ಧಾರವಾಡ 04: ಅಭಿವೃದ್ಧಿ ದೃಷ್ಟಿಯಿಂದ ಹುಬ್ಬಳ್ಳಿ- ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಬೇಕು ಎಂದು ಹೋರಾಟ ಮಾಡುತ್ತಾ ಬಂದಿರುವವರಿಗೆ ಶಾಸಕ ವಿನಯ ಕುಲಕರ್ಣಿ ಅವರು ವಿಶೇಷ ಪ್ರಯತ್ನದ ಮೂಲಕ ಸಂತೋಷದ ಸುದ್ಧಿಯನ್ನು ಕೊಟ್ಟಿದ್ದಾರೆ. ಇವರ ನಿಂರತರ ಪ್ರಯತ್ನಕ್ಕೆ ಗೂ ಜಯ ಸಿಕ್ಕಂತೆ ಆಗಿದೆ. ಈಗಾಗಲೇ ಹೋರಾಟಗಾರರೊಂದಿಗೆ ಹಾಗೂ ಪಾಲಿಕೆ ಆಯುಕ್ತರೊಂದಿಗೆ ವಿಶೇಷ ಸಭೆ ನಡೆಸಿದ ಶಾಸಕ ವಿನಯ ಕುಲಕರ್ಣಿ ಅವರ ಪ್ರಯತ್ನ ಯಶಸ್ವಿಯಾಗಿದ್ದು, ಶುಕ್ರವಾರದ ದಿನ ನಡೆದ ಪಾಲಿಕೆ ಸಮಾನ್ಯ ಸಭೆಯಲ್ಲಿ ಸದಸ್ಯರಿಂದ ಸರ್ವಾನುಮತದಿಂದ ಠರಾವು ಪಾಸ್ ಮಾಡಲಾಗಿದೆ. ಇದು ಅವಳಿನಗರ ಅಭಿವೃದ್ಧಿಗೆ ಶಾಸಕ ವಿನಯ ಕುಲಕರ್ಣಿ ಅವರಿಂದ ಬಹುದೊಡ್ಡ ಕೊಡುಗೆಯಾಗಿದೆ.
ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಕೂಗು ಹೆಚ್ಚಿದೆ. ಈ ನಿಟ್ಟಿನಲ್ಲಿ ಸಮರ್ಥರಾದವರಿಗೆ ಕ್ಯಾಬಿನೇಟನಲ್ಲಿ ಸ್ಥಾನಮಾನ ಸಿಗುವ ನೀರಿಕ್ಷೆ ಇದೆ. ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಧಾರವಾಡ ಗ್ರಾಮೀಣ ಶಾಸಕ ಹಾಗೂ ನಿಗಮ ಮಂಡಳಿ ಅಧ್ಯಕ್ಷರು ಆಗಿರುವ ವಿನಯ ಕುಲಕರ್ಣಿ ಹೇಳಿದರು. ಕಿತ್ತೂರುನಲ್ಲಿ ಧಾರವಾಡ ಗ್ರಾಮೀಣ 71 ಕ್ಷೇತ್ರದ ಜನರೊಂದಿಗೆ ಜನಸ್ಪಂದನ ಕಾರ್ಯಕ್ರಮ ನಡೆಸಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಶಾಸಕರು, ರಾಜ್ಯದಲ್ಲಿ ಈಗಾಗಲೇ ಕೆಲಸ ಮಾಡಿರುವ ಸಚಿವರಿಗೆ ಬದಲಾವಣೆ ಅವಕಾಶ ಬಂದಿದೆ. ಹೀಗಾಗಿ ಅವಕಾಶ ಇರುವವರಿಗೆ ಕೊಡಲಿದ್ದಾರೆ ಎನ್ನುವ ಮಾತಿದೆ ಎಂದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೂ 2-3 ಹೆಸರು ಅಂತಿಮ ಹಂತದಲ್ಲಿದೆ. ಉಪಮುಖ್ಯಮಂತ್ರಿಗಳು ಸಚಿವರಾಗಿ ಕೆಲಸ ಮಾಡುತ್ತಿರುವುದರಿಂದ ಹೆಚ್ಚಿನ ಒತ್ತಡ ಆಗುತ್ತೆ. ಹೀಗಾಗಿ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲಿದ್ದಾರೆ ಎಂದು ತಿಳಿಸಿದರು. