ಶೀಘ್ರ ಸಮುದಾಯ ಅರೋಗ್ಯ ಕೇಂದ್ರ ನಿರ್ಮಾಣಕ್ಕೆ ಅಗ್ರಹ
Demand for early construction of community health centers
ಶೀಘ್ರ ಸಮುದಾಯ ಅರೋಗ್ಯ ಕೇಂದ್ರ ನಿರ್ಮಾಣಕ್ಕೆ ಅಗ್ರಹ
ನೇಸರಗಿ 01: ನೇಸರಗಿ ವಲಯ ಕೇಂದ್ರವಾಗಿದ್ದು, ಜಿಲ್ಲಾ ಪಂಚಾಯತ್ ಕ್ಷೇತ್ರವನ್ನು ಹೊಂದಿ, ಹೊಬ್ಬಳಿ ಮಟ್ಟದ ದೊಡ್ಡ ಗ್ರಾಮವಾಗಿ, ಪೊಲೀಸ್ ಸಿಪಿಐ ಠಾಣೆ ಹೊಂದಿದ್ದು, ಅನೇಕ ಗ್ರಾಮಗಳ ಮುಖ್ಯ ವ್ಯಾಪಾರ, ವಹಿವಾಟು ಕೇಂದ್ರವಾಗಿ ಬೆಳೆಯುತ್ತಿದ್ದು, ಆದರೆ ಈ ಭಾಗದ ಜನತೆಗೆ ಸರ್ಕಾರದ ಅರೋಗ್ಯ ಭಾಗ್ಯ ಮಾತ್ರ ಇನ್ನೂ ಒದಗಿಲ್ಲ ಇಷ್ಟು ದೊಡ್ಡ ಗ್ರಾಮವಾದರೂ ಜಾಗೆಯ ಸಮಸ್ಯೆಯಿಂದ ಸಮುದಾಯ ಅರೋಗ್ಯ ಕೇಂದ್ರದ ವ್ಯವಸ್ಥೆ ಆಗಿಲ್ಲ. ಆದರೆ ಕಳೆದ ಕೆಲವು ವರ್ಷಗಳ ಹಿಂದೆ ಇಲ್ಲಿನ ಎಪಿಎಮ್‌ಸಿ ಆವರಣದಲ್ಲಿ 2 ಎಕರೆ ಜಾಗೆ ಅರೋಗ್ಯ ಕೇಂದ್ರ ಮಾಡಲು ಎಪಿಎಮ್‌ಸಿ ಅಧಿಕಾರಿಗಳೊಂದಿಗೆ ಮಾತುಕತೆ ಅಗಿದ್ದು, ಅದನ್ನು ಪರೀಶೀಲನೆ ಮಾಡಿ ಅ ಇಲಾಖೆಯೊಂದಿಗೆ ಮಾತನಾಡಿ ಅರೋಗ್ಯ ಇಲಾಖೆಗೆ ಪಡೆದು ಆದಷ್ಟು ಬೇಗ ಸಮುದಾಯ ಅರೋಗ್ಯ ಕೇಂದ್ರ ಪ್ರಾರಂಭಿಸಬೇಕೆಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಅವರಲ್ಲಿ ನೇಸರಗಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಯುವ ಮುಖಂಡ ಸಚಿನ ಪಾಟೀಲ, ಮಾಜಿ ಜಿ ಪಂ ಸದಸ್ಯ ನಿಂಗಪ್ಪ ಅರಿಕೇರಿ, ಅಡಿವಪ್ಪ ಮಾಳಣ್ಣವರ, ಬರಮ್ಮಣ್ಣ ಸತ್ತೇನ್ನವರ, ನಿಂಗಪ್ಪ ತಳವಾರ, ಚನಗೌಡ ಪಾಟೀಲ, ಸುರೇಶ ಅಗಸಿಮನಿ, ಪ್ರಕಾಶ ಮುಂಗರವಾಡಿ, ಯಲ್ಲಪ್ಪ ರೊಟ್ಟಿ, ಮಲ್ಲಪ್ಪ ಯತ್ತಿನಮನಿ ಜ್ಞಾನದೇವ್ಸೇ ತುಮರಗುದ್ದಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 