ದೇವದಾಸಿ ಮಹಿಳೆಯರ ಬೇಡಿಕೆಗೆ ಒತ್ತಾಯ


ಲೋಕದರ್ಶನ ವರದಿ

ಹೂವಿನಹಡಗಲಿ27:ಸಮಾಜದ ಶೋಷಣೆಗೆ ಒಳಗಾಗಿಗಿರುವ ದೇವದಾಸಿ ಮಹಿಳೆಯರಿಗೆ ಸಕಾರ ಅಗತ್ಯ ಮೂಲಭೂತ ಸೌಲಭ್ಯಗಳ ಜತೆಗೆ ಸಾಮಾಜಿಕ ಭದ್ರತೆ ನೀಡಬೇಕು ಎಂದು ದೇವದಾಸಿ ಮಹಿಳಾ ವಿಮೋಚನಾ ಸಂಘದ ರಾಜ್ಯಾಧ್ಯಕ್ಷೆ ಮಾಳಮ್ಮ ಒತ್ತಾಯಿಸಿದರು.

ಪಟ್ಟಣದ ಮೈಲಾರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ತಾಲುಕು ಮಟ್ಟದ ದೇವದಾಸಿ ಮಹಿಳೆಯರ 3ನೇ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇವದಾಸಿಯರ ಮಹಿಳೆಯರ ಮಕ್ಕಳಿಗೆ ಸಕರ್ಾರ ವಿಶೇಷವಾಗಿ ಪರಿಗಣಿಸಿ ಉದ್ಯೋಗವನ್ನು ನೀಡಬೇಕು.ನರೇಗಾ ಯೋಜನೆಯಲ್ಲಿ ಕನಿಷ್ಠ 200ದಿನಗಳ ಕಾಲ ಕೆಲಸ ನೀಡಿ,ಕನಿಷ್ಠ ಕೂಲಿಯನ್ನು 600 ರೂ.ಗಳಿಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು. 

ರಾಜ್ಯದ ಎಲ್ಲ ದೇವದಾಸಿ ಮಹಿಳೆಯರಿಗೆ ಮಾಸಿಕ ವೇತನ 3ಸಾವಿರ ನಿಗದಿ ಮಾಡಬೇಕು.ಮಕ್ಕಳ ಶಿಕ್ಷಣಕ್ಕಾಗಿ 5ಲಕ್ಷ ಯೋಜನೆಯನ್ನು ನಿಗದಿ ಮಾಡಬೇಕು.ಮಹಿಳೆಯರಿಗೆ ಉಚಿತ ಮನೆ ನಿಮರ್ಾಣ ಸೇರಿದಂತೆ ಸಕರ್ಾರ ಸೌಲಭ್ಯಗಳನ್ನು ನೀಡಬೇಕೆಂದು ಒತ್ತಾಯಿಸಿದರು.ಸಂಘಟನೆ ತಾಲೂಕು ಅಧ್ಯಕ್ಷೆ ಕಮಲಮ್ಮ, ಕಾರ್ಯದಶರ್ಿ ಬಂಡೆಮ್ಮ ಸೇರಿದಂತೆ ನೂರಾರು ದೇವದಾಸಿ ಮಹಿಳೆಯರು ಭಾಗವಹಿಸಿದ್ದರು.