆ ತರಾಟೆಗೆ ತಗೆದುಕೊಂಡಿದ್ದಾರೆ. ನಂತರ ಶಾಲೆಯ ಸಮಸ್ಯೆ ಪರಿಹರಿಸದಿದ್ದರೆ ಮುಂದಿನ ದಿನದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.   

ಈ ಗಂಭೀರ ಸಮಸ್ಯೆಯನ್ನು ಸಂಬಂಧ ಪಟ್ಟ ಇಲಾಖಾ ಅಧಿಕಾರಿಗಳು ಪರೀಶೀಲಿಸಿ ಶಾಲೆಗೆ ಮೂಲಭೂತ ಅವಕಾಶ ಕಲ್ಪಿಸಿಕೊಡಬೇಕು ಆಕ್ರೋಶ ವ್ಯಕ್ತಪಡಿಸಿದರು.  

ಈ ಸಂದರ್ಭದಲ್ಲಿ ಬಂದಗಿಪಟೇಲ ಬಿರಾದಾರ, ಅಜೀಜಪಟೇಲ ಪಾಟೀಲ, ಪರಮಾನಂದ ಬಮ್ಮನಳ್ಳಿ, ಮುತ್ತಪ್ಪ ಇಂಡಿ, ಗಫೂರಪಟೇಲ ಪಾಟೀಲ, ತೌಸೀಫ್ ಮುಲ್ಲಾ, ಶ್ರೀಶೈಲ ಶಿರಕನಳ್ಳಿ, ಅಮೋಘಿ ಉಕ್ಕಲಿ, ಕಲ್ಲಪ್ಪ ಅವಜಿ, ಕಲ್ಲಪ್ಪ ಮಣೂರ, ಅಮೋಘ ಇಂಡಿ, ಶಿವಪ್ಪ ನಾಗರಳ್ಳಿ, ಮಾಂತುಗೌಡ ಬಿರಾದಾರ.