ಡೆಲಿವರಿ ಬಾಯ್ಸ್ ಗಳನ್ನು ದರೋಡೆ ಮಾಡಿದ ದುಷ್ಕರ್ಮಿಗಳು

ಬೆಂಗಳೂರು, ಜ 9, ನಗರದಲ್ಲಿ ದುಷ್ಕರ್ಮಿಗಳು ಡೆಲಿವರಿ ಬಾಯ್ಸ್​ಗಳನ್ನು ಕೇಂದ್ರಿಕರಿಸಿಕೊಂಡು  ದರೋಡೆ ಮಾಡಿರುವ ಪ್ರಕರಣಗಳು ವರದಿ ಆಗಿವೆ.ಅಧಿಕ‌ ಮೊತ್ತದ ಆಹಾರ ಆರ್ಡರ್​​ ಮಾಡಿ, ಅದನ್ನು ಡೆಲಿವರಿ ಮಾಡಲು ಬಂದಿದ್ದ  ಸಿಬ್ಬಂದಿಯಿಂದ ಹಣ, ಮೊಬೈಲ್ ಹಾಗೂ ಪರ್ಸ್​ ದೋಚಿ ಪರಾರಿಯಾಗಿದ್ದಾರೆ. ಇನ್ನೊಂದೆಡೆ ದುಷ್ಕರ್ಮಿಗಳು ಸಿಟಿ ಕ್ರೈಂ ಬ್ರಾಂಚ್​​ ಲೊಕೇಷನ್ ನೀಡಿ ನಾನ್ ವೆಜ್​​ ಫುಡ್​ ಆರ್ಡರ್​ ಮಾಡಿದ್ದಾರೆ. ಬಳಿಕ ಆರ್ಡರ್​​ ಡೆಲಿವರಿ ಮಾಡಲು ಬಂದ ಡೆಲಿವರಿ ಬಾಯ್​​ ಸಚಿನ್​ ಅನ್ನು ಸುಬ್ರಹ್ಮಣ್ಯಪುರದ ನಿರ್ಜನ‌ ಪ್ರದೇಶಕ್ಕೆ ಕರೆಸಿದ್ದಾರೆ. ಅಲ್ಲಿ ಮಚ್ಚು ರಾಡ್​ನಿಂದ ಹಲ್ಲೆ ನಡೆಸಿ ಸಚಿನ್​ ಅವ ರ ಮೊಬೈಲ್, ಪರ್ಸ್​​ ಹಾಗೂ ಚೈನ್​​​ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಕಾಟನ್​ಪೇಟೆಯಲ್ಲಿ ಮಧು ಎಂಬಾತನ‌ ಮೇಲೆ ಹಾಗೂ ಸುಬ್ರಹ್ಮಣ್ಯ ಪುರದಲ್ಲಿ ಸಚಿನ್ ಎಂಬಾತನ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ್ದಾರೆ.ಸದ್ಯ ಎರಡು ಪ್ರಕರಣಗಳ ಆರೋಪಿಗಳಿಗಾಗಿ ಕಾಟನ್ ಪೇಟೆ ಮತ್ತು ಸುಬ್ರಹ್ಮಣ್ಯಪುರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.