ಪ್ರವರ್ಗ 2ಎ ಮೀಸಲಾತಿ ನೀಡಲು ತಕ್ಷಣ ಕ್ರಮ ಕೈಗೊಳ್ಳಲು ಆಗ್ರಹ : ಮಣ್ಣಣ್ಣವರ
ಶಿಗ್ಗಾವಿ 08: ಬಸವಾದಿ ಶರಣರ ಸರ್ವರಿಗೂ ಸಮಬಾಳು ಸಮಪಾಲು ಪಾಲಿಸುವ ಮುಖ್ಯಮಂತ್ರಿಗಳು ಪಂಚಮಸಾಲಿ ಹಾಗೂ ಲಿಂಗಾಯತ ಉಪ ಪಂಗಡಗಳ ಪ್ರವರ್ಗ 2ಎ ಮೀಸಲಾತಿ ನೀಡಲು ತಕ್ಷಣ ಕ್ರಮ ಕೈಗೊಳ್ಳಲು ಶಿಗ್ಗಾವಿ ತಾಲೂಕ ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟಗಾರ ಮಂಜುನಾಥ ಮಣ್ಣಣ್ಣವರ ಆಗ್ರಹ ಮಾಡಿದರು. ಪಟ್ಟಣದ ಮಣ್ಣಣ್ಣವರ ಕಚೇರಿಯಲ್ಲಿ ಪಂಚ ಸೇನಾ ತಾಲೂಕ ಅಧ್ಯಕ್ಷ ಶಿವಾನಂದ ಕುನ್ನೂರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಮಂಜುನಾಥ ಮಾತನಾಡಿ ಪಂಚಮಸಾಲಿ ಹಾಗೂ ಲಿಂಗಾಯತ ಪಂಗಡಗಳ ಮಕ್ಕಳ ಶೈಕ್ಷಣಿಕ ಹಾಗೂ ಉದ್ಯೋಗ ಮೀಸಲಾತಿಗಾಗಿ ಮಾಜಿ ಸಚಿವ ದಿವಂಗತ ಎಸ್ ಆರ್ ಕಾಶಪ್ಪನವರ ಕಾಲದಿಂದ ಕೂಡಲಸಂಗಮ ಪಂಚಮಸಾಲಿ ಜಗದ್ಗುರು ಜಯ ಮೃತ್ಯುಂಜಯ ಮಹಾಸ್ವಾಮಿಗಳ ನೇತೃತ್ವದ ಪಂಚಮಸಾಲಿ ಹಾಗೂ ಲಿಂಗಾಯತ ಪಂಗಡಗಳ ಹಲವು ವರ್ಷಗಳ ನಿರಂತರ ಹೋರಾಟ ಮಾಡಿದರು ಆಡಳಿತ ಮಾಡಿದ ಸರಕಾರಗಳು ಮೀಸಲಾತಿ ನೀಡವಲ್ಲಿ ಹಿಂದೇಟು ಹಾಕುತ್ತಿವೆ.
ಕಳೆದ ಬಿಜೆಪಿಯ ಲಿಂಗಾಯತ ಮುಖ್ಯಮಂತ್ರಿ ಬೊಮ್ಮಾಯಿ ಸರ್ಕಾರ ತಾಯಿ ಮೇಲೆ ಪ್ರಮಾಣ ಮಾಡಿ ಮೋಸ ಮಾಡಿರುವುದು ಇತಿಹಾಸವಿದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಸವಾದಿ ಶರಣರ ಆಶಯಗಳನ್ನು ಸದಾ ಮಾತನಾಡುವ ಅವುಗಳನ್ನು ಜಾರಿಗೆ ತರುವಲ್ಲಿ ಶ್ರಮಿಸುವ ಮುಖ್ಯಮಂತ್ರಿಗಳಾಗಿದ್ದು ಬೆಳಗಾವಿ ಅಧಿವೇಶನದಲ್ಲಿ ನಮ್ಮ ಮೀಸಲಾತಿಗೆ ಕ್ರಮ ಕೈಗೊಳ್ಳಬೇಕು ಟ್ರ್ಯಾಕ್ಟರ್ ತೆಗೆದುಕೊಂಡು ಹೋರಾಟಕ್ಕೆ ಬರುತ್ತಿರುವ ಸಮುದಾಯದ ಹೋರಾಟವನ್ನು ಹತ್ತಿಕದಂತೆ ಸಂವಿಧಾನಾತ್ಮಕ ಅವಕಾಶ ಮಾಡಿಕೊಡಬೇಕು ಜನತೆ ತಮ್ಮ ನಿರ್ಣಯದಿಂದ ಅಭಿನಂದನೆ ಸಲ್ಲಿಸುವಂತೆ ಆಗಬೇಕು ಸರ್ವರಿಗೂ ಸಮಬಾಳು ಸಮಪಾಲು ಸರ್ಕಾರದ ಆಡಳಿತಕ್ಕೆ ಹೊಸ ಮರುಗು ಬರುವಂತೆ ನಿರ್ಣಯ ಕೈಗೊಳ್ಳುವಂತೆ ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಪಂಚಮಸಾಲಿ ಮೀಸಲಾತಿ ಹೋರಾಟಗಾರ ಮಂಜುನಾಥ ಮಣ್ಣಣ್ಣವರ ಮುಖ್ಯಮಂತ್ರಿಗಳಿಗೆ ಪತ್ರಿಕಾಗೋಷ್ಠಿ ಮುಖಾಂತರ ಅಗ್ರಹಪಡಿಸಿದ್ದಾರೆ. ರೈತನಾಯಕ ಸಮುದಾಯದ ಮುಖಂಡ ಬಸಲಿಂಗಪ್ಪ ನರಗುಂದ ಮಾತನಾಡಿ ಪದೇಪದೇ ನಿರ್ಲಕ್ಷ ಮಾಡುವುದು ಸರಿಯಲ್ಲ ಸಮಾನತೆಯ ತತ್ವ ಪಾಲಿಸುವ ಮುಖ್ಯಮಂತ್ರಿಗಳು ನಮ್ಮ ಬೇಡಿಕೆ ಈಡೇರಿಸಬೇಕೆಂದು ಹೇಳಿದರು. ಪಂಚ ಸೇನಾ ತಾಲೂಕ ಅಧ್ಯಕ್ಷಶಿವಾನಂದ ಕುನ್ನೂರ ಪಂಚಮಸಾಲಿ ಸಮಾಜದ ಯುವ ಮುಖಂಡರುಗಳಾದ ವಿಜಯ ಪಾಟೀಲ, ವಸಂತ ಬಡ್ಡಿ, ರಾಜು ಹಿಂಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.