ಅನಧಿಕೃತ ಗೈರು ಹಾಜರಿ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಅಮಾನತಿಗೆ ಆಗ್ರಹ

Demand for suspension of Joint Director of Agriculture Department for unauthorized absence

ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ತಪ್ಪಿನಿಂದ ಮದ್ಯಂತರ ತೊಗರಿ ಪರಿಹಾರದಿಂದ ವಂಚಿತರಾದ ರೈತರು 

ವಿಜಯಪುರ 28: ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ತೊಗರಿ ಬೆಳೆಗೆ ವಿಮಾ ಕಂಪನಿಯಿಂದ ಮದ್ಯಂತರ ಪರಿಹಾರ ಬರದೆ ವಿಜಯಪುರ ಜಿಲ್ಲೆಯ ರೈತರು ವಂಚಿತರಾಗಿದ್ದಾರೆ ಇದಕ್ಕೆ ಮೂಲ ಕಾರಣ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಸಕಾಲಕ್ಕೆ ವರದಿ ಕಳುಹಿಸದ ಕಾರಣ ರೈತರಿಗೆ ಮದ್ಯಂತರ ಪರಿಹಾರ ಬರದೆ ವಂಚಿತರನ್ನಾಗಿ ಮಾಡಿದ್ದಾರೆ ಮತ್ತು ಅನಧಿಕೃತವಾಗಿ ರಜೆ ಪಡೆಯದೆ ಸರ್ಕಾರಕ್ಕೆ ಮೋಸ ಮಾಡಿದ್ದಾರೆ. ನಿಯಮ ಬಾಹಿರವಾಗಿ ರಜೆ ಹೋಗಿರುವುದರಿಂದ ಇವರನ್ನು ಸೇವೆಯಿಂದ ಅಮಾನತ್ತು ಮಾಡಬೇಕೆಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಸರ್ಕಾರಕ್ಕೆ  ಆಗ್ರಹಿಸಿದ್ದಾರೆ.  

