ಲೋಕದರ್ಶನ ವರದಿ
ಕೊಪ್ಪಳ 01: ದೇಶದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸಕರ್ಾರವು ಮಹಿಳೆಯರು ಹೊಗೆರಹಿತ ಅಡುಗೆ ತಯಾರಿಸಲು ಉಜ್ವಲ ಯೋಜನೆಯ ಮೂಲಕ ಗ್ಯಾಸ ಸಿಲಿಂಡರ್ ವಿತರಣೆ, ನಿರುದ್ಯೋಗಿಗಳು ಸ್ವಯಂ ಉದ್ಯೋಗ ಕೈಗೊಳ್ಳಲು ಮುದ್ರಾ ಯೋಜನೆ, ಸ್ಟಾರ್ಟ ಅಫ್, ಬೇಟಿ ಬಚಾವ್ ಬೇಟಿ ಪಡಾವ್ ಹಲವಾರು ಯೋಜನೆಗಳನ್ನು ರೂಪಿಸಿದ್ದು ಅವುಗಳನ್ನು ಬಿಜೆಪಿ ಕಾರ್ಯಕರ್ತರು ಅರ್ಹರರನ್ನು ಗುರುತಿಸಿ ಸೌಲಭ್ಯ ಪಡೆದುಕೊಳ್ಳುವಂತೆ ಮಾಡಬೇಕೆಂದು ಸಂಸದರಾದ ಕರಡಿ ಸಂಗಣ್ಣ ಹೇಳಿದರು.
ಅವರು ಕೊಪ್ಪಳನಗರದ ಬನ್ನಿಕಟ್ಟೆ ಏರಿಯಾದಲ್ಲಿ ಜರುಗಿದ ಕಮಲ ಜ್ಯೋತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೊಪ್ಪಳಲೋಕಸಭಾ ಕ್ಷೇತ್ರದಲ್ಲಿಯೂ ರೈಲ್ವೆಯ ಇಲಾಖೆಯಿಂದ ಗೇಟ್ ನಂ 62 ಲೋಕಾರ್ಪಣೆಗೊಳ್ಳಲಿದೆ.ಗಣೇಶ ನಗರಕ್ಕೆಹೋಗುವ ಗೇಟ್ ನಂ 63 ಕ್ಕೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಗೇಟ್ 65 &66 ಅನುದಾನಬಿಡುಗಡೆಯಾಗಿದ್ದು ಶೀಘ್ರದಲ್ಲಿಯೇ ಟೆಂಡರ ಕರೆಯಲಾಗುವದು. ಕೊಪ್ಪಳನಗರದ ಮುಖ್ಯರಸ್ತೆಯ ಕಾಮಗಾರಿಗೆ ಕೇಂದ್ರಸಕರ್ಾರ 80ಕೋಟಿಅನುದಾನ ನೀಡಲಾಗಿತ್ತು ಅದು ಮುಕ್ತಾಯ ಹಂತದಲ್ಲಿದೆ ಎಂದು ಮಾತನಾಡಿದರು.
ನಮ್ಮ ಭಾಗದ ಜನರು ಉದ್ಯೋಗಕ್ಕೆ ವಿದ್ಯಾಭ್ಯಾಸ ಅಥವಾ ಪ್ರವಾಸಕ್ಕೆತೆರಳಲು ಅನುಕೂಲವಾಗುವ ನಿಟ್ಟಿನಲ್ಲಿ ಕೊಪ್ಪಳದಲ್ಲಿಯೇ ಪಾಸಪೊರ್ಟ ಸೇವಾ ಕೇಂದ್ರ ತೆರೆಯಲಾಗಿದೆ ಎಂದು ಮಾತನಾಡಿದರು. ಪುಲಮಾ ದಾಳಿಗೆ ಪ್ರತಿಕಾರವಾಗಿ 40 ವೀರ ಸೈನಿಕರನ್ನು ಬಲಿಪಡೆದು 300ಕ್ಕೂ ಹೆಚ್ಚು ಉಗ್ರಗಾಮಿಗಳನ್ನು ಏರಸ್ಟ್ರೈಕ್ ಮೂಲಕ ಸದೆಬಡೆದ ಸೈನಿಕರಿಗೆ ಅಭಿನಂದನೆಗಳನ್ನು ಎಲ್ಲರ ಪರವಾಗಿ ತಿಳಿಸಿದರು.
ರಾಘವೇಂದ್ರಮಠದ ವ್ಯವಸ್ಥಾಪಕರಾದ ಜಗಣ್ಣ ಇದ್ದರು ಬಿಜೆಪಿ ಹಿರಿಯ ಮುಖಂಡರಾದ ಡಾ.ಕೆ.ಜಿ.ಕುಲಕಣರ್ಿ,ಅಪ್ಪಣ್ಣ ಪದಕಿ, ಲಕ್ಷ್ಮೀ ಚಂದ್ರಶೇಖರ್, ರಾಘವೇಂದ್ರ ನರಗುಂದ, ಕೊಪ್ಪಳ ಲೋಕಸಭಾ ಫಲಾನುಭವಿಗಳ ಸಂಪರ್ಕದ ಸಂಚಾಲಕರಾದ ವೀಣಾ ಬನ್ನಿಗೋಳ, ಮುಖಂಡರಾದ ಮಂಜುನಾಥ ಹಳ್ಳಿಕೇರಿ, ಮಧುರಾ ಕರ್ಣಂ,ಹೇಮಲತಾ ನಾಯಕ, ನಗರಸಭೆಯ ಸದಸ್ಯರಾದ ಸವರ್ೆಶ ಬನ್ನಿಕೊಪ್ಪ, ರಾಜಶೇಖರಆಡೂರ, ಪ್ರಲ್ಲಾದ್ ಬನ್ನಿಗೊಳ, ನಗರ ಅಧ್ಯಕ್ಷ ಸುನೀಲ ಹೆಸರೂರು ಮುಂತಾದವರು ಉಪಸ್ಥಿತರಿದರು.