ಫಲಾನುಭವಿಗಳಿಗೆ ಸಿಲಿಂಡರ್ ಪರಿಕರ ವಿತರಣೆ

ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಮಂಜೂರಾದ 19 ಫಲಾನುಭವಿಗಳಿಗೆ ಸಿಲಿಂಡರ್ ಪರಿಕರಗಳನ್ನು ಶಾಸಕ ಡಿ.ಎಮ್.ಐಹೊಳೆ ವಿತರಿಸಿದ


ರಾಯಬಾಗ 26: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಹೆಣ್ಣು ಮಕ್ಕಳು ಸೌದೆೆಯನ್ನು ತಂದು ಅಡುಗೆ ಮಾಡಲು ಪಡುತ್ತಿರುವ ಕಷ್ಟವನ್ನು ಅರಿತು ಪ್ರತಿ ಬಿಪಿಎಲ್ ಕುಟುಂಬಗಳಿಗೆ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ  ಉಚಿತ ಸಿಲಿಂಡರ್ಗಳನ್ನು ನೀಡಲಾಗುತ್ತಿದೆ ಶಾಸಕ ಡಿ.ಎಮ್.ಐಹೊಳೆ ಹೇಳಿದರು.

ಮಂಗಳವಾರ ತಾಲೂಕಿನ ಬಾವನಸೌಂದತ್ತಿ ಗ್ರಾಮದ ಗ್ರಾಮ ಪಂಚಾಯತಿ ಆವರಣದಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಮಂಜೂರಾದ 19 ಫಲಾನುಭವಿಗಳಿಗೆ ಸಿಲಿಂಡರ್ ಪರಿಕರಗಳನ್ನು ವಿತರಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದ ಜನರು ಅಡುಗೆ ಮಾಡಲು ಅರಣ್ಯ ಕಟ್ಟಿಗೆಗಳನ್ನು ಕಡಿಯದೇ ಈಗ ನೀಡಿರುವ ಸಿಲಿಂಡರ್ಗಳ ಮೇಲೆ ಅಡುಗೆ ಮಾಡಿಕೊಂಡು ಕಾಡನ್ನು ಉಳಿಸಲು ಎಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು. 

ಗ್ರಾ.ಪಂ.ಅಧ್ಯಕ್ಷ ಅಜೀತ ಖೆಮಲಾಪೂರೆ, ಉಪಾಧ್ಯಕ್ಷೆ ಶೋಭಾ ಶಿಂದೆ, ತಾತ್ಯಾಸಾಬ ಕಾಟೆ, ಅನೀಲ ಹಂಜೆ, ಅಂಕುಶ ಜಾಧವ, ಶ್ರೀಮಂತ ಹಂಜೆ, ದಶರಥ ಕಾಟೆ, ಶಾಂತಿನಾಥ ಪಾಟೀಲ, ಶ್ರೀಕಾಂತ ಮಂಗಸೂಳೆ, ಗಂಗಾರಾಮ ಕುಂಬಾರ, ಬಾಹುಬಲಿ ಮಗದುಮ್ಮ, ಚಿದಾನಂದ ಮಂಗಸೂಳೆ, ರಾವಸಾಬ ಕಾಟೆ ಹಾಗೂ ಗ್ರಾ.ಪಂ.ಸದಸ್ಯರು, ಫಲಾನುಭವಿಗಳು ಮತ್ತು ಗ್ರಾಮಸ್ಥರು ಇದ್ದರು.