ಬಾಗಲಕೋಟೆ05: ಜಿಲ್ಲೆಗೆ ಅಪ್ಪಳಿಸಿದ ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾದ ಸಂತ್ರಸ್ತರಿಗಾಗಿ ಸರಕಾರದ ಜೊತೆಗೆ ಕೈಜೋಡಿಸಿದ ಅನೇಕ ಸಂಘ ಸಂಸ್ಥೆಗಳಲ್ಲಿ ಹೋಟೆಲ್ ಮಾಲಿಕರ ಸಂಘವು ಕೂಡಾ ಒಂದಾಗಿದ್ದು, ಸಂತ್ರಸ್ತರಿಗೆ ಉಪಯುಕ್ತವಾದ ವಸ್ತುಗಳ ಕಿಟ್ ವಿತರಿಸಿತು.
ದಾವಣಗೆರೆ ಹಾಗೂ ಬಾಗಲಕೋಟೆ ಹೋಟೆಲ್ ಮಾಲಿಕರ ಸಂಘ ಜಂಟಿಯಾಗಿ ನಗರದ ಧನಲಕ್ಷ್ಮೀ ಪ್ಯಾರಾಡಾಯಿಸ್ನಲ್ಲಿ ಪ್ರವಾಹಕ್ಕೆ ತುತ್ತಾದ ಸಂತ್ರಸ್ತರಿಗೆ ಉಪಯುಕ್ತ ಕಿಟ್ ನೀಡಿ ಮಾತನಾಡಿದ ಡಾವಣಗೇರಿ ಹೋಟೆಲ್ ಮಾಲಿಕರ ಸಂಘದ ಕಾರ್ಯದಶರ್ಿ ಬಿ.ಕೆ.ಸುಭ್ರಮಣ್ಯ ಸಂತ್ರಸ್ತರಿಗೆ ಸಂಪೂರ್ಣವಾಗಿ ಸುರಕ್ಷತೆ ಹಾಗೂ ರಕ್ಷಣೆ ನೀಡಲು ಆಗದಿದ್ದರೂ ಸಾಂತ್ವನ ಹೇಳುವ ದೃಷ್ಠಿಯಿಂದ ಅವರಿಗೆ ಮನೋದೈರ್ಯ ತುಂಬುವ ಉದ್ದೇಶದಿಂದ ಕೈಲಾದಷ್ಟು ನೆರವು ನೀಡಲಾಗುತ್ತಿದೆ ಎಂದರು.
ಸಂತ್ರಸ್ತರಿಗೆ ವಿತರಿಸುವ ಪ್ರತಿಯೊಂದು ಕಿಟ್ನಲ್ಲಿ ಪಾತ್ರೆ, ಬಟ್ಟೆ, ಉಪಯುಕ್ತ ಸಾಮಗ್ರಿಗಳ ಸೇರಿದಂತೆ ಒಟ್ಟು 2 ಸಾವಿರ ರೂ.ಗಳ ಬೆಲೆೆಯ ಕಿಟ್ಗಳನ್ನು ತಯಾರಿಸಲಾಗಿದ್ದು, ಇದರಿಂದ ಅವರಿಗೆ ಸ್ವಲ್ಪಮಟ್ಟಿಗೆಯಾದರೂ ಸಹಕಾರಿಯಾಗಬಹುದು ಎಂದರು. ಜನರಿಂದ ಹೋಟೆಲ್ ಉದ್ದಿಮೆಗಳು ಅಭಿವೃದ್ದಿಗೊಳ್ಳುತ್ತಿದ್ದು, ಅವರಿಗೆ ಇಂತಹ ಸಂದರ್ಭದಲ್ಲಿ ಸಹಾಯ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದರು. ನಂತರ ಹುನಗುಂದ ತಾಲೂಕಿನ ಕಮತಗಿ ಹಾಗೂ ರಾಮಥಾಳ ಪ್ರವಾಹ ಪೀಡಿತ ಗ್ರಾಮಗಳಿಗೆ ತೆರಳಿ ಕಿಟ್ ವಿತರಿಸಿದರು.
ಈ ಸಂದರ್ಭದಲ್ಲಿ ದಾವಣಗೇರಿ ಹಾಗೂ ಬಾಗಲಕೋಟೆ ಹೋಟೆಲ್ ಮಾಲಿಕರ ಸಂಘದ ಪದಾಧಿಕಾರಿಗಳಾದ ವಿಶ್ವನಾಥ ದಾಸ, ರವಿ ಪೂಜಾರಿ, ಗಿರೀಶ ಉಡುಪಿ, ಬಸವರಾಜ ಕೊಡಗಲಿ, ಎಸ್.ವಾಯ್.ಜಕಾತಿ, ಸಿ.ಬಿ.ಹೆಗಡೆ, ಚಂದ್ರಶೇಖರ ಶೆಟ್ಟಿ, ನೀಲಪ್ಪ ಬೇವೂರ ಸೇರಿದಂತೆ ಇತರರು ಇದ್ದರು