ಬಳ್ಳಾರಿ 30: ಗೌತಮ್ ಅದಾನಿ ತಮ್ಮ ಸಂಸ್ಥೆಯ ಪರವಾಗಿ ಉದ್ದಿಮೆಗಳ ಒಪ್ಪಂದ ಮಾಡಿಕೊಳ್ಳಲು ಭಾರತದ ಸರ್ಕಾರಿ ಅಧಿಕಾರಿಗಳು ಸೇರಿದಂತೆ ಅನೇಕರಿಗೆ ಸಾವಿರಾರು ಕೋಟಿ ರೂಪಾಯಿ ಲಂಚ ನೀಡಿದ್ದಾರೆ ಎಂದು ಅದಾನಿ ‘ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿಯ ವಿರುದ್ಧ ಅಮೇರಿಕಾದ ಪ್ರಾಸಿಕ್ಯೂಟರ್‌ಗಳು ಮಾಡಿರುವ ದೋಷಾರೋಪಗಳ ಕುರಿತು ಸಮಗ್ರ ತನಿಖೆ ನಡೆಸಲು ಕೇಂದ್ರ ಸರ್ಕಾರ ಜಂಟಿ ಸದನ ಸಮಿತಿ ರಚಿಸಬೇಕೆಂದು ಅಖಿಲ ಭಾರತ ಯುವಜನ ಫೆಡರೇಷನ್ (ಂಋಈ) ಆಗ್ರಹಿಸುತ್ತದೆ.
ಗೌತಮ್ ಅದಾನಿ ತಮ್ಮ ಉದ್ದಿಮೆಗಳ ವಹಿವಾಟು ನಡೆಸಲು ಲಾಭದಾಯಕ ಸೌರಶಕ್ತಿಯ ಪೂರೈಕೆಯಂತಹ ಲಾಭದಾಯಕ ಉದ್ದಿಮೆಗಳನ್ನು ಗುತ್ತಿಗೆ ಪಡೆಯಲು ಭಾರತ ಸೇರಿದಂತೆ ವಿದೇಶಗಳಲ್ಲಿ ಸಹ ಸುಮಾರು 2100 ಕೋಟಿ ರೂಪಾಯಿಗಳಷ್ಟು ಲಂಚ ನೀಡಿದ್ದಾರೆಂದು ಅಮೇರಿಕಾದ ಪ್ರಾಸಿಕ್ಯೂಟರ್‌ಗಳು ಗಂಭೀರ ಸ್ವರೂಪದ ಆರೋಪ ಮಾಡಿದ್ದಾರೆ.ಸದರಿ ನ್ಯೂಯಾರ್ಕನ ಪ್ರಾಸಿಕ್ಯೂಟರ್‌ಗಳ ಆರೋಪಗಳ ಸತ್ಯಾಸತ್ಯತೆಯನ್ನು ಅರಿಯಲು ಗೌತಮ್ ಆದಾನಿಯನ್ನು ಕೂಡಲೇ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಹಾಗೂ ಸದರಿ ಅಮೇರಿಕಾದ ದೋಷಾರೋಪಣೆಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ಕೇಂದ್ರ ಸರ್ಕಾರ ಸಂಸತ್ತಿನ ಜಂಟಿ ಸದನ ಸಮಿತಿ ರಚಿಸಬೇಕೆಂದು ಅಖಿಲ ಭಾರತ ಯುವಜನ ಫೆಡರೇಷನ್ (ಂಋಈ) ಬಳ್ಳಾರಿ ಜಿಲ್ಲಾ ಘಟಕದ ವತಿಯಿಂದ ಈ ಮೂಲಕ ಒತ್ತಾಯಿದೆ.