ತಂದೆಯ ಸ್ಮರಣಾರ್ಥವಾಗಿ ಶಾಲೆಗೆ ಭೂದಾನ ನೀಡಲು ಮುಂದಾದ ಮಗ
ವಿಜಯಪುರ 21; ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮದ ತೋಟದ (ಹೆಬ್ಬಾಳ) ವಸ್ತಿಯ ಸುಮಾರು 120 ಮಕ್ಕಳು ಸಮೀಪದಲ್ಲಿ ಶಾಲೆ ಇಲ್ಲದೇ ಪ್ರತಿನಿತ್ಯ 6-8 ಕಿ.ಮೀ ನಡೆದುಕೊಂಡು ಹೋಗಿ ಶಾಲೆ ಕಲಿಯಬೇಕಾದ ಅನಿವಾರ್ಯತೆ ಇದೇ, ಅನೇಕ ಮಕ್ಕಳು ಸೌಕರ್ಯಗಳಿಲ್ಲದೇ ಶಾಲೆಯಿಂದ ಹೋರಗುಳಿಯುವಂತಾಗಿದೆ ಕೂಡಲೇ ಇಲ್ಲಿಗೊಂದು ಸರ್ಕಾರಿ ಪ್ರಾಥಮಿಕ ಶಾಲೆ ತೆರೆಯುವಂತೆ ಆಗ್ರಹಿಸಿ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು
ಗ್ರಾಮಸ್ಥರಾದ ಗೇನೆಪ್ಪ ಬಿರಾದಾರ ಅವರು ಅವರ ತಂದೆಯ ಸ್ಮರಣಾರ್ಥವಾಗಿ ಅರ್ಧ ಎಕರೆ ಜಾಗೆಯನ್ನು ಕೊಡುವುದಾಗಿ ಕಳೆದ 3-4 ವರ್ಷಗಳಿಂದ ಸಂಭಂಧಿಸಿದ ಶಿಕ್ಷಣ ಇಲಾಖೆಗೆ ಹಲವಾರು ಭಾರಿ ಮನವಿ ಸಲ್ಲಿಸಿದ್ದಾಗ್ಯೂ ಕೂಡಾ ಇಲ್ಲಿಯವರೆಗೆ ಯಾವುದೇ ಬೆಳವಣಿಗೆ ಆಗಿಲ್ಲ. ಇದರಿಂದ ದಯಾಳುಗಳಾದ ತಾವೂಗಳು ಕೂಡಲೇ ಈ ಊರಿನ 120 ಮಕ್ಕಳ ಭವಿಷ್ಯ ನಿರ್ಮಿಸಲು ಅಲ್ಲಿಗೊಂದು ಶಾಲೆ ತೆರೆಯಲು ಹಾಗೂ ಮೂಲಭೂತ ಸೌಕರ್ಯ ವದಗಿಸಿ ಶಿಕ್ಷಕರನ್ನು ನೇಮಿಸಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಕೊಳ್ಳುತ್ತೇವೆ ಎಂದರು.
ಈ ವೇಳೆ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಮನಗೌಡ ಪಾಟೀಲ, ಹತ್ತಳ್ಳಿ ಗ್ರಾಮಸ್ಥರಾದ ಗೇನೆಪ್ಪ ಬಿರಾದಾರ, ಶಿವಾನಂದ ದುಂಡಪ್ಪ ಬಿರಾದಾರ, ಮಹಾಧೇವಪ್ಪ ತೇಲಿ, ರಾಜೆಸಾ ನದಾಫ, ಜಕರಾಯ ಪೂಜಾರಿ ಸೇರಿದಂತೆ ಇತರರು ಇದ್ದರು.