ಭಾರತ ಸರ್ಕಾರ ಕುಟುಂಬ ರಾಜಕಾರಣ ನಿಯತ್ರಣ ಕಾಯ್ದೆ ಜಾರಿಗೊಳಿಸಬೇಕೆಂದು ಒತ್ತಾಯ
ರಾಣೇಬೆನ್ನೂರು 27 :ನಗರದ ತಹಶಿಲ್ದಾರರ ಕಛೇರಿ ಮುಂದೆ ಮಾತೃಭೂಮಿ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆಯಿಂದ ಪ್ರತಿಭಟನೆ ಮಾಡಿ ಭಾರತ ಸರ್ಕಾರ ಕುಟುಂಬ ರಾಜಕಾರಣ ನಿಯಂತ್ರಣ ಕಾಯ್ದೆ ಜಾರಿಗೊಳಿಸುವಂತೆ ರಾಷ್ಟ್ರಪತಿಗಳಿಗೆ ಮತ್ತು ಪ್ರದಾನ ಮಂತ್ರಿಗಳಿಗೆ ತಹಶಿಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು.ಮಾತೃಭೂಮಿ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆಯ ಮುಖ್ಯಸ್ಥರಾದ ಮಲ್ಲಿಕಾರ್ಜುನ ಬ. ತೆಗ್ಗಿನ ಮಾತನಾಡಿ, ಭಾರತದಲ್ಲಿ ದಿನದಿಂದ ದಿನಕ್ಕೆ ಕುಟುಂಬ ರಾಜಕಾರಣ ವಿಸ್ತರಣೆಯಾಗುತ್ತಿದೆ.
ಇದರಿಂದ ಸಮಾಜದಲ್ಲಿ ಅಸಮಾನತೆ ಉಂಟಾಗುತ್ತದೆ. ಆದ್ದರಿಂದ ಭಾರತ ಸರ್ಕಾರ ಕುಟುಂಬ ರಾಜಕಾರಣ ನಿಯತ್ರಣ ಕಾಯ್ದೆ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.ಇದೇ ವೇಳೆ ಬಸಣ್ಣ ದೊಡ್ಡಕೊಪ್ಪಡ್, ರಘು ಗೊಂದಕರ್, ನಾಗಪ್ಪ ಕರೂರು, ಸೋಮರೆಡ್ಡಿ, ಶಿವು ಕಡೂರು, ಮಂಜು ಚಳಗೇರಿ, ನಾಗರಾಜ್ ಸಾಳೇರ್, ಈರ್ಪ ಇಟಗಿ ಮತ್ತಿತರರು ಪಾಲ್ಗೊಂಡಿದ್ದರು.ಬಾಕ್ಸ್ಬೇಡಿಕೆಗಳು:ಒಂದು ಕುಟುಂಬದಲ್ಲಿ ಒಬ್ಬ ಸದಸ್ಯನಿಗೆ ಸ್ಪರ್ಧಿಸುವಂತೆ ಕಡ್ಡಾಯಗೊಳಿಸಬೇಕು.ಸಾರ್ವತ್ರಿಕ ಚುನಾವಣೆಯಲ್ಲಿ ಕನಿಷ್ಠ ಪದವಿ ವಿದ್ಯಾರ್ಹತೆ ಕಡ್ಡಾಯಗೊಳಿಸಬೇಕು.ಭಾರತದಲ್ಲಿ ಎಲ್ಲಾ ಪ್ರಜೆಗಳಿಗೆ ಮತದಾನ ಕಡ್ಡಾಯಗೊಳಿಸಬೇಕು.ಭಾರತದಲ್ಲಿ ಚುನಾವಣೆಗೆ ಸ್ಪರ್ಧಿಸಲು ಗರಿಷ್ಠ ವಯೋಮಿತಿಯನ್ನು ಕಡ್ಡಾಯಗೊಳಿಸಬೇಕು. ಎಂದು ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.