ರೈತರ ಸಂಕಷ್ಟಗಳಿಗೆ ಸಹಕರಿಸುವಂತೆ ಆಗ್ರಹ: ಬೆಳೆ ಹಾನಿ ಹಾಗೂ ವಿಮಾ ಹಣವನ್ನು ತಕ್ಷಣ ಬಿಡುಗಡೆ ಮಾಡಲು ಆಗ್ರಹ
ಬ್ಯಾಡಗಿ 23: ಕಳೆದ ಜೂನ್ ಜುಲೈ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ರೈತರು ಅಪಾರ ಪ್ರಮಾಣದ ಬೆಳೆ ಹಾನಿಯನ್ನು ಅನುಭವಿಸಿದ್ದು, ವಿಮೆ ಹಣ ಹಾಗೂ ಬೆಳೆ ಹಾನಿಯಾದ ರೈತರಿಗೆ ನೆರವು ನೀಡಬೇಕೆಂದು ಆಗ್ರಹಿಸಿ ಕರವೇ ಗಜಪಡೆ ಸಂಘದ ಕಾರ್ಯಕರ್ತರು ಪ್ರತಿಭಟನೆ ಮಾಡಿ ತಹಶೀಲ್ದಾರ ಫಿರೋಜಾಷಾ ಸೋಮನಕಟ್ಟಿ ಅವರಿಗೆ ಮನವಿ ಸಲ್ಲಿಸಿ ಸೋಮವಾರ ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಯಲ್ಲಪ್ಪ ಮರಾಠೆ ಮಾತನಾಡಿ ತಾಲೂಕಿನ ಬಹುತೇಕ ರೈತರು ಅತಿವೃಷ್ಟಿ ಮಾತ್ರವಲ್ಲದೆ ಕೊಳೆ ರೋಗದಿಂದ ಬೆಳೆ ನಷ್ಟ ಅನುಭವಿಸಿದ್ದು, ಹೀಗಾಗಿ ಬೆಳೆ ನಷ್ಟ ಪರಿಹಾರ ನೀಡುವ ಮೂಲಕ ರೈತರಿಗೆ ನೆರವು ನೀಡುವಂತೆ ಆಗ್ರಹಿಸಿದರು.ವಿಮಾ ಕಂಪನಿಗಳು ಇದುವರೆಗೂ ವಿಮೆ ಹಣ ನೀಡಿರುವುದಿಲ್ಲ, ಆದ್ದರಿಂದ ವಿಮಾ ಕಂಪನಿಗಳು ವಿಮೆ ಬಿಡುಗಡೆ ಮಾಡಿ ರೈತರ ಸಂಕಷ್ಟಗಳಿಗೆ ಸಹಕರಿಸುವಂತೆ ಆಗ್ರಹಿಸಿದರಲ್ಲದೇ ಬೆಳೆ ಹಾನಿ ಹಾಗೂ ವಿಮಾ ಹಣವನ್ನು ತಕ್ಷಣ ಬಿಡುಗಡೆ ಮಾಡದಿದ್ದಲ್ಲಿ ಜಿಲ್ಲೆಯಾದ್ಯಂತ ಉಗ್ರ ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಯೂಸೂಫ್ ಸೈಕಲಗಾರ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಪರ್ಪಗೌಡ್ರ, ಮಹಿಳಾ ಅಧ್ಯೆಕ್ಷೆ ಗೀತಾಬಾಯಿ ಲಮಾಣಿ, ಗಂಗಾಧರ ಪಾಟೀಲ, ಮಾಲತೇಶ ಬಣಕಾರ, ಶಂಕರ ಬಡಿಗೇರ, ಶಿವನಗೌಡ ಗಂಟಿಗೌಡ, ಶಂಕ್ರಮ್ಮ ವಸ್ತ್ರದ, ಶೇಖಪ್ಪ ಪುಟ್ಟಮ್ಮನವರ, ರವಿಂದ್ರ ಮಾಮನಿ, ಹೊನ್ನೂರು ಸಾಬ್ ಕೊಪ್ಪಳ, ರೇಷ್ಮೆ ಬಿರಬ್ಬಿ ಸೇರಿದಂತೆ ಇತರರಿದ್ದರು.