ಎಡಿಜೀಪೀ ಚಂದ್ರಶೇಖರ್ ರವರನ್ನು ಕೂಡಲೇ ಅಮಾನತ್ತು ಗೊಳಿಸಲು ಒತ್ತಾಯ

ಕೊಪ್ಪಳ 01: ಕರ್ನಾಟಕ ಲೋಕಾಯುಕ್ತ ವಿಶೇಷ ತನಿಖಾದಳ ಮುಖ್ಯಸ್ಥ ಎಡಿಜಿಪಿ ಎಮ್ ಚಂದ್ರಶೇಖರ್ ರವರು ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಅವರನ್ನು ಕೂಡಲೇ ಅಮಾನತ್ತುಗೊಳಿಸಬೇಕೆಂದು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ, ಜೆಡಿಎಸ್ ಕೊಪ್ಪಳ ಜಿಲ್ಲಾ ವಕ್ತಾರ ಮಲ್ಲನಗೌಡ ಕೋನ ನಗೌಡ್ರು ಒತ್ತಾಯಿಸಿದ್ದಾರೆ ಅವರು ಮಂಗಳವಾರ ಬೆಳಿಗ್ಗೆ ಇಲ್ಲಿನ ಪತ್ರಿಕಾ ಭವನದಲ್ಲಿ ಏರಿ​‍್ಡಸಿದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಸದ್ರಿ ಅವರ ಮೇಲೆ ಸಾಕಷ್ಟು ದೂರು ಪ್ರಕರಣಗಳಿವೆ ಹಾಗೂ ಕೆಲವು ಪ್ರಕರಣಗಳು ದಾಖಲಾಗಿರುತ್ತವೆ. 

ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು, ಸದರಿಯವರು ಕೇಂದ್ರದ ಮಂತ್ರಿ   ಹೆಚ ಡಿ ಕುಮಾರಸ್ವಾಮಿ ಮತ್ತು ರಾಜ್ಯದ ರಾಜ್ಯಪಾಲರ ವಿರುದ್ಧ ಕೂಡ ಇಲ್ಲಸಲ್ಲದ ಆರೋಪ ಹೊರಿಸಿದ್ದಾರೆ, ಎಡಿಜಿಪಿ ಎಂ ಚಂದ್ರಶೇಖರ್ ರವರು ಸಂವಿಧಾನಕ್ಕೆ ಒಂದು ರೀತಿಯ ಅಪ ಮಾನ ಮಾಡಿದ್ದಾರೆ, ಇಂತಹ ಪೊಲೀಸ್ ಅಧಿಕಾರಿಗಳು ಉನ್ನತ ಹುದ್ದೆಯಲ್ಲಿ ಇರುವುದು ಸಮಂಜಸವಲ್ಲ, ಕೂಡಲೇ ಇವರನ್ನು ಅಮಾನತುಗೊಳಿಸಿ ಸೂಕ್ತ ತನಿಖೆ ನಡೆಸಬೇಕು. ಅಂದಾಗ ಮಾತ್ರ ನಿಜಾಂಶ ಬೆಳಕಿಗೆ ಬರುತ್ತದೆ ಎಂದು ಜೆಡಿಎಸ್ ಕೊಪ್ಪಳ ಜಿಲ್ಲಾ ವಕ್ತಾರ ರಾದ ಮಲ್ಲನಗೌಡ ಕೋನನಗೌಡ್ರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ, ಅವರೊಂದಿಗೆ ಜೆಡಿಎಸ್ ಕೊಪ್ಪಳ ತಾಲೂಕ ಅಧ್ಯಕ್ಷ ರಾದ ಯಮನೂರ​‍್ಪ ಕಟಗಿ ಯಲಬುರ್ಗಾ ತಾಲೂಕ ಅಧ್ಯಕ್ಷ ಬಸವರಾಜು ಗುಳಗುಳಿ ಮುಖಂಡರಾದ ಶ್ರೀನಿವಾಸ್ ಪೂಜಾರ್ ಕೆಂಚಪ್ಪ ಹಳ್ಳಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು ನಂತರ ಅವರು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ದೂರು ಸಲ್ಲಿಸಿ ಕೂಡಲೇ  ಎಂ ಚಂದ್ರಶೇಖರ್ ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದ್ದಾರೆ.