ಗಾಂಧಿ ಭವನ ಉದ್ಘಾಟನೆಗೆ ಆಗ್ರಹ

Demand for inauguration of Gandhi Bhavan

ಧಾರವಾಡ 15: ಇತ್ತೀಚೆಗೆ ಬೆಳಗಾವಿಯಲ್ಲಿ 1924ರಲ್ಲಿ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ‘ಬೆಳಗಾವಿ ಕಾಂಗ್ರೆಸ್ 100 ಮಹಾ ಅಧಿವೇಶನ’ ಸವಿನೆನಪಿಗಾಗಿ ಅದ್ದೂರಿ ಕಾರ್ಯಕ್ರಮ ಆಯೋಜಿಸಿ ರಾಷ್ಟ್ರಪಿತ ಮಹಾತ್ಮಾಗಾಂಧೀಜಿಯವರು ದೇಶದ ಸ್ವಾತಂತ್ರ್ಯಕ್ಕಾಗಿ ಮಾಡಿದ ಅಂಹಿಸಾತ್ಮಕ ಚಳುವಳಿ, ತ್ಯಾಗ, ಬಲಿದಾನ ಸ್ಮರಿಸಿ ಅವರಿಗೆ ಗೌರವ ಸಲ್ಲಿಸಿದ್ದು ಇಡೀ ದೇಶವೆ ಹೆಮ್ಮೆ ಹಾಗೂ ಅಭಿಮಾನ ಪಡುವ ಸಂಗತಿಯಾಗಿದೆ. 

ಈ ನಿಟ್ಟಿನಲ್ಲಿ ವಿದ್ಯಾಕಾಶಿ ಧಾರವಾಡದಲ್ಲಿ ಗಾಂಧಿತತ್ವ, ಸಿದ್ಧಾಂತ, ಅವರ ಜೀವನ-ಸಾಧನೆ ಇತ್ಯಾದಿ ಚಟುವಟಿಕೆ ಹಮ್ಮಿಕೊಂಡು ಮುಂದಿನ ಪೀಳಿಗೆಗೆ ಕಟ್ಟಿಕೊಡುಲು ಅನುಕೂಲವಾಗುವ ದಿಸೆಯಲ್ಲಿ ಸರಕಾರ‘ಗಾಂಧಿ ಭವನ’ ನಿರ್ಮಿಸಲು ಯೋಜಿಸಿ, ಸದರಿಕಟ್ಟಡ ನಿರ್ಮಾಣ ಕಾಮಗಾರಿಯನ್ನು ನಗರದ ಹೊಸ ಬಸಸ್ಟ್ಯಾಂಡ ಹಿಂದುಗಡೆ ಸುಮಾರು 10 ವರ್ಷಗಳ ಹಿಂದೆಯೇ ಪ್ರಾರಂಭಿಸಿದೆ. ಆದರೆ ಅದು ಇನ್ನೂವರೆ ಉದ್ಘಾಟನೆಗೊಳ್ಳದಿರುವುದು ವಿಪರ್ಯಾಸದ ಸಂಗತಿ. 

ಈ ರೀತಿ ಕಾಲಮಿತಿ ಇಲ್ಲದೆ ಆಮೆಗತಿಯಲ್ಲಿ ನಡೆಯುತ್ತಿರುವ ಈ ‘ಗಾಂಧಿ ಭವನ’ದ ಕೆಲಸ ಅವಲೋಕಿಸಿದರೆ ಇದರಲ್ಲಿ ಅಧಿಕಾರಿಗಳ ಜಡತ್ವ, ಬೇಜವಾಬ್ದಾರಿ, ಬದ್ಧತೆ ಎದು ್ದಕಾಣುತ್ತದೆ. ಇದು ಗಾಂಧಿತತ್ವ, ವಿಚಾರಗಳಿಗೆ ವೈರುಧ್ಯವಾಗಿದೆ ಹಾಗೂ ಗಾಂಧೀಜಿಯವರಿಗೆ ಮಾಡುವ ಅಪಮಾನದಂತಿದೆ. ಇದು ಅವಳಿ ನಗರದ ಜನತೆಗೆ ಬಹಳಷ್ಟು ನಿರಾಶೆ ಉಂಟುಮಾಡಿದೆ ಹಾಗೂ ಆಕ್ರೋಶಕ್ಕೆ ಗುರಿಯಾಗಿದೆ. ಕೇವಲ ಗಾಂಧಿತತ್ವ, ಸಿದ್ಧಾಂತ ಕುರಿತು ಮಾತನಾಡಿದರೆ ಸಾಲದು ಅದು ಕೃತಿಯಲ್ಲಿಯೂ ಇರಬೇಕು. 

ಆದ್ದರಿಂದ, ರಾಜ್ಯ ಸರಕಾರ ಕೂಡಲೇ ಇದೆ ಜನೇವರಿ 30 ರಂದು ಗಾಂಧೀಜಿಯವರ ಸ್ಮರಣೋತ್ಸವದಂದು ಈ ‘ಗಾಂಧಿ ಭವನ’ ಉದ್ಘಾಟನೆ ಮಾಡಬೇಕು, ಒಂದು ವೇಳೆ ಈ ಕುರಿತು ನಿರ್ಲಕ್ಷ್ಯ ಧೋರಣೆತೋರಿದರೆ 2025 ಜನೇವರಿ 30 ರಿಂದ ಗಾಂಧೀವಾದಿಗಳು ಸಂಘ, ಸಂಸ್ಥೆಗಳು ಹಾಗೂ ನಾಗರಿಕರೊಂದಿಗೆ ‘ಗಾಂಧಿ ಭವನ’ ಉದ್ಘಾಟನೆಯಾಗುವವರೆಗೂ ನಿರಂತರ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಜನತಾದಳ (ಸಂಯುಕ್ತ) ಜೆಡಿ(ಯು) ಪಕ್ಷವು ಹೇಳದೆ