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಸಾಕಷ್ಟು ಆಗುತ್ತಿವೆ. ಗ್ಯಾರೆಂಟಿ ಯೋಜನೆಗಳಿಗೆ ಹಣ ಕೊಡುತ್ತಿರುವುದಿಂದ ಪ್ರಾರಂಭದಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿದ್ದವು. ಇದೀಗ ಕ್ಷೇತ್ರದಲ್ಲಿ ಅಭಿವೃದ್ಧಿ ಶುರುವಾಗಿದೆ ಎಂದರು.ಗ್ಯಾರಂಟಿ ಯೋಜನೆಗಳನ್ನು ಜನರು ಮೆಚ್ಚಿದ್ದಾರೆ. ಹೀಗಾಗಿ ಉಪಚುನಾವಣೆಯಲ್ಲಿ ನಮ್ಮ ಪಕ್ಷದ ಒಗ್ಗಟ್ಟು ಕೆಲಸ ಮಾಡಿದೆ. ಶಿಗ್ಗಾಂವಿ ಉಪಚುನಾವಣೆಯಲ್ಲಿ ನಾನು 100 ಕ್ಕೆ 100 ರಷ್ಟು ಹಗಲಿರುಳು ಶ್ರಮವಹಿಸಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿದ್ದೇವೆ ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದರು.
ಜನಸ್ಪಂದನ ಕಾರ್ಯಕ್ರಮಕ್ಕೆ ಹರಿದು ಬಂದ ಜನಸಗಾರ- ಕಿತ್ತೂರಿನಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮಕ್ಕೆ ಕ್ಷೇತ್ರದಿಂದ ಸುಮಾರು 700 ರಿಂದ 800 ಅರ್ಜಿಗಳು ಬಂದಿದ್ದು, ಶಾಸಕ ವಿನಯ ಕುಲಕರ್ಣಿ ಅವರು, ತಕ್ಷಣ ಸಭೆಯಲ್ಲಿ ಹಾಜರಿದ್ದ 29 ಇಲಾಖೆ ಅಧಿಕಾಗಳೊಂದಿಗೆ ಚರ್ಚಿಸಿ ಪರಿಹಾರ ಒದಗಿಸುವ ಕೆಲಸವನ್ನು ಶಾಸಕರು ಮಾಡಿದರು.
ಅಭಿವೃದ್ಧಿ ಎನ್ನುವುದು ಕೆವಲ ಹುಬ್ಬಳ್ಳಿ ಮಾತ್ರವಲ್ಲಾ. ಧಾರವಾಡವೂ ಆಗಬೇಕು ಎನ್ನುವುದು ನನ್ನ ಇಚ್ಚೆ. ಈ ನಿಟ್ಟಿನಲ್ಲಿ ಹೋರಾಟಗಾರರು ಹೋರಾಟ ಮಾಡುತ್ತಾ ಇದ್ದರು. ಅವರ ಜೋತೆಗೆ ನಾನು ಕಿತ್ತೂರಿನಲ್ಲಿ ಒಂದು ಸುತ್ತಿನ ಸಭೆ ನಡೆಸಿದ್ದೆ. ಪಾಲಿಕೆ ಆಯುಕ್ತರೊಂದಿಗೆ ಈ ಬಗ್ಗೆ ಚರ್ಚೆಸಿದ್ದೆ. ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಠರಾವು ಪಾಸ್ ಆಗಿದ್ದು, ನನ್ನ ಪ್ರಯತ್ನಕ್ಕೆ ಖುಷಿ ಕೊಟ್ಟಿದೆ. ಈ ಬಗ್ಗೆ ಸಿಎಂ ಜೋತೆಗೆ ಚರ್ಚೆ ಮಾಡಿರುವೆ. ಬೆಳಗಾವಿ ಅಧಿವೇಶನದಲ್ಲಿಯೂ ಇದನ್ನು ಸದನದ ಗಮನಕ್ಕೆ ತರುವೆ. ಅಭಿವೃದ್ಧಿಯೇ ನನ್ನ ಮೂಲಮಂತ್ರ.