ಮಂಗಳವಾರದಂದು ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಪತ್ರಿಕಾ ಗೊಷ್ಠಿ ಹಮ್ಮಿಕೊಂಡ ಸಂದರ್ಭದಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ 1,26,000 ಸಾವಿರ ರೈತರು ವಿಮೆ ಮಾಡಿಸಿದ್ದಾರೆ 90ಅ ರಷ್ಟು ಬೆಳೆ ಹಾನಿಯಾಗಿದೆ, ಹವಾಮಾನದ ವೈಪರಿತ್ಯದಿಂದಾಗಿ ಹಾಗೂ ಜಿ.ಆರ್‌.ಜಿ 152 ಹಾಗೂ ಜಿ.ಆರ್‌.ಜಿ 811 ಕಳಪೆ ಬೀಜ ಬಿತ್ತನೆ ಮಾಡಿದಕಾರಣ ಸಂಪೂರ್ಣ ತೋಗರಿ ಬೆಳೆ ಹಾನಿಯಾಗಿದೆ. ಇದಕ್ಕೆ ರೈತರು ವಿಮೆ ಕಂಪನಿಗೆ ವಿಮೆ ಕಂತುಕಟ್ಟಿದ್ದಾರೆ ಬೆಳೆ ಹಾಳಾದರೆ ವಿಮೆ ಕಟ್ಟಿದ ರೈತರಿಗೆ ವಿಮಾ ಕಂಪನಿಯಿಂದ ಮದ್ಯಂತರ ಪರಿಹಾರಕೊಡಬೇಕು ಆದರೆ ವಿಜಯಪರ ಜಿಲ್ಲೆಯ ರೈತರಿಗೆ ಬಿಡಿಗಾಸು ಪರಿಹಾರ ಬಂದಿಲ್ಲ ಇದಕ್ಕೆ ಕಾರಣ ವಿಜಯಪುರ ಜಿಲ್ಲೆಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಸರ್ಕಾರಕ್ಕೆ ತೊಗರಿ ಹಾನಿ ಕುರಿತು ಸರಿಯಾದ ವರದಿ ಸಲ್ಲಿಸದ ಕಾರಣ ಜಿಲ್ಲೆಯ ರೈತರು ಮದ್ಯಂತರ ಪರಿಹಾರದಿಂದ ವಂಚಿತರಾಗಿದ್ದಾರೆ ಪಕ್ಕದ ಗುಲ್ಬರ್ಗ ಜಿಲ್ಲೆಯ ರೈತರಿಗೆ ಮದ್ಯಂತರ ಪರಿಹಾರವನ್ನು 79.94 ಕೋಟಿಪರಿಹಾರ ಹಣ ಬಿಡುಗಡೆಯಾಗಿದೆ. ವಿಜಯಪರ ಜಿಲ್ಲೆಯ ರೈತರು ಪರಿಹಾರದಿಂದ ವಂಚಿತರಾಗಲು ಕೃಷಿ ಇಲಾಖೆಯ ಜಂಟಿ ನಿರ್ದೇಶಕರೆ ಕಾರಣ. ಮೊದಲೆ ಬರಗಾಲದಿಂದ ತತ್ತರಿಸಿದ ವಿಜಯಪರ ಜಿಲ್ಲೆಯ ರೈತರಿಗೆ ಜಂಟಿ ನಿರ್ದೇಶಕರು ಮಾಡಿದ ಪ್ರಮಾದದಿಂದ ಜಿಲ್ಲೆಯ ರೈತರನ್ನು ಹಾಳು ಮಾಡಿದ್ದಾರೆ 2023 ರಲ್ಲಿ ವಿಜಯಪುರ ಜಿಲ್ಲೆಗೆ ಕೃಷಿ ನಿರ್ದೇಶಕರಾಗಿ ಬಂದ ಮೇಲೆ ಕರ್ತವ್ಯದ ಮೇಲೆ ಸರಿಯಾಗಿ ಕಛೇರಿಯಲ್ಲಿ ಲಭ್ಯವಿಲ್ಲ ಕೇವಲ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ ಇದೆ ಕಾರಣಕ್ಕಾಗಿ ಇವರು ಸರಿಯಾಗಿ ವರದಿ ಕಳುಹಿಸಿರುವುದಿಲ್ಲ ಮತ್ತು ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತರದೆರಜೆ ಹಾಕದೆ ಅನಧಿಕೃತವಾಗಿ ನಿಯಮ ಬಾಹಿರ ರಜೆಗೆ ತೆರಳಿದ್ದಾರೆ. ಒಟ್ಟು ಇವರು ಒಟ್ಟು ರಜೆ ತೆರಳಿದ್ದು 258 ದಿನಗಳು ಇದರಲ್ಲಿ 16/08/2023 ರಿಂದ 14/10/2023ರ ವರೆಗೆ 60 ದಿನಗಳ ಪರಿವರ್ತಿತರಜೆ ಹಾಗೂ 15/10/2023 ರಿಂದ30/04/2024ರ ವರೆಗೆ 198 ದಿನಗಳ ವರೆಗೆ ಗಳಿಕೆ ರಜೆ ಹೀಗೆ 258 ದಿನಗಳ ವರೆಗೆ ಹೇಳದೆ ಕೇಳದೆ ಮೇಲಾಧಿಕಾರಿಗಳ ಮುಲಾಜಿಲ್ಲದೆರಜೆ ಹೋಗಿ ಬಂದ ನಂತರ ದಿನಾಂಕ 27/08//2024 ರಂದು ಸಂಯುಕ್ತರಜೆ ಮಂಜೂರು ಮಾಡುವಂತೆ ಕೃಷಿ ಇಲಾಖೆ ಆಯುಕ್ತರು ಬೆಂಗಳೂರು ಇವರಿಗೆ ಪತ್ರಕಳುಹಿಸಿ ವಿನಂತಿಸಿಕೊಂಡಿದ್ದಾರೆ ಇವರ ಈ ರೀತಿಯಧೋರಣೆ ನೋಡಿದರೆ ಅನಧಿಕೃತವಾಗಿ ಹೋಗಿರುವ ರಜೆಯ ದಿನಗಳನ್ನು ಮುಚ್ಚಿ ಹಾಕಿ ಅವರು ಮಾಡಿದತಪ್ಪನ್ನು ಮುಚ್ಚಿ ಹಾಕಲು ಹುನ್ನಾರ ನಡೆಸಿದ್ದಾರೆ. ಈ ರೀತಿ ಸರ್ಕಾರಕ್ಕೆ ಮೋಸ ಮಾಡಿದ ಮತ್ತುರೈತರನ್ನು ಪರಿಹಾರದಿಂದ ವಂಚಿತರನ್ನಾಗಿ ಮಾಡಿದ ಕೃಷಿ ಇಲಾಖೆಯಜಂಟಿ ನಿರ್ದೇಶಕರನ್ನು ಸೇವೆಯಿಂದಕೂಡಲೆ ವಜಾಗೊಳಿಸಬೇಕು ಒಂದು ವೇಳೆ ಇವರು ಕೋರಿದ ರಜೆ ಮಂಜೂರಾತಿಯ ಪತ್ರದ ಮೇಲೆ ರಜೆ ಮಂಜೂರು ಮಾಡಿದ್ದೆ ಆದರೆ ಕೃಷಿ ಇಲಾಖೆಯ ಆಯುಕ್ತರ ಕಛೇರಿ ಮುಂದೆ ಧರಣಿ ಸತ್ಯಾಗ್ರಹ ಕುಳಿತುಕೊಳ್ಳುವುದರೊಂದಿಗೆ ಅಧಿಕಾರಿಗಳ ವಿರುದ್ಧ ಮಾನ್ಯ ಕರ್ನಾಟಕ ಉಚ್ಚನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವದೆಂದು ಅಖಂಡ ಕರ್ನಾಟಕ ರೈತ ಸಂಘದರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಎಚ್ಚರಿಕೆ ನೀಡಿದ್ದಾರೆ.