ಸಿ.ಎಸ್‌.ನಾಡಗೌಡದ ಅಧ್ಯಕ್ಷ (ಅಪ್ಪಾಜಿ)ಗೆ ಸಚಿವ ಸ್ಥಾನ ನೀಡಲು ಒತ್ತಾಯ

Demand to be give ministerial post to C.S.Nadagowda (Appaji)

ಮುದ್ದೇಬಿಹಾಳ 02: ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದ ಸಂಪುಟ ವಿಸ್ತರಣೆಯಲ್ಲಿ ಮುದ್ದೇಬಿಹಾಳ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಕಾರ್ಜಕ ನಿಗಮ ಸಿ.ಎಸ್‌.ನಾಡಗೌಡದ ಅಧ್ಯಕ್ಷ (ಅಪ್ಪಾಜಿ) ಅವರಿಗೆ ಸಂಪುಟದ ದರ್ಜೆಯ ಸಚಿವ ಸ್ಥಾನ ನೀಡುವ ಮೂಲಕ ಚುನಾವಣೆ ಸಂದರ್ಭದಲ್ಲಿ ಮುದ್ದೇಬಿಹಾಳ ಮತಕ್ಷೇತ್ರದ ಜನರಿಗೆ ಕೊಟ್ಟ ಭರವಸೆ ಇಡೇರಿಸಬೇಕು ಎಂದು ಕಾಂಗ್ರೇಸ್ ಯುವ ಮುಖಂಡ ಸಿಕಂದರ ಜಾನ್ವೇಕರ ಆಗ್ರಹಿಸಿದ್ದಾರೆ.  

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ದ ಅವರು, ಶಾಸಕರಾ ದ ಸಿ.ಎಸ್‌.ನಾಡಗೌಡ (ಅಪ್ಪಾಜಿ) ಅವರು ಕಳೇದ ಆರು ಬಾರಿ ಶಾಸಕರಾಗಿ, ಎಸ್‌.ಬಂಗಾರ​‍್ಪನವರ ಸರ್ಕಾರ ದಲ್ಲಿ ಕಾರ್ಮಿಕ ಸಚಿವರಾಗಿ, ದೇಹಲಿ ವಿಶೇಷ ಪ್ರತಿನಿಧಿಯಾಗಿ, ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತರಾಗಿ ಹಲವಾರು ಹುದ್ದೆಗಳನ್ನು ಅಲಂಕರಿಸಿದ ಅನುಭವಿ ಹಾಗೂ ಸರಳ,  ಸಜ್ಜನಕೆ ವ್ಯಕ್ತಿತ್ವದ ಹಿರಿಯ ಸ್ವಚ್ಛರಾಜಕಾರಿಣಿಯಾಗಿದ್ದಾರೆ. ಅವರ 40 ವರ್ಷಗಳ ರಾಜಕೀಯ ಜೀವನದಲಿ ್ಲಇಲಿ ್ಲತನಕವೂ ಒಂದೂ ಕಪ್ಪು ಚುಕ್ಕೆಯಿಲ್ಲದೇ ಜನಾನುರಾಗಿಯಾಗಿ, ಕ್ರೀಯಾಶೀಲರಾಗಿ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಯಾವತ್ತಿಗೂ ಆಡಂಭರದ ವೈಭವಿಕರಿಸಿಕೊಳ್ಳುವ ಕೇವಲ ಪ್ರಚಾರ ಪ್ರೀಯರಾಗಿರದೇ ಜನಮೆಚ್ಚಿದ ಜನನಾಯಕರಾಗಿ ಬೆಳೆದು ನಿಂತಿದ್ದಾರೆ  ಮಾತ್ರವಲ್ಲದೇ ಕಳೆದ ಉಪಚುನಾವಣೆಯಲ್ಲಿ ಸಿಗ್ಗಾಂವಿ ಮತಕ್ಷೇತ್ರದ ಚುನಾವಣಾ ಜವವಾಬ್ದಾರಿ ವಹಿಸಿಕೊಂಡು ಕಾಂ ಗ್ರೇಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿದ ಕೀರ್ತಿ ನಾಡಗೌಡರಿಗೆ ಸಲ್ಲುತ್ತದೆ.  

2023ರಲ್ಲಿ ಮುದ್ದೇಬಿಹಾಳ ಮತ ಕ್ಷೇತ್ರದಲ್ಲಿ ತಮ್ಮ ಗೆಲುವಿನೊಂದಿಗೆ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚು ಸ್ಥಾನಗಳಲ್ಲಿ ಗೆಲ್ಲಿಸುವಂತೆ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಕೈ ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ದ್ದಾರೆ. ಜೊತೆಗೆ ರಾಷ್ಟ್ರೀಯ ನಾಯಕಿ ಸೋನಿಯಾ ಗಾಂಧಿ, ಯುವ ನಾಯಕ ರಾಹುಲ್ ಗಾಂಧಿಯವರ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೇರಿದ ಂತೆ ಹಲವಾರು ನಾಯಕರಿಗೆ ನಿಕಟವರ್ತಿಗಳಾಗಿ ಸಂಭಾವಿತ ಏಕೈಕ ನಾಯಕರಾಗಿದ್ದಾರೆ. ಸಿ.ಎಸ್‌. ನಾಡ ಗೌಡರ ಅವರನ್ನು ಈ ಬಾರಿ ಸಂಪುಟ ದರ್ಜೆ ಸಚಿವರ ನ್ನಾಗಿ ಮಾಡುವ ಮೂಲಕ ಚುನಾವಣೆ ವೇಳೆ ಕೊಟ್ಟ ಮಾತು ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.