ರಾಷ್ಟ್ರಮಟ್ಟದಲ್ಲಿ ವಿಜೇತರಾದರೆ ವೇತನ ಬಡ್ತಿಗೆ ಒತ್ತಾಯ: ಜುಮ್ಮಣ್ಣನವರ್
ಕೊಪ್ಪಳ 08 : ಕ್ರೀಡೆಗಳು ಉತ್ತಮ ಆರೋಗ್ಯಕ್ಕೆ ಸಹಕಾರಿ. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಕ್ರೀಡಾಸಕ್ತಿ ಪೋಷಿಸಿ, ಕ್ರೀಡಾಪಟುಗಳನ್ನು ತಯಾರು ಮಾಡುವ ದೈಹಿಕ ಶಿಕ್ಷಣ ಶಿಕ್ಷಕರು ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದರೆ ಅವರ ವೇತನ ಬಡ್ತಿಗಾಗಿ ಸರಕಾರಕ್ಕೆ ಸರಕಾರಿ ನೌಕರರ ಸಂಘದಿಂದ ಒತ್ತಾಯಿಸಲಾಗುವುದು ಎಂದು ರಾಜ್ಯ ಸರಕಾರಿ ನೌಕರರ ಸಂಘದ ಉಪಾಧ್ಯಕ್ಷ ನಾಗರಾಜ ಜುಮಣ್ಣನವರ್ ಭರವಸೆ ನೀಡಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಪ್ರಥಮ ಬಾರಿಗೆ ಜರುಗಿದ ಕೊಪ್ಪಳ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.ಇದುವರೆಗೂ ದೈಹಿಕ ಶಿಕ್ಷಕರು ಆಟೋಟಗಳನ್ನು ನಡೆಸಿ, ಕ್ರೀಡಾಪಟುಗಳಿಗೆ ವೇದಿಕೆ ನೀಡುತ್ತಿದ್ದರು. ಈಗ ಮೊದಲ ಸಲ ಅವರಿಗಾಗಿಯೇ ಕ್ರೀಡಾಕೂಟ ನಡೆಯುತ್ತಿದ್ದು, ದೈಹಿಕ ಶಿಕ್ಷಕರ ಆಟೋಟಗಳನ್ನು ನೋಡುವ ಅವಕಾಶ ಲಭಿಸಿದಂತಾಗಿದೆ. ಇಂಥ ಕ್ರೀಡಾಕೂಟಗಳು ಹೆಚ್ಚಾಗಲಿ, ಆ ಮೂಲಕ ದೈಹಿಕ ಶಿಕ್ಷಕರು ಮತ್ತಷ್ಟು ಸದೃಢವಾಗಲಿ ಎಂದು ಅವರು ಆಶಿಸಿದರು. ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ.ಬಸವರಾಜ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಈ ವೇಳೆ ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಎಅ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬ್ಗೌಡರ್, ಸರಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಶಿವಪ್ಪ ಜೋಗಿ, ಕರ್ನಾಟಕ ಸರಕಾರಿ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ನಾಗರಾಜ ಕುಷ್ಟಗಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಕ್ರೀಡಾ ಕಾರ್ಯದರ್ಶಿ ಮಂಜುನಾಥ ಆರೆಂಟನೂರ, ಕುಷ್ಟಗಿ, ಕೊಪ್ಪಳ, ಯಲಬುರ್ಗಸ ಹಾಗೂ ಗಂಗಾವತಿ ತಾಲೂಕು ದೈಹಿಕ ಶಿಕ್ಷಣ ಪರೀವೀಕ್ಷಕರಾದ ಸರಸ್ವತಿ, ವೀರನಗೌಡ, ವೀರೇಶ ಅಂಗಡಿ, ಉಮಾದೇವಿ ಇತರರು ಇದ್ದರು. ಬಸವರಾಜ ಬಂಡಿಹಾಳ ವಂದಿಸಿದರು.