ದೇವರಹಿಪ್ಪರಗಿಗೆ ಪ್ರತ್ಯೇಕ ಉಪನೋಂದಣಾಧಿಕಾರಿಗಳ ಕಛೇರಿ ಸ್ಥಾಪನೆಗೆ ಒತ್ತಾಯ
Demand for establishment of separate Sub-Registrar's office for Devarahippara
ದೇವರಹಿಪ್ಪರಗಿ 14 : ಪಟ್ಟಣದಲ್ಲಿ ಪ್ರತ್ಯೇಕ ಉಪನೋಂದಣಾಧಿಕಾರಿಗಳ ಕಛೇರಿ ಸ್ಥಾಪಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡ ಕ್ರಮಗಳ ಕುರಿತು ವಿಧಾನ ಪರಿಷತ್ತಿನ ಬಜೆಟ್ ಅಧಿವೇಶನದಲ್ಲಿ ಬುಧವಾರ ವಿಪ ಸದಸ್ಯ ಕೇಶವ ಪ್ರಸಾದ ಚುಕ್ಕೆ ಪ್ರಶ್ನೆ-787(905)ರಡಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಪ್ರಶ್ನಿಸಿದರು. ದೇವರಹಿಪ್ಪರಗಿ ತಾಲೂಕು ಕೇಂದ್ರವಾಗಿದ್ದು, ಉಪನೋಂದಣಾಧಿಕಾರಿಗಳ ಕಛೇರಿಗಾಗಿ ಇನ್ನು ಸಿಂದಗಿ ಅವಲಂಬಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೆ.
ದೇವರ ಹಿಪ್ಪರಗಿಯಲ್ಲಿ ಪ್ರತ್ಯೇಕ ಉಪನೋಂದಣಾಧಿಕಾರಿಗಳ ಕಛೇರಿ ಸ್ಥಾಪಿಸಲು ಸರ್ಕಾರ ಕೈಗೊಂಡ ಕ್ರಮಗಳು ಯಾವುವು. ಯಾವ ಕಾಲಮಿತಿಯಲ್ಲಿ ಪ್ರತ್ಯೇಕ ಉಪನೋಂದಣಾಧಿಕಾರಿಗಳ ಕಛೇರಿ ಸ್ಥಾಪಿಸಲಾಗುವುದು. ಉಪನೋಂದಣಾಧಿಕಾರಿಗಳ ಕಛೇರಿ ಸ್ಥಾಪನೆಗೆ ಜಾಗ ಗುರುತಿಸಲಾಗಿದೆ ಎಂದು ಕೇಶವ ಪ್ರಸಾದ ಪ್ರಶ್ನಿಸಿದರು. ಕಂದಾಯ ಸಚಿವ ಕೃಷ್ಣ ಬೈರೇಗೌಡ ಉತ್ತರಿಸಿ. ಈ ಕುರಿತು ಸರ್ಕಾರದ ಗಮನಕ್ಕೆ ಬಂದಿದೆ.
ನೂತನ ತಾಲೂಕಿನಲ್ಲಿ ಹೊಸದಾಗಿ ಉಪನೋಂದಣಾಧಿಕಾರಿಗಳ ಕಛೇರಿ ಸ್ಥಾಪನೆಗೆ ಆರ್ಥಿಕ ಇಲಾಖೆಯ ಸಮಾಲೋಚನೆಯೊಂದಿಗೆ ವಾರ್ಷಿಕ ರೂ 4 ಕೋಟಿಗಿಂತ ರಾಜ್ಯಸ್ವ ಸಂಗ್ರಹಣೆಯಾಗುವ ಉಪ ನೋಂದಣಿ ಕಛೇರಿಯಲ್ಲಿ ನೊಂದಣಿ ಯಾಗುವ ದಾಖಲೆಗಳ ಸಂಖ್ಯೆ/ವಹಿವಾಟುಗಳ ಸಂಖ್ಯೆಸ್ಥಾಪನೆ, ಹುದ್ದೆಗಳು ಮತ್ತು ಕಚೇರಿಗಳನ್ನು ಸ್ಥಳಾಂತರಗೊಳಿಸಿ ತರ್ಕಬದ್ಧಗೊಳಿಸಲು ಕ್ರಮ ವಹಿಸಲಾಗುತ್ತಿದೆ.
ದೇವರಹಿಪ್ಪರಗಿ ತಾಲೂಕಿಗೆ ಸಂಬಂಧಿಸಿದಂತೆ ನೋಂದಣಿ ಆಗುವ ದಸ್ತುವೇಜೆಗಳ ಸಂಖ್ಯೆ 700ಕ್ಕಿಂತಲೂ ಜಾಸ್ತಿ ಇದ್ದು, ರಾಜ್ಯಸ್ವ ಸಂಗ್ರಹಣೆಯೂ ಕೂಡಾ ರೂ 1 ಕೋಟಿಗಿಂತ ಹೆಚ್ಚಾಗಿರುತ್ತದೆ. ನೋಂದಣಿ ಮಹಾಪರೀವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು ದಿ.07.12.2018ರ ಅಧಿಕೃತ ಜ್ಞಾಪನದನ್ವಯ ನಿಗದಿಪಡಿಸಿರುವ ಎಲ್ಲಾ ಮಾನದಂಡಗಳನ್ನು ಪೂರೈಸಿರುವ ಬಗ್ಗೆ ಪರೀಶೀಲಿಸುವ ಸಂಬಂಧ ದಿ.09.11.2023ರ ಅಧಿಕೃತ ಜ್ಞಾಪನದನ್ವಯ ರಚಿಸಲಾಗಿರುವ ಉಪ ಸಮಿತಿಯಿಂದ ವರದಿ ಬಂದ ನಂತರ ಸೂಕ್ತ ಕ್ರಮ ವಹಿಸಲಾಗುವುದು ಎಂದು ಉತ್ತರಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 