ಮೀಸಲಾತಿ ಹೋರಾಟದ ವಿಚಾರದಲ್ಲಿ ಕೂಡಲ ಸಂಗಮದ ಜಯ ಮೃತ್ಯುಂಜಯ ಶ್ರೀಗಳು ಈ ಬಾರಿ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ಕೊಡುತ್ತೇವೆ. ಪಂಚಮಸಾಲಿ ಮಿಸಲಾತಿ ಹೋರಾಟದಲ್ಲಿ ನಾನು ಈ ಹಿಂದೆ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿರುವೆ. ಹಿಂದಿನ ಬೆಂಗಳೂರಿನಲ್ಲಿ ನಡೆದ ಅಧಿವೇಶನದಲ್ಲಿ ಚರ್ಚೆ ಮಾಡಲು ಅವಕಾಶ ಕೊಟ್ಟಿಲ್ಲಾ. ಸ್ವಾಮೀಜಿಗಳು ಸುಮಾರು 10 ಸಾವಿರ ಜನರನ್ನು ಸೇರಿಸಿ ಬೆಳಗಾವಿ ವಿಧಾನಸೌಧದ ಮುಂದೆ ಪ್ರತಿಭಟನೆ ಮಾಡಲು ನಿರ್ಧಾರ ಮಾಡಿದ್ದಾರೆ. ಪ್ರತಿಭಟನೆ ಮಾಡುವುದು ಅವರ ಹಕ್ಕು. ನನ್ನನ್ನು ಕರೆದರೆ ನಾನೂ ಹೋಗುವೆ. ಈ ಬಾರಿ ಸಿಎಂ ಜೋತೆಗೆ ಮಾತನಾಡಿಸಿ, ಶ್ರೀಗಳಿಗೆ ಅಧಿವೇಶನದಲ್ಲಿ ಚರ್ಚೆ ಮಾಡಲು ಅವಕಾಶ ಕೊಡಿಸುವೆ ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದರು.
ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಾದ ಅಪರ ಜಿಲ್ಲಾಧಿಕಾರಿ ಗೀತಾ.ಸಿ.ಡಿ, ಸಿಇಓ ಸ್ವರೂಪ ಟಿ.ಕೆ, ಧಾರವಾಡ ತಹಶೀಲ್ದಾರ ಹೂಗಾರ, ಕೆಎಂಎಫ್ ನಿರ್ದೆಶಕರಾದ ಶಿವಲೀಲಾ ವಿನಯ ಕುಲಕರ್ಣಿ, ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅರವಿಂದ ಏಗನಗೌಡರ, ಕಾಂಗ್ರೆಸ ಮುಖಂಡರಾದ ಚಣಬಸಪ್ಪ ಮಟ್ಟಿ,ಪರಮೇಶ ಕಾಳೆ, ನಂದೀಶ ನಾಯಕರ, ರೇಣುಕಾ ಕಳ್ಳಿಮನಿ, ಹಣಮಂತ ಮಾದರ, ಸಿದ್ದಪ್ಪ ಸಪ್ಪುರಿ, ಪ್ರಕಾಶ್ ಘಾಟಗೆ,ಈಶ್ವರ್ ಶಿವಳ್ಳಿ, ಸಂಜೀವ್ ಲಕಮನಹಳ್ಳಿ, ಸೇರಿದಂತೆ ಮುಂತಾದ ಮುಖಂಡರು, ಗ್ರಾಮೀಣ ಕ್ಷೇತ್ರದ ಜನರು ಉಪಸ್ಥಿತರಿದ್ದರು.